ಮುಂಬೈ:ಬಾಲಿವುಡ್‌ನ ಹಾಟೆಸ್ಟ್‌ ತಾರೆಯರಲ್ಲಿ ಒಬ್ಬರು ಎನಿಸಿರುವ 37 ವರ್ಷದ ಸೋನಮ್ ಕಪೂರ್ ಗರ್ಭಿಯಾಗಿದ್ದಾರೆ. 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆಯಾಗಿರುವ ಸೋನಮ್‌ ಇನ್ನು ಕೆಲವೇ ತಿಂಗಳುಗಳಲ್ಲಿ ತಾಯಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿಕೊಂಡಿರುವ ಅವರು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಇಂದು (ಜೂನ್‌ 9) ಫೋಟೋಶೂಟ್‌ ಮಾಡಿಸಿಕೊಳ್ಳಲು ಕಾರಣ ಇವತ್ತು ಅವರ ಹುಟ್ಟಿದ ಹಬ್ಬ.

`ಸಾವರಿಯಾ’ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿರುವ ಸೋನಮ್‌, ಮದುವೆಯ ನಂತರವೂ ಬಿಜಿ ನಾಯಕಿಯೆಂದೇ ಗರುತಿಸಿಕೊಂಡವರು. ಗರ್ಭಿಣಿಯಾದ ತಕ್ಷಣ ತುಸು ಚಿತ್ರರಂಗದಿಂದ ದೂರ ಸರಿದಿರುವ ಅವರು, ಇದೀಗ ಬೇಬಿ ಬಂಪ್‌ ಷೋ ಮಾಡಿದ್ದಾರೆ. ತಂದೆ ಅನಿಲ್ ಕಪೂರ್ ಬಾಲಿವುಡ್​ ಕಂಡ ಅಪ್ರತಿಮ ನಾಯಕ. ಇಂದಿಗೂ ಸಿನಿರಂಗದಲ್ಲಿ ಬ್ಯುಸಿ ಇರುವ ಸ್ಟಾರ್ ನಾಯಕನ ಮಗಳು ಸೋನಮ್ ಕೂಡ ಬಾಲಿವುಡ್​ನಲ್ಲಿ ಫೇಮಸ್​.
ಮೊದಲ ಚಿತ್ರದಲ್ಲಿಯೇ ಫಿಲ್ಮ್​ಫೇರ್​ ಪ್ರಶಸ್ತಿ ಪಡೆದ ನಟಿ, ಕೆಲ ಚಿತ್ರಗಳಲ್ಲಿ ಸೋಲನುಭವಿಸಿದರು. ಆದರೆ ಮೂರು ವರ್ಷಗಳ ನಂತರ ಮತ್ತೆ ಸೂಪರ್ ಹಿಟ್​ ಚಿತ್ರಕೊಟ್ಟು ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಇದೀಗ ಬಿಳಿ ಬಣ್ಣದ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಅವರ ಅಭಿಮಾನಿಗಳು ಈ ಫೋಟೋಗೆ ಬಾರಿ ಮೆಚ್ಚಿಕೊಂಡಿದ್ದಾರೆ.
ಲವರ್‌ಗಾಗಿ ಜೀವ ಬೇಕಾದ್ರೂ ಕೊಡೋಕೆ ರೆಡಿ ಇದ್ದೀರಾ? ನಿಮಗೂ ಹೀಗೆಯೇ ಆಗ್ಬೋದು ಹುಷಾರ್‌..!

ಚಿತ್ರನಟ ಜೈಜಗದೀಶ್ ಅವರಿಂದ ಹಲ್ಲೆ? ಪೊಲೀಸ್‌ ಠಾಣೆಯಲ್ಲಿ ದಾಖಲಾಯ್ತು ದೂರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
