ನವದೆಹಲಿ:ನಾಳೆ ಅಂದರೆ ನವೆಂಬರ್‌ 1ರಿಂದ ಬ್ಯಾಂಕ್‌ ವಹಿವಾಟು, ರೈಲಿನ ವೇಳಾಪಟ್ಟಿ, ಎಲ್‌ಪಿಜಿ ಸಿಲಿಂಡರ್‌ ಸೇರಿದಂತೆ ಕೆಲವೊಂದು ಬದಲಾವಣೆಗಳು ಆಗಲಿದ್ದು, ಅವುಗಳ ವಿವರ ಇಲ್ಲಿದೆ.ಬ್ಯಾಂಕ್‌ ವಹಿವಾಟು:ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಡುವುದರಿಂದ ಹಿಡಿದು ಹಣ ತೆಗೆಯುವವರೆಗೆ ಶುಲ್ಕ ವಿಧಿಸಲಾಗುತ್ತದೆ. ಸದ್ಯ ಬ್ಯಾಂಕ್ ಆಫ್ ಬರೋಡಾ ಇದನ್ನು ಪ್ರಾರಂಭಿಸಿದೆ. ಗ್ರಾಹಕರು ಇನ್ನುಮುಂದೆ ಸಾಲದ ಖಾತೆಗೆ 150 ರೂ ನೀಡಬೇಕಾಗಿದೆ. ಉಳಿತಾಯ ಖಾತೆದಾರರು ಉಚಿತವಾಗಿ ಮೂರು ಬಾರಿ ಠೇವಣಿ ಇಡಬಹುದು. ನಾಲ್ಕನೇ ಬಾರಿ ಹಣವನ್ನು ಠೇವಣಿ ಇಟ್ಟರೆ, ಅವರು 40 ರೂ. ಶುಲ್ಕವನ್ನು ಪಾವತಿಸಬೇಕು. ಆದರೆ ಜನ್ ಧನ್ ಖಾತೆದಾರರು ಠೇವಣಿಯ ಮೇಲೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಆದರೆ ಅವರು ಹಣವನ್ನು ವಾಪಸ್‌ ಪಡೆಯಲು 100 ರೂ ಶುಲ್ಕ ನಿಗದಿ ಮಾಡಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರು ಅಕ್ಟೋಬರ್ 31 ರಿಂದ ಎಟಿಎಂನಿಂದ ಮಿತಿಗೆ ಅನುಗುಣವಾಗಿ ನಗದನ್ನು ವಿತ್​ಡ್ರಾ ಮಾಡಿಕೊಳ್ಳಬಹುದು. ಕ್ಲಾಸಿಕ್ ಮತ್ತು ಮಾಸ್ಟ್ರೋ ಡೆಬಿಟ್ ಕಾರ್ಡ್​ ಹೊಂದಿರುವವರು ಎಟಿಎಂನಿಂದ ಒಂದು ದಿನ 20 ಸಾವಿರ ಮಾತ್ರ ಡ್ರಾ ಮಾಡಬಹುದಾಗಿದೆ. ಈ ಹಿಂದೆ ಎಸ್​ಬಿಐ ಖಾತೆದಾರರು ಎಟಿಎಂನಿಂದ ದಿನವೊಂದಕ್ಕೆ 40 ಸಾವಿರ ನಗದು ಹಿಂಪಡೆಯಬಹುದಾಗಿತ್ತು. ಆದರೆ ಎಟಿಎಂ ಮೂಲಕ ವಂಚನೆಯನ್ನು ತಡೆಯುವ ಸಲುವಾಗಿ ಈಗ ಹೊಸ ನೀತಿಯನ್ನು ಜಾರಿಗೆ ತಂದಿದೆ.ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ:ಭಾರತೀಯ ರೈಲ್ವೇ ದೇಶಾದ್ಯಂತ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಿದೆ. 13 ಸಾವಿರ ಪ್ಯಾಸೆಂಜರ್ ರೈಲುಗಳು ಮತ್ತು 7 ಸಾವಿರ ಗೂಡ್ಸ್ ರೈಲುಗಳ ಸಮಯ ಬದಲಾಗಲಿದೆ. ದೇಶದಲ್ಲಿ ಸಂಚರಿಸುವ ಸುಮಾರು 30 ರಾಜಧಾನಿ ರೈಲುಗಳ ಸಮಯವೂ ನವೆಂಬರ್ 1 ರಿಂದ ಬದಲಾಗಲಿದೆ.ಇದರ ಜತೆಗೆ ರೈಲ್ವೆ ವಿಶೇಷ ಯೋಜನೆ ಆರಂಭಿಸಿದ್ದು, ಯುಟಿಎಸ್​ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸಲಾಗದ ಟಿಕೆಟ್​ಗಳನ್ನು ಪಡೆಯಬಹುದಾಗಿದೆ. ಈ ಮೊಬೈಲ್ ಅಪ್ಲಿಕೇಶನ್ ಅಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಫೋನ್ ಸೇರಿದಂತೆ ಎಲ್ಲ ಸ್ಮಾರ್ಟ್​ಫೋನ್​ನಲ್ಲೂ ಬಳಸಿಕೊಳ್ಳಬಹುದಾಗಿದೆ. ಈ ಆ್ಯಪ್​ನ್ನು ಡೌನ್​ಲೋಡ್ ಮಾಡಿದ ಬಳಿಕ ಯೂಸರ್ ಐಡಿ ಮತ್ತು ಪಾಸ್​ವರ್ಡ್​ನ್ನು ರಚಿಸಿಕೊಳ್ಳಬೇಕು. ನಿಮ್ಮ ರೈಲ್ವೆ ನಿಲ್ದಾಣದಿಂದ 25 – 30 ಮೀಟರ್ ದೂರದಿಂದ ನೀವು ಇಲ್ಲಿ ಟಿಕೆಟ್​ಗಳನ್ನು ಖರೀದಿಸಬಹುದು. ಆದರೆ ಈ ಆ್ಯಪ್​ ಮೂಲಕ ಕೇವಲ 4 ಟಿಕೆಟ್​ ಖರೀದಿಯ ಆಯ್ಕೆಯನ್ನು ಮಾತ್ರ ನೀಡಲಾಗಿದೆ.
