ನವದೆಹಲಿ:ಕೋವಿಡ್‌ ಚಿಕಿತ್ಸೆಗೆ ಅಲೋಪಥಿಯಲ್ಲಿ ಪರಿಣಾಮಕಾರಿಯಾದ ಔಷಧಗಳು ಲಭ್ಯವಿಲ್ಲದೇ ಲಕ್ಷಾಂತರ ಮಂದಿ ಸಾಯುತ್ತಿರುವುದಾಗಿ ಕಿಡಿಕಾರಿದ್ದ ಬಾಬಾ ರಾಮ್‌ದೇವ್‌ ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು ಕರೆಯುವ ಮೂಲಕ ಶುರುವಾಗಿರುವ ವಿವಾದ ತಾರಕಕ್ಕೇರುತ್ತಿದೆ.
ಒಂದೆಡೆ ಸ್ವಾತಂತ್ರ್ಯಾ ಪೂರ್ವದಲ್ಲಿ ಹುಟ್ಟಿಕೊಂಡಿರುವ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಾಬಾ ರಾಮ್‌ದೇವ್‌ ವಿರುದ್ಧ ಕಿಡಿ ಕಾರಿ ಒಂದು ಸಾವಿರ ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.
ಬಾಬಾ ರಾಮ್‌ದೇವ್‌ ವಿರುದ್ಧ ಒಂದೆಡೆ ಐಎಎಂ, ಕಾಂಗ್ರೆಸ್‌ ಮುಖಂಡರು ಸೇರಿದಂತೆ ಕೆಲವರು ತಿರುಗಿಬಿದ್ದಿದ್ದರೆ, ಬಾಬಾ ರಾಮ್‌ದೇವ್‌ ಒಂದೊಂದೇ ಪ್ರಶ್ನೆ ಹಾಕುವ ಮೂಲಕ ಬಾಯಿಮುಚ್ಚಿಸಲು ಯತ್ನಿಸುತ್ತಿದ್ದಾರೆ. ಇದೀಗ ಈ ಪ್ರಕರಣ ಕುತೂಹಲದ ತಿರುವು ಪಡೆದಿದ್ದು, ಬಾಬಾ ರಾಮ್‌ದೇವ್‌ ಒಂದು ಟ್ವಿಟರ್‌ ಶೇರ್‌ ಮಾಡಿದ್ದಾರೆ.
ನ್ಯೂಸ್‌ ಚಾನೆಲ್‌ ಒಂದರಲ್ಲಿ ಬಾಲಿವುಡ್‌ ನಟ ಆಮೀರ್‌ ಖಾನ್‌ ನಡೆಸಿರುವ ಪ್ರಸಿದ್ಧ ‘ಸತ್ಯಮೇವ ಜಯತೆ’ ಕಾರ್ಯಕ್ರಮವಿದು. ಈ ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರದ ದಿಗ್ಗಜರು ಬಂದು ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಕೆಲ ತಿಂಗಳ ಹಿಂದೆ ವಿಶ್ವಖ್ಯಾತಿಯ ಎಂಎಂಬಿಎಸ್‌ ವೈದ್ಯ, ಐಎಎಸ್‌ ಅಧಿಕಾರಿಯೂ ಆಗಿರುವ ಡಾ. ಸಮಿತ್ ಶರ್ಮಾ ಜತೆ ಆಮೀರ್‌ ಖಾನ್‌ ಸಂದರ್ಶನ ನಡೆಸಿದ್ದರು.
ಅದರಲ್ಲಿ ಡಾ.ಸಮಿತ್‌ ಅವರು ಮೆಡಿಕಲ್‌ ಮಾಫಿಯಾದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಜೆನರಿಕ್ ಔಷಧಿ ಮತ್ತು ಬ್ರಾಂಡೆಡ್ ಔಷಧಿಗಳ ನಡುವಿನ ಬೆಲೆ ವ್ಯತ್ಯಾಸದ ಬಗ್ಗೆ ಇದರಲ್ಲಿ ವಿವರಿಸಿರುವ ಅವರು, ಎಷ್ಟು ಕಡಿಮೆ ಬೆಲೆಯ ಔಷಧ, ಹೇಗೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ. ಈ ಕುರಿತ ವಿಡಿಯೋ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಬಾಬಾ ರಾಮ್‌ದೇವ್‌, ಮೆಡಿಕಲ್ ಮಾಫಿಯಾಗೆ ಇವರ ಮೇಲೆ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ ಎಂದು ಸವಾಲು ಹಾಕಿದ್ದಾರೆ. ರಾಮ್‌ದೇವ್‌ ಅವರನ್ನು ಎದುರು ಹಾಕಿಕೊಂಡಿರುವ ಐಎಎಂ ಯಾವ ರೀತಿ ಉತ್ತರಿಸುತ್ತದೆ ಎಂದು ಕಾದುನೋಡಬೇಕಿದೆ.
ಇಲ್ಲಿದೆ ನೋಡಿ ಬಾಬಾ ರಾಮ್‌ದೇವ್‌ ಟ್ವಿಟರ್‌ನಲ್ಲಿರೋ ವಿಡಿಯೋ:
इन मेडिकल माफियाओं में हिम्म्त है तो आमिर खान के खिलाफ मोर्चा खोलें-
वीडियो साभार-स्टार प्लसpic.twitter.com/ZpNT8CSohD
— स्वामी रामदेव (@yogrishiramdev)May 29, 2021

‘ಮೂರ್ಖ ವಿಜ್ಞಾನ’ ವಿವಾದದಿಂದ ಕ್ರೈಸ್ತ ಧರ್ಮದ ಪ್ರಚಾರದವರೆಗೆ…

ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ

ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
