ವಿದಿಶಾ (ಮಧ್ಯಪ್ರದೇಶ):ತಮ್ಮದೇ ದುಡ್ಡನ್ನು ಪಡೆಯಲು ರೈತರು ರಾತ್ರಿಯಿಡೀ ನಿದ್ದೆಗೆಟ್ಟು ಬ್ಯಾಂಕ್‌ ಎದುರು ಕಾದಿರುವ ಘಟನೆಯೊಂದು ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.
ಇದಕ್ಕೆ ಕಾರಣ ಕರೊನಾ ವೈರಸ್‌. ಬ್ಯಾಂಕ್‌ನ ಅನೇಕ ಸಿಬ್ಬಂದಿಗೆ ವೈರಸ್​ ಬಂದಿದ್ದರಿಂದ ಎರಡು ವಾರ ಬ್ಯಾಂಕ್‌ ಮುಚ್ಚಲಾಗಿತ್ತು. ಈ ಸಮಯದಲ್ಲಿ ದುಡ್ಡಿಗಾಗಿ ರೈತರು ಪರದಾಡುವಂತಾಯಿತು. ಬ್ಯಾಂಕ್‌ ತೆರೆಯುತ್ತಿರುವ ಸುದ್ದಿ ತಿಳಿಯುತ್ತಲೇ ರಾತ್ರಿ ಬ್ಯಾಂಕ್‌ ಎದುರೇ ಬೀಡುಬಿಟ್ಟಿದ್ದಾರೆ.
ಕರೊನಾ ವೈರಸ್‌ ಇರುವ ಕಾರಣದಿಂದಾಗಿ ಜನದಟ್ಟಣೆ ತಪ್ಪಿಸಲು ಪ್ರತಿದಿನ 150 ಟೋಕನ್​ಗಳನ್ನು ಇಲ್ಲಿ ವಿತರಣೆ ಮಾಡಲಾಗುತ್ತದೆ. ಹೆಚ್ಚಿನ ಜನರಿಗೆ ಹಣ ನೀಡುವುದಿಲ್ಲ. ಇದರಿಂದಾಗಿ ತಮಗೆಲ್ಲಿ ಟೋಕನ್‌ ಸಿಗುವುದಿಲ್ಲವೋ ಎಂಬ ಭಯದಲ್ಲಿ ರೈತರು ತಂಡೋಪತಂಡವಾಗಿ ಆಗಮಿಸಿದ್ದಾರೆ. ಬ್ಯಾಂಕ್‌ ಎದುರೇ ಬಟ್ಟೆ ಹಾಸಿಕೊಂಡು ಮಲಗಿದ್ದಾರೆ.
ಆದರೆ ಅವರಲ್ಲಿ ಕೆಲವರ ಅದೃಷ್ಟ ಚೆನ್ನಾಗಿರಲಿಲ್ಲ. ಅದಾಗಲೇ 150 ಟೋಕನ್‌ ಮುಗಿದ ಕಾರಣ ಉಳಿದವರಿಗೆ ಮಾರನೆಯ ದಿನ ಬರುವಂತೆ ಹೇಳಲಾಯಿತು. ಇದರಿಂದ ಬರಿಗೈನಲ್ಲಿ ವಾಪಸಾದ ಘಟನೆ ನಡೆದಿದೆ. ನಮಗೆ ಡೀಸೆಲ್​ ಖರೀದಿಗೆ ಹಣ ಬೇಕಿತ್ತು ಎಂದು ಕೆಲವರು ಹೇಳಿದರೆ, ರಸಗೊಬ್ಬರ ಖರೀದಿಗೂ ದುಡ್ಡು ಇಲ್ಲದಂತಾಗಿದೆ. ಈಗ ನೋಡಿದ್ರೆ ಹಣ ಸಿಕ್ಕಿಲ್ಲ ಎಂದು ಕೆಲವರು ಅಳಲು ತೋಡಿಕೊಂಡರು. ಇನ್ನು ಕೆಲವರು ಮಕ್ಕಳ ಮದುವೆಗಾಗಿ ಹಣ ತೆಗೆದುಕೊಂಡು ಹೋಗಲು ಬಂದಿದ್ದರು.
ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು

ಪೋಷಕರು ಬದುಕಿರಲಿ, ಇಲ್ಲದಿರಲಿ… ಸಾಕು ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ- ಕಾನೂನು ಏನಿದೆ ನೋಡಿ…

ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

ಹೀಗೂ ಇರ್ತಾರೆ! ತಲೆಬುರುಡೆ ಓಪನ್‌ ಮಾಡಿ ಕತ್ತರಿ ಹಾಕಿದರೂ ಜೋಕ್‌ ಮಾಡುತ್ತಿದ್ದ ರೋಗಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + sixteen =
Remember me