ಎಲ್‌ಪಿಜಿ ಗ್ಯಾಸ್‌ ನಿಯಮ ಬದಲಾವಣೆಳ ನವೆಂಬರ್ 1 ರಿಂದ, ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯ ನಿಯಮ ಬದಲಾಗಲಿದೆ. ಗ್ಯಾಸ್ ಬುಕ್ ಮಾಡಿದ ನಂತರ ಗ್ರಾಹಕರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಸಿಲಿಂಡರ್ ವಿತರಣೆಗೆ ಬಂದಾಗ, ಅದನ್ನು ಡೆಲಿವರಿ ಬಾಯ್ ಜೊತೆಗೆ ಹಂಚಿಕೊಳ್ಳಬೇಕು. ಈಗಾಗಲೇ ಈ ನಿಯಮ ಕೆಲವು ನಗರಗಳಲ್ಲಿ ಚಾಲ್ತಿಯಲ್ಲಿ ಇದೆ. ಎಲ್ಲಾ ಗ್ರಾಹಕರು ತಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ತೈಲ ಕಂಪನಿಗಳು ಸೂಚಿಸಿವೆ. ಇದರಿಂದ ಸಿಲಿಂಡರ್‌ಗಳನ್ನು ವಿತರಿಸಲು ಯಾವುದೇ ತೊಂದರೆಯಾಗುವುದಿಲ್ಲ. ಈ ನಿಯಮವು ವಾಣಿಜ್ಯ ಸಿಲಿಂಡರ್‌ಗಳಿಗೆ ಅನ್ವಯ ಆಗುವುದಿಲ್ಲ.ಇಂಡೇನ್ ಗ್ಯಾಸ್‌ ಕಂಪೆನಿಯ ಗ್ರಾಹಕರಾಗಿದ್ದರೆ ಇನ್ನು ಹಳೆಯ ನಂಬರ್‌ನಲ್ಲಿ ಗ್ಯಾಸ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ತನ್ನ ಗ್ರಾಹಕರಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಗ್ಯಾಸ್ ಬುಕಿಂಗ್‌ಗಾಗಿ ಹೊಸ ಸಂಖ್ಯೆಯನ್ನು ಕಳುಹಿಸಿದೆ. ಈ ಗ್ರಾಹಕರು ಇನ್ನುಮುಂದೆ ಸಿಲಿಂಡರ್ ಬುಕ್ ಮಾಡಲು 7718955555 ಗೆ ಕರೆ ಮಾಡಬೇಕು ಅಥವಾ ಎಸ್‌ಎಂಎಸ್‌ ಮಾಡಬೇಕು.ಕೇಂದ್ರ ಸರ್ಕಾರದ ಘೋಷಣೆ ಮೇರೆಗೆ ಚುನಾವಣಾ ಬಾಂಡ್ ಯೋಜನೆಯ ಬಾಂಡ್​ಗಳನ್ನು ಮಾರಾಟ ಮಾಡಲಾಗುತ್ತದೆ. ಈ ಬಾಂಡ್‌ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲ ಶಾಖೆಗಳಲ್ಲಿ ಲಭ್ಯ ಇವೆ. ನವೆಂಬರ್ 10 ರವರೆಗೆ ಮಾತ್ರ ಇದು ಮಾರಾಟವಾಗಲಿದ್ದು, ಈ ಬಾಂಡ್​ಗಳು 15 ದಿನಗಳವರೆಗೆ ಮಾನ್ಯತೆ ಹೊಂದಿರಲಿವೆ. ಆನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಠೇವಣಿ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
