ಅಗರ್ತಲಾ:ಗಂಡನನ್ನು ಬೆಡ್‌ರೂಮ್‌ನಲ್ಲಿಯೇ ಕೊಂದು, ಅಲ್ಲಿಯೇ ಸಮಾಧಿ ಮಾಡಿ ನಂತರ ಪೊಲೀಸರಿಗೆ ಯುವತಿ ಶರಣಾಗಿರುವ ಘಟನೆ ಅಗರ್ತಲಾದಲ್ಲಿ ನಡೆದಿದೆ.
ಭಾರತಿ ರೆಂಗ್‌ ಎಂಬ 25 ವರ್ಷದ ಯುವತಿ ಗಂಡನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಈಕೆ ತನ್ನ ಗಂಡ 30 ವರ್ಷದ ಸಂಜಿತ್‌ನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ.
ಭಾರತಿ ನೀಡದ ಹೇಳಿಕೆ ಮೇರೆಗೆ ಪೊಲೀಸರು ಧಲೈ ಜಿಲ್ಲೆಯ ಗಂಡಚೆರಾ ಉಪವಿಭಾಗದ ಹಳ್ಳಿಯೊಂದಕ್ಕೆ ಹೋಗಿ ನೋಡಿದಾಗ ಪತಿಯ ಶವ ಬೆಡ್‍ರೂಮಿನಲ್ಲಿ ದೊರಕಿದೆ. ಶವವನ್ನು ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಮಾನಯಾನ ಭದ್ರತಾ ಸಂಸ್ಥೆ ಮಹಾನಿರ್ದೇಶಕರ ಸ್ಥಾನಕ್ಕೆ ಮೊದಲ ಮಹಿಳೆ
ಆದರೆ ತಾನೇಕೆ ಗಂಡನನ್ನು ಕೊಲೆ ಮಾಡಿದೆ, ಕೊಲೆ ಮಾಡಿ ನೇರವಾಗಿ ಪೊಲೀಸರಿಗೆ ಹೇಳುವ ಬದಲು ಅಲ್ಲಿಯೇ ಏಕೆ ಸಮಾಧಿ ಮಾಡಿದೆ ಎಂಬ ಬಗ್ಗೆ ಪೊಲೀಸರು ಎಷ್ಟೇ ಕೇಳಿದರೂ ಆರೋಪಿ ಭಾರತಿ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ದಂಪತಿಗೆ ಆರು ವರ್ಷದ ಮಗಳಿದ್ದಾಳೆ. ಕೊಲೆಗೆ ಕಾರಣ ತಿಳಿಯುವುದು ಕಷ್ಟವಾಗಿದೆ, ಏಕೆಂದರೆ ಭಾರತಿ ಏನೂ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.
ಗಂಟಲದ್ರವದ ಬದಲು ಯುವತಿಯ ಯೋನಿದ್ರವ ಪಡೆದ ಲ್ಯಾಬ್‌ ಭೂಪ!

ಬೇರೆ ಮದ್ವೆ ಆಗು- ದೈಹಿಕ ಸಂಬಂಧ ನನ್ ಜತೆ ಮುಂದುವರೆಸು ಎಂದ ‘ಅಂಕಲ್’: ಮುಂದೇನಾಯ್ತು?

ಅರ್ಚಕರ ಭೂಸಮಾಧಿ ಸ್ಥಳದಲ್ಲಿ ಸಿಕ್ಕಿದೆ ‘ಸಮಾಧಿ ನಿರ್ಣಯ’ ಪುಸ್ತಕ! ಉತ್ತರ ಸಿಗದ ಮರಣ ರಹಸ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seven =
Remember me
