ಉಟ್ರೇಕ್ಟ್‌ (ಫ್ರಾನ್ಸ್‌):ಪೇಂಟಿಂಗ್‌ ಎನ್ನುವುದು ಕೆಲವರಿಗೆ ಅದೇನೋ ಬಿಡಿಸಲಾರದ ನಂಟು. ಅದರಲ್ಲಿಯೂ ಪ್ರಸಿದ್ಧ ಕಲಾವಿದರ ಪೇಂಟಿಂಗ್‌ನಲ್ಲಿ ಅಡಗಿರುವ ಅಂಶಗಳು ಸಾಮಾನ್ಯ ಜನರಿಗೆ ತಿಳಿಯುವುದೇ ಇಲ್ಲ. ಆದರೆ ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದಿರುವ ನಿಗೂಢ ಅರ್ಥವನ್ನು ಹೊಂದಿರುವ ಆ ಪೇಂಟಿಂಗ್‌ ಇನ್ನೊಬ್ಬ ಕಲಾವಿದನಿಗೆ ಮಾತ್ರ ಅರ್ಥವಾಗಲು ಸಾಧ್ಯ.
ಅಂಥದ್ದೇ ಒಂದು ಪೇಂಟಿಂಗ್‌ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಫ್ರಾನ್ಸ್‌ನಲ್ಲಿರುವ ಉಟ್ರೇಕ್ಟ್‌ನ ಲೀರ್‌ಡ್ಯಾಮ್ ಪಟ್ಟಣದ ವಸ್ತುಸಂಗ್ರಹಾಲಯದಲ್ಲಿ ಇರುವ ಈ ಪೇಂಟಿಂಗ್‌ ಇದೀಗ ಮೂರನೇ ಬಾರಿ ಕಳ್ಳತನವಾಗಿದೆ!
ಹೌದು. ಈ ಪೇಂಟಿಂಗ್‌ ಕಲಾಸಕ್ತರಿಗೆ ಅಷ್ಟು ಹುಚ್ಚುಹಿಡಿದಿದೆ. ಅಷ್ಟಕ್ಕೂ ಈ ಪೇಂಟಿಂಗ್‌ ರಚನೆ ಮಾಡಿರುವುದು ಕೆಲ ವರ್ಷ ಅಥವಾ ದಶಕಗಳ ಹಿಂದಲ್ಲ. ಬದಲಿಗೆ ಇದನ್ನು ರಚಿಸಿರುವುದು 1626ರಲ್ಲಿ! ಅಂದರೆ 394 ವರ್ಷಗಳ ಹಿಂದೆ ರಚಿಸಲಾಗಿದೆ ಈ ಪೇಂಟಿಂಗ್‌.ಡಚ್‌ ಕಲಾವಿದ ಫ್ರಾನ್ಸ್ ಹಾಲ್ಸ್ ಎಂಬಾತ ರಚಿಸಿರುವ ಈ ಪೇಟಿಂಗ್‌ ಹೆಸರು ‘ಲಾಫಿಂಗ್ ಬಾಯ್ಸ್ ವಿತ್ ಎ ಮಗ್ ಆಫ್ ಬಿಯರ್’. ಇದರಲ್ಲಿ ಒಬ್ಬ ಹುಡುಗ ಬಿಯರ್‌ ಬಾಟಲಿಯನ್ನು ಹಿಡಿದು ಮುಖದಲ್ಲಿ ಮಂದಹಾಸ ಮೂಡಿಸಿಕೊಂಡಿರುವ ಚಿತ್ರವಿದೆಯಷ್ಟೇ.
