ಲಖನೌ:ಸ್ವಾತಂತ್ರ್ಯೋತ್ಸವ ಎಂದರೆ ಮಕ್ಕಳಿಗೆ ವಿವಿಧ ಹೋರಾಟಗಾರರ ಪಾತ್ರವನ್ನು ಅಭಿನಯಿಸುವ ತವಕ. ಅದಲ್ಲಿಯೂ ಕ್ರಾಂತಿಕಾರಿ ಭಗತ್​ಸಿಂಗ್​ನ ಬಲಿದಾನದ ಪಾತ್ರ ಮಾಡುವುದು ಮಕ್ಕಳಿಗೆ ಅಚ್ಚುಮೆಚ್ಚು. ಇದರ ಅಭ್ಯಾಸ ಮಾಡುತ್ತಿರುವ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಬಡೌನ್ ಹಳ್ಳಿಯಲ್ಲಿ ನಡೆದಿದೆ.
ಶಿವಂ ಎಂಬ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಭಗತ್ ಸಿಂಗ್ ಅವರಿಗೆ ನೇಣು ಹಾಕುವ ದೃಶ್ಯವನ್ನು ಪ್ರಾಕ್ಟೀಸ್​ ಮಾಡಲು ಹೋದ ಸಂದರ್ಭದಲ್ಲಿ ಅಕಸ್ಮಾತ್ತಾಗಿ ನೇಣು ಕೊರಳಿಗೆ ಬಿಗಿದು ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ.
ನೇಣಿನ ಸೀನ್​ ಪ್ರಾಕ್ಟೀಸ್ ವೇಳೆ ಬಾಲಕ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸವ ದೃಶ್ಯವನ್ನು ಅಭ್ಯಾಸ ಮಾಡುತ್ತಿದ್ದ. ಆಗ ಕುತ್ತಿಗೆಗೆ ಕುಣಿಕೆಯನ್ನು ಕಟ್ಟಿಕೊಂಡು ಸ್ಟೂಲ್ ಮೇಲೆ ನಿಂತಿದ್ದ. ಈ ವೇಳೆ ಕಾಲು ಜಾರಿ ಸ್ಟೂಲ್​ಕೆಳಗೆ ಬಿದ್ದಿದೆ. ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಹಿಂದೆ ಅಂದರೆ 2020ರ ಫೆಬ್ರುವರಿ ತಿಂಗಳಿನಲ್ಲಿ ಕೂಡ ಪ್ರಿಯಾಂಶು ಮಾಲ್ವಿಯಾ ಎಂಬ 12 ವರ್ಷದ ಬಾಲಕ ಇದೇ ರೀತಿ ಭಗತ್​ಸಿಂಗ್​ ಪಾತ್ರ ಪ್ರಾಕ್ಟೀಸ್​ ಮಾಡುವಾಗ ಅಕಸ್ಮಾತ್ತಾಗಿ ಉರುಳಿಗೆ ಕೊರಳೊಡ್ಡಿ ಮೃತಪಟ್ಟಿದ್ದ. ಆದ್ದರಿಂದ ಮಕ್ಕಳು ಈ ರೀತಿಯ ಪಾತ್ರಗಳನ್ನು ಪ್ರಾಕ್ಟೀಸ್​ ಮಾಡುವಾಗ ಮಕ್ಕಳು ಎಚ್ಚರದಿಂದ ಇರಲೇಬೇಕು, ಜತೆಗೆ ಪಾಲಕರು ಮಕ್ಕಳ ಮೇಲೆ ನಿಗಾ ವಹಿಸುವುದು ಅಥವಾ ಅವರಿಗೆ ಇಂಥ ಪಾತ್ರ ಮಾಡುವಾಗ ಹೇಗೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಿವರಿಸುವುದು ಅಗತ್ಯ ಎನ್ನುತ್ತಾರೆ ಪೊಲೀಸರು.
ಉದ್ಯೋಗವಿಲ್ಲವೆಂದು ಗೋಳೋ ಎನ್ನುತ್ತಿರುವವರೆಲ್ಲರೂ 80 ವರ್ಷದ ಈ ಅಜ್ಜಿಯನ್ನೊಮ್ಮೆ ನೋಡಿ…
ಅಪ್ರಾಪ್ತೆಯ ಕೈಹಿಡಿದು ಪ್ರೀತಿ ವ್ಯಕ್ತಪಡಿಸಿದರೆ ಲೈಂಗಿಕ ದೌರ್ಜನ್ಯವಾಗತ್ತಾ? ಕೋರ್ಟ್​ ಏನು ಹೇಳಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + sixteen =
Remember me
