ನವದೆಹಲಿ:ಬ್ಯಾಂಕ್​ನಲ್ಲಿ ಎಷ್ಟೋ ಮಂದಿಗೆ ಪ್ರತಿದಿನವೂ ಕೆಲಸ ಇರುತ್ತದೆ. ಇನ್ನು ಕೆಲವರು ತುರ್ತು ಕೆಲಸ ಇದ್ದರೂ ನಾಳೆ ಹೋದರಾಯಿತು ಎಂದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಇಂದು ಆ ರೀತಿ ತಪ್ಪು ಮಾಡಬೇಡಿ. ಏಕೆಂದರೆ ನಾಳೆಯಿಂದ ನಾಲ್ಕು ದಿನ ಬ್ಯಾಂಕ್​ ಸೇವೆ ನಿಮಗೆ ಸಿಗಲ್ಲ!
ಹೌದು. ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ವಿರೋಧಿಸಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಇದೇ 15 ಮತ್ತು 16 ಅಂದರೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಬ್ಯಾಂಕ್​ ನೌಕರರ ಈ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ್ದರೂ ಅದು ಇನ್ನೂ ನೆರವೇರಿಲ್ಲ ಎಂಬ ಕಾರಣಕ್ಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನೌಕರರು ಮುಂದಾಗಿದ್ದಾರೆ. ಆದ ಕಾರಣ, ಅವೆರಡು ದಿನಗಳು ಬ್ಯಾಂಕ್​ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಾಳೆ ಮಾರ್ಚ್​ 13 ಶನಿವಾರ. ಇದು ಎರಡನೆಯ ಶನಿವಾರ ಆಗಿರುವ ಕಾರಣ ಸಹಜವಾಗಿ ಬ್ಯಾಂಕ್​ಗೆ ರಜೆ ಇದೆ. ನಂತರ ಭಾನುವಾರ. ಅದಾದ ಮೇಲೆ ಸೋಮವಾರ ಮತ್ತು ಮಂಗಳವಾರ ಮುಷ್ಕರ. ಆದ್ದರಿಂದ ನಾಳೆಯಿಂದ ನಾಲ್ಕು ದಿನ ನೀವು ಬ್ಯಾಂಕ್​ ಕಡೆಗೆ ಹೋಗುವಂತಿಲ್ಲ. ಆದ್ದರಿಂದ ಏನೇ ಕೆಲಸ ಇದ್ದರೂ ಇಂದು ಮುಗಿಸಿಬಿಡಿ. ಇಲ್ಲದಿದ್ದರೆ ಪರದಾಡುವ ಸ್ಥಿತಿ ನಿರ್ಮಾಣ ಆಗಬಹುದು.
ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರ ಮರುಪರಿಶೀಲಿಸಲು ಒಂದು ವೇಳೆ ಸರ್ಕಾರವು ಒಪ್ಪಿದರೆ ಮುಷ್ಕರವನ್ನು ಮರುಪರಿಶೀಲಿಸುವುದಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಹೇಳಿವೆ. ಅಂದರೆ ಇನ್ನೊಂದೆರಡು ದಿನಗಳಲ್ಲಿ ಅವರ ಬೇಡಿಕೆ ಈಡೇರಿಸಿದರೆ ಮುಷ್ಕರ ನಡೆಯುವುದಿಲ್ಲ. ಹಾಗೆ ಆಗದಿದ್ದರೆ ಗ್ರಾಹಕರು ಪರದಾಡಬೇಕಾಗುತ್ತದೆ.
ಇದೆಂಥ ಹೊಸ ಅವತಾರನಪ್ಪ! ಬಲೂನು ಬಿಟ್ಟು ಭಾರತವನ್ನು ಹೆದರಿಸಲು ನೋಡ್ತಿದೆಯೇ ಪಾಕ್​?

ನಂಗೆ ಬೇಕು… ನಂಗೆ ಬೇಕು… ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್​!

ಅವನನ್ನು ನಂಬಿ ದೇಹ ಒಪ್ಪಿಸಿಬಿಟ್ಟೆ… ಈಗ ಬೇರೆ ಮದ್ವೆಯಾಗಿದ್ದಾನೆ… ಹುಚ್ಚಿಯಾಗದಂತೆ ನಾನೇನು ಮಾಡಲಿ ಮೇಡಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 9 =
Remember me
