ಬೆಂಗಳೂರು:ಭಾರತೀಯರು ಅದರಲ್ಲಿಯೂ ಸೆಲೆಬ್ರಿಟಿಗಳು ಚಿಕ್ಕಪುಟ್ಟ ಅನಾರೋಗ್ಯದಿಂದ ಹಿಡಿದು ದೊಡ್ಡ ದೊಡ್ಡ ರೋಗಗಳಿಗೂ ಅಮೆರಿಕ ಸೇರಿದಂತೆ ವಿದೇಶಕ್ಕೆ ಪ್ರಯಾಣ ಬೆಳೆಸುವಾಗ ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಮಹಿಳೆಯೊಬ್ಬರನ್ನು ಅಮೆರಿಕದಿಂದ ಭಾರತಕ್ಕೆ ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಏರ್​ಲಿಫ್ಟ್​ ಮಾಡಿರುವ ಘಟನೆ ನಡೆದಿದೆ.
ಅಮೆರಿಕಕ್ಕೆ ತೆರಳಿದ್ದ ಬೆಂಗಳೂರು ಮೂಲದ 67 ವರ್ಷದ ಮಹಿಳೆಯನ್ನು ಏರ್​ಲಿಫ್ಟ್​ ಮೂಲಕ 26 ಗಂಟೆಗಳಲ್ಲಿ ಚೆನ್ನೈ ಗೆ ಕರೆತರಲಾಗಿದೆ. ಇತ್ತೀಚಿನ ದಿನಗಳಲ್ಲಿ ಏರೋಮೆಡಿಕಲ್​ ಸ್ಥಳಾಂತರಿಸುವಿಕೆಯಲ್ಲಿ ಇದು ದೇಶದಲ್ಲೇ ದೀರ್ಘಾವಧಿಯ ಏರ್​ಲಿಫ್ಟ್​ ಎನ್ನಲಾಗಿದೆ.
ಬೆಂಗಳೂರಿನ ಇಂದಿರಾನಗರದ ಮಹಿಳೆ ಕೆಲ ವರ್ಷಗಳಿಂದ ಮಕ್ಕಳೊಂದಿಗೆ ಅಮೆರಿಕದ ಒರೆಗಾನ್​ನಲ್ಲಿ ನೆಲೆಸಿದ್ದರು. ಅಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ತಪಾಸಣೆ ಮಾಡಿಸಿದರು. ಆಗ ಹೃದಯ ಕಾಯಿಲೆ ಇರುವುದು ತಿಳಿಯಿತು. ಚಿಕಿತ್ಸೆ ದುಬಾರಿ ಅಗಿರುವುದರಿಂದ ಸೂಕ್ತ ಚಿಕಿತ್ಸೆ ಕೊಡಿಸಲು ಕಷ್ಟಸಾಧ್ಯ ಎಂದು ಮಹಿಳೆಯ ಕುಟುಂಬ ನಿರ್ಧರಿಸಿ ಅವರನ್ನು ಭಾರತಕ್ಕೆ ಸ್ಥಳಾಂತರಿಸಿದೆ ಎಂದು ಏರ್​ ಆಂಬುಲೆನ್ಸ್​ ಸೇವಾ ಸಂಸ್ಥೆಯ ಮೂಲಗಳು ತಿಳಿಸಿವೆ.
ರೋಗಿಯನ್ನು ಏರ್​ಲಿಫ್ಟ್​ ಮೂಲಕ ಕರೆತರಲು 1 ಕೋಟಿ ರೂ. ಅಧಿಕ (133,000 ಯುಎಸ್​ ಡಾಲರ್​) ವೆಚ್ಚವಾಗಿದೆ. ರೋಗಿಯ ಆರೋಗ್ಯ ಸ್ಥಿತಿ ಪರಿಗಣಿಸಿ ಸೂಪರ್​ ಮಧ್ಯಮ ಗಾತ್ರದ ಖಾಸಗಿ ಜೆಟ್​ (ಫ್ಲೈಯಿಂಗ್ ಇಂಟೆನ್ಸಿವ್​ ಕೇರ್​ ಯುನಿಟ್​ ಆಗಿ ಪರಿವರ್ತಿಸಲಾದ ವಿಮಾನ) ಅನ್ನು ಸ್ಥಳಾಂತರಕ್ಕೆ ಬಳಕೆ ಮಾಡಲಾಯಿತು. ಒರೆಗಾನ್​ನ ಲೆಗಸಿ ಗುಡ್​ ಸಮರಿಟನ್​ ಮೆಡಿಕಲ್​ ಸೆಂಟರ್​ನಿಂದ ಪೋರ್ಟ್​ಲ್ಯಾಂಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್​ ಮೂಲಕ ರೋಗಿಯನ್ನು ಭಾನುವಾರ ಬೆಳಗ್ಗೆ ಕರೆತರಲಾಯಿತು. ಅಲ್ಲಿಂದ ರೋಗಿಯನ್ನು ಹೊತ್ತು ಹಾರಿದ ಏರ್​ ಆಂಬುಲೆನ್ಸ್​ ಐಸ್​ಲ್ಯಾಂಡ್​ ಮತ್ತು ಟರ್ಕಿ ಮಾರ್ಗವಾಗಿ ಮಂಗಳವಾರ ಬೆಳಗ್ಗೆ ಭಾರತ ತಲುಪಿತು.
