ವಾಷಿಂಗ್ಟನ್​:ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬರೆದಿರುವ ಆತ್ಮಕಥನ ‘ಎ ಪ್ರಾಮಿಸ್ಡ್​ ಲ್ಯಾಂಡ್’ ಪುಸ್ತಕ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಹಲವಾರು ರಾಜಕೀಯ ಧುರೀಣರ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಅವರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಾವು ಈ ಧುರೀಣರನ್ನು ಕಂಡ ರೀತಿಯ ಬಗ್ಗೆ ಅದರಲ್ಲಿ ವಿವರವಾಗಿ ತಿಳಿಸಲಾಗಿದೆ.
ಒಬಾಮಾ 2009ರಿಂದ 2017ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 2013-14ರವರೆಗೆ ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಒಬಾಮಾ ಸಂಪರ್ಕದಲ್ಲಿ ಇದ್ದರು. ಆ ಸಂದರ್ಭದಲ್ಲಿ ಇವರೆಲ್ಲರೂ ವ್ಯವಹರಿಸಿದ ರೀತಿಯ ಕುರಿತು ತಮ್ಮ ಅನಿಸಿಕೆಗಳನ್ನು ನೇರವಾಗಿ ಒಬಾಮಾ ಹಂಚಿಕೊಂಡಿದ್ದಾರೆ.
768 ಪುಟಗಳಿರುವ ಈ ಪುಸ್ತಕದಲ್ಲಿರುವ ಅನೇಕ ವಿಷಯಗಳು ಭಾರತದ ರಾಜಕೀಯದಲ್ಲಿ, ಅದರಲ್ಲಿಯೂ ಸೋನಿಯಾಗಾಂಧಿ ಕುಟುಂಬದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಇದನ್ನೂ ಓದಿ:ರಾಹುಲ್​ ಗಾಂಧಿ ಬಗ್ಗೆ ಬರಾಕ್​ ಒಬಾಮಾ ಬರೆದರು ಹೀಗೆ… ಕೈ ವಲಯದಲ್ಲಿ ಆಕ್ರೋಶ
ಅದರಲ್ಲಿಯೂ ವಿಶೇಷವಾಗಿ ಸೋನಿಯಾಗಾಂಧಿಯವರು  ಮನಮೋಹನ್​ ಸಿಂಗ್​​ ಅವರಿಗೆ ಪ್ರಧಾನಿ ಪಟ್ಟ ಏಕೆ ಬಿಟ್ಟುಕೊಟ್ಟರು ಎಂಬ ವಿಚಾರದ ಬಗ್ಗೆ ಉಲ್ಲೇಖಿಸಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಕಾರಣ ನೀಡಿರುವ ಒಬಾಮಾ, ರಾಹುಲ್​ ಗಾಂಧಿಯ ರಾಜಕೀಯ ಬೆಳವಣಿಗೆಗೆ ಮೃದು ಸ್ವಭಾವದ ಮನಮೋಹನ್​ ಸಿಂಗ್​ ಯಾವುದೇ ಕಾರಣಕ್ಕೂ ಮುಳುವಾಗಲಾರರು ಎಂಬುದನ್ನು ಅರಿತೇ ಸೋನಿಯಾ ಗಾಂಧಿ ಈ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ರಾಷ್ಟ್ರ ರಾಜಕಾರಣದ ಹಿನ್ನೆಲೆ ಹೊಂದಿರದ ಮನಮೋಹನ್​ ಸಿಂಗ್​ ತಮ್ಮ ಮಗನ ರಾಜಕೀಯ ಬೆಳವಣಿಗೆಗೆ ತೊಡಕಾಗೋದಿಲ್ಲ ಅನ್ನುವುದು ಸೋನಿಯಾ ಗಾಂಧಿಯವರಿಗೆ ಗೊತ್ತಿತ್ತು ಎಂದು ಬರೆದಿದ್ದಾರೆ.
ದೇಶದ ಆರ್ಥಿಕ ಸುಧಾರಣೆಯಲ್ಲಿ ಮನಮೋಹನ್​ ಸಿಂಗ್​​ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮುಂಬೈ ಮೇಲೆ ದಾಳಿ ನಡೆದ ಬಳಿಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮನಮೋಹನ್​ ಸಿಂಗ್​ ಸಿದ್ಧರಿರಲಿಲ್ಲ. ಇದು ಮನಮೋಹನ್​ ಸಿಂಗ್​ ರಾಜಕೀಯ ಜೀವನಕ್ಕೆ ಮುಳುವಾಯಿತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.(ಏಜೆನ್ಸೀಸ್​)
ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಟ್ಯಾಂಕರ್​ಗೆ ಢಿಕ್ಕಿ: ಕಾರು ನಜ್ಜುಗುಜ್ಜು!

ತಡವಾಗಿ ಬಂದದ್ದೂ ಅಲ್ಲದೇ ವಿಮಾನಯಾನ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ ಸಬ್​ ಇನ್ಸ್​ಪೆಕ್ಟರ್​!

ಹೂಜಿಯಲ್ಲಿನ ನೀರು ಮೇಲೆ ಬರಲು ಕಾಗೆ ಕಲ್ಲು ಹಾಕಿರೋ ಕಥೆ ನೆನಪಿದ್ಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 5 =
Remember me
