ತಿರುವನಂತಪುರ (ಕೇರಳ):ಏನೇ ತಪ್ಪು ಆಗಲಿ, ಮೊದಲು ಶಿರಚ್ಛೇದನ ಮಾಡಿ. ಅದೇ ಅವರಿಗೆ ಸರಿಯಾದ ಶಿಕ್ಷೆ ಎಂದು ಮದರಸಾಗಳಲ್ಲಿ ಕಲಿಸಿಕೊಡಲಾಗುತ್ತದೆ, ಇದನ್ನೇ ದೇವರ ನಿಯಮ ಎಂದು ಅಲ್ಲಿ ಕಲಿಸಿಕೊಡಲಾಗುತ್ತದೆ. ಅದಕ್ಕಾಗಿಯೇ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ಎಂದು ಕೇರಳ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಅವರ ರುಂಡವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ. ಹಿಂದೂ ದೇವರನ್ನು ಅವಹೇಳನ ಮಾಡಿರುವ ಕೆಲ ವ್ಯಕ್ತಿಗಳ ಹೇಳಿಕೆಯನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಅವರ ವಿರುದ್ಧ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಹೇಳಿಕೆ ನೀಡಿದ್ದರು. ಇದರ ಕುರಿತು ಭಾರಿ ಪ್ರತಿಭಟನೆ ಶುರುವಾಗಿದೆ. ಆದರೆ ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯಲಾಲ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಇದನ್ನು ವಿರೋಧಿಸಿ ಅವರ ಶಿರವನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಘಟನೆ ಕುರಿತು ರಾಷ್ಟ್ರವ್ಯಾಪಿ ಭಾರಿ ಖಂಡನೆ ವ್ಯಕ್ತವಾಗುತ್ತಲೇ ಕೇರಳ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ಈ ಮಾತನ್ನು ಹೇಳಿದ್ದಾರೆ.
ಮದರಸಾಗಳಲ್ಲಿ ಮಕ್ಕಳಿಗೆ ಏನು ಕಲಿಸಿಕೊಡುತ್ತಾರೆ ಎಂಬುವುದನ್ನು ಪರಿಶೀಲಿಸುವ ಅಗತ್ಯವಿದೆ. ಆದರೆ ನಾವು ಆ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಇಂಥ ಘಟನೆಗಳು ನಡೆದಾಗ, ಇಂಥ ರೋಗಲಕ್ಷಣಗಳು ಕಂಡು ಬಂದಾಗ ಮಾತ್ರವೇ ನಾವು ಚಿಂತಿಸುತ್ತೇವೆ. ಉಳಿದ ಸಂದರ್ಭದಲ್ಲಿ ಇಂಥ ಕ್ರೂರತೆಯ ಆಳವನ್ನು ತಿಳಿದುಕೊಳ್ಳಲು ನಾವು ನಿರಾಕರಿಸುತ್ತೇವೆ ಎಂದು ಖಾನ್​ ಹೇಳಿದ್ದಾರೆ.
ಅಪ್ಪನನ್ನು ಪೊಲೀಸ್ರು ಬಂಧಿಸಿದ್ರು, ಬೆದರಿಕೆ ಕಂಪ್ಲೇಂಟ್​ ಕೊಟ್ರೂ ಕೇರೇ ಮಾಡ್ಲಿಲ್ಲ: ಟೈಲರ್​ ಕನ್ಹಯ್ಯ ಮಕ್ಕಳಿಂದ ಶಾಕಿಂಗ್​ ಹೇಳಿಕೆ

ನನ್ನ ಪತಿಯ ಶಿರಚ್ಛೇದ ಮಾಡಿದವರಿಗೆ ಗಲ್ಲು ವಿಧಿಸಿ: ಅಂತ್ಯಕ್ರಿಯೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಕನ್ಹಯ್ಯಾ ಪತ್ನಿ

ಟೈಲರ್​ ಹತ್ಯೆ ಮಾಡಿದ ಕ್ರೂರಿಗಳಿಗೆ ಪಾಕ್​ ಲಿಂಕ್​! ಎನ್​ಐಎ ತನಿಖೆ- ಜೀವದ ಹಂಗುತೊರೆದ ಪೊಲೀಸರಿಗೆ ಬಡ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