ವೈದ್ಯ ತಂಡದೊಂದಿಗೆ ಸ್ಥಳಾಂತರ:ಸ್ಥಳಾಂತರದ ವೇಳೆ ರೋಗಿ ಮೇಲ್ವಿಚಾರಣೆ ಮಾಡಲು ಮೂವರು ವೈದ್ಯರು ಮತ್ತು ಇಬ್ಬರು ಅರೆವೈದ್ಯರು ಸೇರಿ ವೈದ್ಯಕಿಯ ತಂಡದೊಂದಿಗೆ ಏರ್​ ಆಂಬುಲೆನ್ಸ್​ನಲ್ಲಿ ಐಸಿಯು ಅನ್ನು ಸಿದ್ಧಪಡಿಸಲಾಗಿದೆ. ರೋಗಿಯನ್ನು ಹೊತ್ತ ಏರ್​ ಆಂಬುಲೆನ್ಸ್​ ಫೋರ್ಟ್​ಲ್ಯಾಂಡ್​ನಿಂದ 7.5 ಗಂಟೆಗಳಲ್ಲಿ ಐಸ್​ಲ್ಯಾಂಡ್​ ರಾಜಧಾನಿ ರೇಕ್​ಜಾವಿಕ್​ ವಿಮಾನ ನಿಲ್ದಾಣ ತಲುಪಿತು. ವಿಮಾನಕ್ಕೆ ಇಂಧನ ತುಂಬಿಸಿಕೊಂಡು, ಅಲ್ಲಿಂದ 6 ಗಂಟೆಗಳಲ್ಲಿ ಟರ್ಕಿಯ ಇಸ್ತಾನ್​ಬುಲ್​ ತಲುಪಿತು. ಅಲ್ಲಿ ಯುಎಸ್​ನಿಂದ ಆಗಮಿಸಿದ್ದ ವೈದ್ಯರ ತಂಡ ವಾಪಸ್​ ತೆರಳಿತು. ಬೆಂಗಳೂರಿನ ವೈದ್ಯರು ಹಾಗೂ ರೋಗಿಯನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಿ, ಅಲ್ಲಿಂದ ಹೊರಟ ಏರ್​ ಅಂಬುಲೆನ್ಸ್​ 4 ಗಂಟೆಗಳಲ್ಲಿ ಟರ್ಕಿಯ ದಿಯರ್​ಬಕಿರ್​ ವಿಮಾನ ನಿಲ್ದಾಣಕ್ಕೆ ತಲುಪಿತು. ಅಲ್ಲಿಂದ ಮಂಗಳವಾರ ಮುಂಜಾನೆ 2.10 ಗಂಟೆಗೆ ಚೆನ್ನೈ ನ ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ರೋಗಿಯನ್ನು ಅಂಬುಲೆನ್ಸ್​ನಲ್ಲಿ ಸಾಗಿಸಿ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಅಷ್ಟಕ್ಕೂ ಈ ಪರಿಯ ಹಣ ಖರ್ಚು ಮಾಡಿದರೆ ಅಮೆರಿಕದಲ್ಲಿಯೇ ಚಿಕಿತ್ಸೆ ಸಿಗುತ್ತಿತ್ತಲ್ಲವೆ ಎನ್ನಬಹುದು. ಆದರೆ ಇದನ್ನು ಕೇಳಿದರೆ ಬಹುಶಃ ಅಚ್ಚರಿಯಾಗಬಹುದು. ಮಹಿಳೆ ಭಾರತೀಯ ಪಾಸ್​ಪೋರ್ಟ್​ ಹೊಂದಿರುವ ಕಾರಣ, ಅವರಿಗೆ ಅಲ್ಲಿ ಆರೋಗ್ಯ ವಿಮೆಯ ಸೌಲಭ್ಯ ಪಡೆಯಲು ಸಾಧ್ಯವಿರಲಿಲ್ಲ. ಅಲ್ಲದೆ ಯುಎಸ್​ನಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸುವ ಅವಧಿ ಹೆಚ್ಚಿದ್ದು, ವೆಚ್ಚವೂ ದುಬಾರಿ. ಅದು ಎಷ್ಟೆಂದರೆ ಮಹಿಳೆಯನ್ನು ಭಾರತಕ್ಕೆ ವಿಮಾನದಲ್ಲಿ ಸಾಗಿಸುವುದಕ್ಕಿಂತ ಹೆಚ್ಚು ಚಿಕಿತ್ಸೆಯ ವೆಚ್ಚವಾಗುತ್ತಿತ್ತು. ಆ ಕಾರಣಕ್ಕಾಗಿ ಕುಟುಂಬದವರು ಆಕೆಯನ್ನು ಭಾರತಕ್ಕೆ ಸ್ಥಳಾಂತರಿಸಿದರು ಎಂದು ಮೂಲಗಳು ತಿಳಿಸಿವೆ.
ಛೇ… ಇದೆಂಥ ದುರಂತ! ಅಪಘಾತದಲ್ಲಿ ಪ್ರಾಣ ಬಿಡುತ್ತಲೇ ನಡುರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ಅಮ್ಮ

ಯುವಕ ಬೀಸಿದ ಬಲೆಗೆ ಬಿದ್ದರು ಈ ನಾಲ್ವರು ಶಾಸಕಿಯರು! ಕಣ್ಣೀರಿಗೆ ಕರಗಿ ಹಣ ಕಳೆದುಕೊಂಡರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
