ಗಂಬೋಯಿ (ಗುಜರಾತ್​):ಮನುಷ್ಯತ್ವವನ್ನೇ ಕಳೆದುಕೊಂಡು ಹೀನ ಕೃತ್ಯಗಳನ್ನು ಮಾಡುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಅಮಾನವೀಯ ಘಟನೆ ಗುಜರಾತ್​ನ ಸಬರಕಾಂತ್​ನ ಗಂಬೋಯಿ ಗ್ರಾಮದಲ್ಲಿ ನಡೆದಿದೆ. ಯಾರೋ ಜೀವಂತವಾಗಿಯೇ ಶಿಶುವನ್ನು ಹೂತುಹೋಗಿದ್ದಾರೆ!
ರೈತ ಹೀತೇಂದ್ರ ಸಿನ್ಹಾ ಎಂಬುವವರು ತಮ್ಮ ಹೊಲಕ್ಕೆ ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಅವರ ಹೊಲದಲ್ಲಿ ಯಾರೋ ಶಿಶು ಹೂತು ಹಾಕಿ ಹೋಗಿದ್ದರು. ಅವಸರದಲ್ಲಿ ಹೂತು ಹಾಕಿದ್ದರಿಂದ ಮಗುವಿನ ಕೈ ಮೇಲೆ ಕಾಣಿಸುತ್ತಿತ್ತು. ಇದನ್ನು ನೋಡಿ ಗಾಬರಿಯೊಂದ ಹೀತೇಂದ್ರ ಅವರು ಆ ಜಾಗವನ್ನು ಅಗೆದು ನೋಡಿದ್ದಾರೆ. ಪವಾಡಸದೃಶವೆಂಬಂತೆ ಮಗು ಇನ್ನೂ ಉಸಿರಾಡುತ್ತಿತ್ತು.
ಕೂಡಲೇ ಅವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಅವರು ತಮ್ಮ ಅನುಭವ ಹಂಚಿಕೊಂಡರು, ಬೆಳಗ್ಗೆ ಹೊಲ ನೋಡಲೆಂದು ನಾನು ಹೋಗಿದ್ದೆ. ಆಗ ಮಣ್ಣಿನಲ್ಲಿ ಶಿಶುವಿನ ಕೈ ಭಾಗ ಮಾತ್ರ ಕಾಣಿಸಿತು. ನಮ್ಮ ಜಮೀನಿನ ಪಕ್ಕದಲ್ಲಿರುವ ವಿದ್ಯುತ್ ಪೂರೈಕೆ ಕಚೇರಿಯ ಸಿಬ್ಬಂದಿಯ ನೆರವಿನಿಂದ ಶಿಶುವನ್ನು ಹೊರಕ್ಕೆ ತೆಗೆದೆ. ಶಿಶುವನ್ನು ತುಂಬಾ ಆಳದಲ್ಲಿ ಹೂತಿರಲಿಲ್ಲ. ಆದ್ದರಿಂದ ಇನ್ನೂ ಉಸಿರಾಡುತ್ತಿತ್ತು ಎಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೊಲದ ಮಾಲೀಕ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಲಾಗಿದೆ. ಶಿಶುವಿನ ತಾಯಿ ಮತ್ತು ಪೋಷಕರನ್ನು ಪತ್ತೆ ಹೆಚ್ಚಲು ಕ್ರಮ ವಹಿಸಲಾಗಿದೆ ಎಂದು ಎಸ್​ಐ ಸಿ.ಎಫ್​.ಠಾಕೂರ್​ ಹೇಳಿದ್ದಾರೆ(ಏಜೆನ್ಸೀಸ್​)
ಶಾಸಕನ ಹುಟ್ಟುಹಬ್ಬಕ್ಕೆ ಯುವತಿಯರ ಅಶ್ಲೀಲ ನೃತ್ಯ: ಮಧ್ಯರಾತ್ರಿ ಗಲಾಟೆಯಾದರೂ ಪೊಲೀಸರು ಗಪ್​ಚುಪ್!

ಸಿದ್ದರಾಮೋತ್ಸವದ ಸಂಭ್ರಮದಲ್ಲಿದ್ದ ಶಾಸಕ ಪಾಟೀಲ್​ಗೆ ಆಘಾತ: ವಾಪಸ್​ ಬರುವಾಗ ಕಾಲು ಮುರಿತ!

ಬೆಲ್ಟ್​, ಕ್ಯಾಪ್​ ತೆಗೆಸಿ ಆರೋಪಿಗಳ ಜತೆ ಪೊಲೀಸರನ್ನು ಕುಳ್ಳರಿಸಿದ ಕೋರ್ಟ್​! ಏಕಿಂತ ಶಿಕ್ಷೆ ಅಂತೀರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
