ಬೆಲ್ಜಿಯಂ:ದೇಶ, ಭಾಷೆ ಯಾವುದಾದರೇನು? ಪತಿ, ಮಕ್ಕಳು, ಕುಟುಂಬದ ವಿಷಯ ಬಂದರೆ ಎಷ್ಟೋ ಮಹಿಳೆಯರು ಯಾವ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಇದಕ್ಕೀಗ ತಾಜಾ ಉದಾಹರಣೆಯಾಗಿದ್ದಾರೆ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಾಗೂ ಉಪ ಪ್ರಧಾನಿ ಸೋಫಿ ವಿಲ್​ಮ್ಸ್​.
ಅಧಿಕಾರದ ಆಸೆಗೆ, ಅಧಿಕಾರ ಪಡೆದುಕೊಳ್ಳಲು ಏನೂ ಮಾಡಲು ಹೇಸದ ವರ್ಗ ಒಂದೆಡೆಯಾದರೆ, ಪತಿಗಾಗಿ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ ಸೋಫಿ. ಗಂಡನ ಕಾಳಜಿ ವಹಿಸುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.
ಸೋಫಿ ಅವರ ಪತಿ ಆಸ್ಟ್ರೇಲಿಯಾದ ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್. ಮೆದುಳಿನ ಕ್ಯಾನ್ಸರ್​ನಿಂದ ಅವರು ಬಳಲುತ್ತಿದ್ದಾರೆ. ಉಪ ಪ್ರಧಾನಿ ಸ್ಥಾನದಲ್ಲಿ ಇದ್ದುಕೊಂಡು ಅದರ ಕರ್ತವ್ಯದ ನಡುವೆ ಗಂಡ-ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ತಾವು ರಾಜೀನಾಮೆ ನೀಡುವುದಾಗಿ ಸೋಫಿ ಘೋಷಿಸಿದ್ದಾರೆ.
ಹಾಗೆ ನೋಡಿದರೆ, ಮನೆಯಲ್ಲಿ ಆಳು-ಕಾಳುಗಳಿಗೇನೂ ಕೊರತೆ ಇಲ್ಲ. ತಜ್ಞರಲ್ಲಿ ತಜ್ಞ ವೈದ್ಯರನ್ನು ಮನೆಯಲ್ಲಿಯೇ ಇರಿಸಿಕೊಂಡು ಗಂಡನ ಆರೈಕೆ ಮಾಡುವಷ್ಟು ತಾಕತ್ತು ಕೂಡ ಇವರಲ್ಲಿ ಇದೆ. ಆದರೆ ಪತ್ನಿಯಾಗಿ ಪತಿಯ ಆರೈಕೆ ಮಾಡಲು ಸಾಧ್ಯವಾಗದೇ ದೇಶದ ಜವಾಬ್ದಾರಿಯನ್ನು ಹೊರುವುದು ತಮ್ಮಿಂದ ಆಗದು ಎಂದಿರುವ ಸೋಫಿ, ಪ್ರಧಾನಿ ಸ್ಥಾನಕ್ಕಿಂತ ಪತ್ನಿಯ ಸ್ಥಾನವೇ ಮೇಲು ಎಂದು ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸೋಫಿ, 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. 2019ರಿಂದ 2020ರವರೆಗೆ ಬೆಲ್ಜಿಯಂನ ಪ್ರಧಾನ ಮಂತ್ರಿಯಾಗಿದ್ದರು. ಸುಧಾರಣಾವಾದಿ ಚಳವಳಿಯ ಸದಸ್ಯೆಯಾದ ಅವರು ಎರಡೂ ಪ್ರಮುಖ ಸ್ಥಾನಗಳನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.
2014 ರಲ್ಲಿ ಚೇಂಬರ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದರು. 2015ರಿಂದ 2019ರವರೆಗೆ ಚಾರ್ಲ್ಸ್ ಮೈಕೆಲ್ ಅವರ ಮೊದಲ ಮತ್ತು ಎರಡನೆಯ ಸರ್ಕಾರಗಳಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದರು. ಕೋವಿಡ್​-19 ಸಮಯದಲ್ಲಿ ಕರೊನಾ ನಿಭಾಯಿಸುವ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದರು.
2002ರಲ್ಲಿ, ಸೋಫಿ ಆಸ್ಟ್ರೇಲಿಯಾದ ಉದ್ಯಮಿ ಮತ್ತು ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಪುತ್ರಿಯರಿದ್ದಾರೆ. ವಿಕ್ಟೋರಿಯಾ, ಷಾರ್ಲೆಟ್ ಮತ್ತು ಎಲಿಜಬೆತ್.
ಮಾಂಗಲ್ಯ ಬಿಚ್ಚಿಡುವುದು ಪತಿಗೆ ನೀಡುವ ಮಾನಸಿಕ ಕ್ರೌರ್ಯದ ಪರಾಕಾಷ್ಠೆ- ಡಿವೋರ್ಸ್​ಗೆ ಹೈಕೋರ್ಟ್​ ಅಸ್ತು!

ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಫೋಟೋ/ವಿಡಿಯೋ ಬ್ಯಾನ್​: ಹೊರಟಿದೆ ಈ ಸುತ್ತೋಲೆ

VIDEO: ರಿಯಲ್​ ಲೈಫ್​ ಬಾಹುಬಲಿ! ಮಗುವನ್ನು ತಲೆಯ ಮೇಲಿನ ಪಾತ್ರೆಯಲ್ಲಿಟ್ಟು ಪ್ರವಾಹ ದಾಟಿದ ದೊಡ್ಡಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
