ಕೋಲ್ಕತಾ:ಪಶ್ಚಿಮ ಬಂಗಾಳದಲ್ಲಿ ನಟ-ನಟಿಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಕಳೆದ 2-3 ತಿಂಗಳಿನಿಂದ ಬಂಗಾಳಿ ಬಂಗಾಳಿ ನಟರಾದ ಪಲ್ಲವಿ ಡೇ, ಬಿದಿಶಾ ಡಿ ಮಜುಂದಾರ್ ಮತ್ತು ಮಾಡೆಲ್-ನಟಿ ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೆಲ ತಿಂಗಳ ನಂತರ ಶ್ರೀ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ವರದಿಯಾಗಿದೆ.
ಬಂಗಾಳಿಯ ಖ್ಯಾತ ಕಿರುತೆರೆ ನಟ ಸೈಬಲ್ ಭಟ್ಟಾಚಾರ್ಯ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಪಶ್ಚಿಮ ಬಂಗಾಳದ ಕಸ್ಬಾದಲ್ಲಿ ಇವರು ನೆಲೆಸಿದ್ದು, ರಾತ್ರಿ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದುಬಂದಿದೆ. ಪತ್ನಿ ಹಾಗೂ ಅತ್ತೆಯ ಸಲುವಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗಿದೆ ಎಂದು ಫೇಸ್​ಬುಕ್​ ಲೈವ್​ನಲ್ಲಿ ಬಂದು ಹೇಳಿದ್ದಾರೆ. ಆದರೆ ಅವರು ಮಾತು ಪೂರ್ಣಗೊಳಿಸುವ ಮುನ್ನವೇ ವಿಡಿಯೋ ಕಟ್​ ಆಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಅವರು ತಮ್ಮ ದೇಹವನ್ನು ತುಂಬಾ ಹಿಂಸಿಸಿಕೊಂಡಿದ್ದರು. ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಪೆಟ್ಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ. ಮೂಲಗಳ ಪ್ರಕಾರ ಸೈಬಲ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೈಬಲ್ ಭಟ್ಟಾಚಾರ್ಯ ಬೆಂಗಾಲಿ ಕಿರುತೆರೆಯಲ್ಲಿ ಜನಪ್ರಿಯ ಹೆಸರು. ಕರಿಖೇಲಾ, ಉದನ್ ತುಬ್ರಿ, ಪ್ರಥಮ ಕಾದಂಬಿನಿ, ಮಿಠಾಯಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕಿರುತೆರೆ ಲೋಕದಲ್ಲಿ ದೀರ್ಘಕಾಲ ಸೇವೆಸಲ್ಲಿಸಿರುವ ಸೈಬಲ್ ಭಟ್ಟಾಚಾರ್ಯ ಅವರಿಗೆ ಇತ್ತೀಚಿಗೆ ಅವಕಾಶಗಳು ಸಿಗುತ್ತಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಅವಕಾಶಕ್ಕಾಗಿ ಪರದಾಡುತ್ತಿದ್ದರು ಎನ್ನಲಾಗಿದೆ. ಧಾರಾವಾಹಿ ಅವಕಾಶ ಇಲ್ಲದ ಕಾರಣ ಖಿನ್ನತೆಗೆ ಒಳಗಾಗಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಹಾಗೂ ಅತ್ತೆಯ ಸಲುವಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗಿದೆ ಎಂದು ಏಕೆ ಹೇಳಿದ್ದಾರೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ(ಏಜೆನ್ಸೀಸ್​)
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ವರವರ ರಾವ್​ಗೆ ಜಾಮೀನು: ಸುಪ್ರೀಂಕೋರ್ಟ್​ ಹೇಳಿದ್ದೇನು?

ಡೆಂಘೆಯಿಂದ ಬೆಳಲಿ ಬೆಂಡಾದರೂ ಕ್ಯಾರೇ ಎನ್ನದ ‘ಇಂದಿರಾ ಗಾಂಧಿ’! ದೇಹಕ್ಕಷ್ಟೇ ಅನಾರೋಗ್ಯ ಎಂದ ನಟಿ

ಪ್ರಿಯಾಂಕಾ ಗಾಂಧಿಗೆ ಕರೊನಾ: ಎರಡು ತಿಂಗಳಲ್ಲೇ ಮತ್ತೆ ಕಾಣಿಸಿಕೊಂಡ ಸೋಂಕು- ಟ್ವೀಟ್​ ಮೂಲಕ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 7 =
Remember me
