ನವದೆಹಲಿ:ಇತ್ತೀಚೆಗಂತೂ ಫೇಕ್​ ಸುದ್ದಿಗಳ ಭರಾಟೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಸಾಗುತ್ತದೆ. ಯಾವುದೋ ಒಂದು ಸುದ್ದಿ ಎಲ್ಲಿಯೋ ಬಂತೆಂದರೆ ಸಾಕು, ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೇ ಫಾರ್ವರ್ಡ್​ ಮಾಡಲಾಗುತ್ತದೆ.
ಇದರಿಂದ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದೆ. ಅಂಥದ್ದೇ ಒಂದು ಸುದ್ದಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಬಗ್ಗೆ ಇದೀಗ ಹರಿದಾಡುತ್ತಿದೆ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುರು ಮಾಡಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಹೆಣ್ಣುಮಕ್ಕಳಿಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದೆ.
ಇದನ್ನು ನಿಜವೆಂದೇ ನಂಬಿರುವ ಹಲವರು ಸಂದೇಶಗಳನ್ನು ಶೇರ್​ ಮಾಡುತ್ತಲೇ ಸಾಗಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳುಸುದ್ದಿಯಾಗಿದ್ದು, ಇಂಥ ಯಾವುದೇ ಯೋಜನೆ ಸರ್ಕಾರದಿಂದ ಜಾರಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.
ಇದನ್ನೂ ಓದಿ:ಸೊಳ್ಳೆಗಳಿಗೆ ದಿನವೂ ರಕ್ತ ಕುಡಿಸುತ್ತಾರೆ ಈ ವಿಜ್ಞಾನಿ- ಕಾರಣ ಏನು ಗೊತ್ತಾ?
ಈ ಸುದ್ದಿ ನಕಲಿ ಎಂದು ಟ್ವೀಟ್ ಮೂಲಕ ಪಿಐಬಿ ಮಾಹಿತಿ ನೀಡಿದೆ. ಇದು ಸುಳ್ಳು ಸುದ್ದಿ. ಈ ಯೋಜನೆಯಡಿ ಯಾವುದೇ ನಗದು ಪ್ರೋತ್ಸಾಹವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಯಾವುದಾದರೂ ಸುದ್ದಿ ಅಸಲಿಯೋ, ನಕಲಿಯೋ ಎಂದು ತಿಳಿಯಲು ಅದರ ಸ್ಕ್ರೀನ್‌ಶಾಟ್, ಟ್ವೀಟ್, ಫೇಸ್‌ಬುಕ್ ಪೋಸ್ಟ್ ಅಥವಾ ಯುಆರ್‌ಎಲ್ ನಕಲಿ ಮೂಲಕ ಪಿಐಬಿ ಫ್ಯಾಕ್ಟ್ ಚೆಕ್‌ ವಾಟ್ಸಾಪ್ ಸಂಖ್ಯೆ 918799711259 ಗೆ ಕಳುಹಿಸಬಹುದು ಎಂದು ಅದು ಹೇಳಿದೆ.
ಬಾಬ್ರಿಮಸೀದಿ ತೀರ್ಪಿನಲ್ಲಿವೆ ಸ್ಫೋಟಕ ಮಾಹಿತಿ: ಪಾಕ್ ಕೈವಾಡದ ‘ಮೌನ’ದ ಕುರಿತು ನ್ಯಾಯಾಧೀಶರ ಪ್ರಶ್ನೆ

ಹತ್ರಾಸ್​ ಸಂತ್ರಸ್ತೆ ಕುಟುಂಬದ ಭೇಟಿಗೆ ಅವಕಾಶ ನೀಡುತ್ತಿಲ್ಲ: ನಿರ್ಭಯಾ ವಕೀಲೆಯಿಂದ ಆಕ್ರೋಶ

https://www.vijayavani.net/s-nyayadevate-6/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 19 =
Remember me
