ನವದೆಹಲಿ:ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ನಡೆಯುವ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆದೇಶ ಹೊರಡಿಸಿದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಒಳಗೊಳಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ನಿರ್ದೇಶನಕ್ಕೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಭಾಗವಹಿಸಬಾರದು ಎಂದು ಸೂಚನೆ ನೀಡಿದೆ.
ಡಿಸೆಂಬರ್ 29ರಂದು ಯುಜಿಸಿ ಸುತ್ತೋಲೆ ಹೊರಡಿಸಿದ್ದು, ಭಾರತದ 75ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸಲು ಅಮೃತ ಮಹೋತ್ಸವ ಆಚರಣೆಯ ಅಡಿಯಲ್ಲಿ ದೇಶಾದ್ಯಂತ 30 ಸಾವಿರ ಸಂಸ್ಥೆಗಳಲ್ಲಿ ಮೂರು ಲಕ್ಷ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜದ ಮುಂದೆ ಸೂರ್ಯ ನಮಸ್ಕಾರ ಮಾಡುವಂತೆ ಸೂಚಿಸಿದೆ. ಜನವರಿ 1ರಿಂದ ಫೆಬ್ರವರಿ 7ರ ವರೆಗೆ 30 ರಾಜ್ಯಗಳಲ್ಲಿ 3 ಲಕ್ಷ ವಿದ್ಯಾರ್ಥಿಗಳ ಮೂಲಕ 750 ದಶಲಕ್ಷ ಸೂರ್ಯ ನಮಸ್ಕಾರ ಮಾಡಿಸಲು ಯೋಜಿಸಲಾಗಿದೆ. ಇದಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದೆ.
ಬಹುಸಂಖ್ಯಾತರ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಇತರರ ಮೇಲೆ ಹೇರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಅಸಂವಿಧಾನಿಕ ಮತ್ತು ಸುಳ್ಳು ದೇಶಭಕ್ತಿ ಎಂದಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರು ಮೂರ್ತಿ ಪೂಜೆಯನ್ನು ನಂಬುವುದಿಲ್ಲ. ಆದ್ದರಿಂದ ಇದನ್ನು ಹೇರುವುದು ಸಂವಿಧಾನಕ್ಕೆ ಹೊಂದಿಕೆಯಾಗುವುದಿಲ್ಲ ಮತ್ತು ಸರ್ಕಾರವು ಇದರಿಂದ ದೂರವಿರಬೇಕು ಮತ್ತು ಜಾತ್ಯತೀತ ರುಜುವಾತುಗಳನ್ನು ಅನುಸರಿಸಬೇಕು ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಲೀದ್ ರಹಮಾನಿ ಹೇಳಿದ್ದಾರೆ.
ಸರ್ಕಾರ ಕೂಡಲೇ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಮತ್ತು ದೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಉತ್ತೇಜಿಸಬೇಕು. ಇಂತಹ ನಿರ್ದೇಶನಗಳನ್ನು ನೀಡುವ ಬದಲು ಸರ್ಕಾರವು ಹಣದುಬ್ಬರ, ನಿರುದ್ಯೋಗದಂತಹ ನೈಜ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.
ಲಂಚಕ್ಕೆ ಹಣ ಕೊಡದ ಗರ್ಭಿಣಿ ಪತ್ನಿ ಜತೆ ಮಗನನ್ನೂ ಜೀವಂತ ಸುಟ್ಟುಹಾಕಿದ ಪಾಪಿ ಗಂಡ! ಕಣ್ಣಿಗೆ ಬಟ್ಟೆಕಟ್ಟಿ ದುಷ್ಕೃತ್ಯ

ರೈಲಿನಲ್ಲಿರೋ ಶೌಚಗೃಹಕ್ಕೆ ಹೋದ ತಾಯಿ-ಮಗು ನಾಪತ್ತೆ! ಸಿಕ್ಕಿದ್ದು ಹಳಿಯ ಮೇಲೆ ಹೆಣವಾಗಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