ಸಾಮಾನ್ಯ ಜನರು ನೋಡಿದರೆ ಇದರಲ್ಲೇನಿದೆ ಎನ್ನಬಹುದು. ಆದರೆ ಈ ಪೇಂಟಿಂಗ್‌ ನಲ್ಲಿ ಜೀವನೋತ್ಸಾಹವಿದೆ, ಇದನ್ನು ನೋಡಿದರೆ ಎಂಥವರಿಗೂ ಜೀವನದಲ್ಲಿ ಉತ್ಸಾಹ ಮೂಡುತ್ತದೆ ಎನ್ನುವುದು ಕಲಾರಸಿಕರ ವಾದ.
ಇದನ್ನೂ ಓದಿ:ಕಚೇರಿಯಲ್ಲಿಯೇ ಕುಷ್ಟಗಿ ತಹಶೀಲ್ದಾರನಿಂದ ‘ಕಿಸ್‌’ ಪಡೆದ ಸಂತ್ರಸ್ತೆಯಿಂದ ಇದೀಗ ದೂರು ದಾಖಲು
ಇದೇ ಕಾರಣಕ್ಕೆ ಇದಾಗಲೇ ಇದು ಈ ಹಿಂದೆ ಎರಡು ಬಾರಿ ಕಳುವಾಗಿತ್ತು, ಇದೀಗ ಮೂರನೇ ಬಾರಿ ಕಳುವಾಗಿದೆ.
1988ರಲ್ಲಿ ಮೊದಲ ಬಾರಿಗೆ ಇದನ್ನು ಕಳ್ಳತನ ಮಾಡಲಾಗಿತ್ತು. ನಂತರ ಮೂರು ವರ್ಷಗಳ ಸತತ ಹುಡುಕಾಟದ ನಂತರ ಇದನ್ನು ಕಾರ್ಯಕ್ರಮವೊಂದರಲ್ಲಿ ಪ್ರದರ್ಶನಕ್ಕೆ ಇಟ್ಟಿರುವುದು ಪತ್ತೆಯಾಗಿ, ಅದನ್ನು ವಾಪಸ್‌ ತೆಗೆದುಕೊಳ್ಳಲಾಗಿತ್ತು.
ನಂತರ 2011ರಲ್ಲಿ ಮತ್ತೆ ಕಳುವಾಗಿತ್ತು. ಆಗಲೂ ಪೊಲೀಸರು ಇದನ್ನು ಕಷ್ಟಪಟ್ಟು ಹುಡುಕಿ ಪಡೆದುಕೊಂಡಿದ್ದರು. ಇದೀಗ ಇದನ್ನು ಹೊಫ್ಜೆ ವ್ಯಾನ್ ಏರ್ಡೆನ್ ವಸ್ತುಸಂಗ್ರಹಾಲಯದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇಡಲಾಗಿದೆ. ಆದರೂ ವಸ್ತುಸಂಗ್ರಹಾಲಯದ ಹಿಂಬಾಗಿಲನ್ನು ಕಳ್ಳರು ಬಲವಂತವಾಗಿ ಒಡೆದು ಪೇಂಟಿಂಗ್‌ ಕಳುವು ಮಾಡಿಕೊಂಡು ಹೋಗಿದ್ದಾರೆ. ಇದೀಗ ಇದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ಅಂದಹಾಗೆ ಕಲಾವಿದ ಫ್ರಾನ್ಸ್ ಹಾಲ್ಸ್ 1666ರಲ್ಲಿ ನಿಧನಹೊಂದಿದರು.
ಕಚೇರಿಯಲ್ಲಿಯೇ ಕುಷ್ಟಗಿ ತಹಶೀಲ್ದಾರನಿಂದ ‘ಕಿಸ್‌’ ಪಡೆದ ಸಂತ್ರಸ್ತೆಯಿಂದ ಇದೀಗ ದೂರು ದಾಖಲು

ಕುಲ್‌ಭೂಷಣ್‌ ಜಾಧವ್‌ ಪರ ವಾದಿಸಲು ಭಾರತದ ವಕೀಲರನ್ನು ಬಿಡಲ್ಲ ಎಂದ ಪಾಕ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
