ಅಹಮದಾಬಾದ್​ (ಗುಜರಾತ್):ಕೇಂದ್ರದ ಮಾಜಿ ಸಚಿವ, ಗುಜರಾತ್​ನ ಕಾಂಗ್ರೆಸ್​ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ಯುವತಿಯೊಬ್ಬಳ ಜತೆ ಏಕಾಂತದಲ್ಲಿ ಇರುವಾಗ ಪತ್ನಿಯ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಘಟನೆ ನಿನ್ನೆ (ಜೂನ್​ 2) ನಡೆದಿದ್ದು, ಇದು ಭಾರಿ ಸಂಚಲನ ಸೃಷ್ಟಿಸಿದೆ.
ಪತಿಯ ಬಗ್ಗೆ ಸಂದೇಹವಿದ್ದ ಕಾರಣ, ಸಮಯಕ್ಕಾಗಿ ಕಾದು ಪತಿಯನ್ನು ಹಿಡಿದುಹಾಕಿದ್ದಾರೆ ಪತ್ನಿ ರೇಷ್ಮಾ. ತಮ್ಮ ಪತ್ನಿಗೆ ತಿಳಿಯದಂತೆ ಬಂಗಲೆಯೊಂದರಲ್ಲಿ ಯುವತಿಯ ಜತೆ ಇರುವಾಗ ಪತ್ನಿ ಪ್ರವೇಶಿಸಿ ಜೋರಾಗಿ ಗಲಾಟೆ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಮಾಜಿ ಸಚಿವರನ್ನು ಭಾರಿ ಮುಜುಗರಕ್ಕೆ ಈಡು ಮಾಡಿದೆ.
ಭರತ್​ಸಿಂಗ್​ ಮತ್ತು ಪತ್ನಿಯ ನಡುವೆ ವೈಮಸ್ಸು ಇತ್ತು. ಇದರ ಕುರಿತು ಕೋರ್ಟ್​ನಲ್ಲಿ ಕೂಡ ಕೇಸ್​ ನಡೆಯುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಪತಿಗೆ ಡಿವೋರ್ಸ್​ ಕೊಡುವುದಿಲ್ಲ ಎನ್ನುತ್ತಿದ್ದಾರೆ ಪತ್ನಿ. ಇದೀಗ ಇನ್ನೋರ್ವ ಯುವತಿ ಜತೆ ಸಂಬಂಧ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಇದರ ವಿಡಿಯೋ ವೈರಲ್​ ಆಗುತ್ತಲೇ ಸೋಲಂಕಿ ಪತ್ರಿಕಾಗೋಷ್ಠಿ ಮಾಡಿದ್ದು, ಕೆಲವೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಜತೆಗೆ ತಾವು ಹೀಗೆ ಮಾಡಿದ್ದೇಕೆ ಎಂದೂ ವಿವರಿಸಿದ್ದಾರೆ.
ನಾನು ಯುವತಿಯ ಜತೆ ಇದದ್ದು ನಿಜ. ಆದರೆ ಈ ಸುದ್ದಿ ಹೀಗೆಲ್ಲಾ ವೈರಲ್​ ಆಗಿರುವುದು ತುಂಬಾ ಬೇಸರ ತಂದಿದೆ. ಆದ್ದರಿಂದ ತಾತ್ಕಾಲಿಕವಾಗಿ ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ಪಡೆಯುತ್ತಿದ್ದೇನೆ ಎಂದಿದ್ದಾರೆ.
ಅದೇ ರೀತಿ ಪತ್ನಿ ಮತ್ತು ಆ ಯುವತಿಯ ಕುರಿತೂ ಅವರು ಮಾತನಾಡಿದ್ದಾರೆ. ನಾನು ಮತ್ತು ಯುವತಿ ಉತ್ತಮ ಸಂಬಂಧ ಹೊಂದಿರುವುದು ನಿಜ.  ಇಬ್ಬರೂ ಮದುವೆಯಾಗಲು ಬಯಸಿದ್ದೇವೆ. ನನ್ನ ಪತ್ನಿಯ ರೇಷ್ಮಾಳ ಸೀಕ್ರೇಟ್​ ಹೇಳಿದರೆ ನಿಮಗೇ ನಾನು ಏಕೆ ಹೀಗೆ ಮಾಡಿದೆ ಎಂದು ಅರ್ಥವಾಗುತ್ತದೆ. ಕಳೆದ 15 ವರ್ಷಗಳಿಂದ ರೇಷ್ಮಾ ಜೊತೆಗೆ ಹೇಗೆ ಕಳೆದಿದ್ದೇನೆ ಎಂಬುದು ನನಗೆ ಗೊತ್ತಿದೆ. 12-13 ವರ್ಷಗಳಿಂದಲೂ ಜಗಳದಲ್ಲೇ ನಮ್ಮ ಜೀವನ ಹೋಗಿದೆ. ನನ್ನನ್ನು ಬೇಕೆಂತಲೇ ಟಾರ್ಗೆಟ್ ಮಾಡಲಾಗಿದೆ. ನನ್ನ ಮನೆಯನ್ನು ರೇಷ್ಮಾ ಆಕ್ರಮಿಸಿಕೊಂಡಿದ್ದಾಳೆ. ಇದರಿಂದ ನಾನು ಹಳೆ ಮನೆಯಲ್ಲಿ ವಾಸವಾಗುವಂತೆ ಆಗಿದೆ. ನನ್ನ ಆರೋಗ್ಯಕ್ಕಿಂತ ನನ್ನ ಸಂಪತ್ತಿನ ಮೇಲೆ ಹೆಚ್ಚು ಆಸಕ್ತಿ ಆಕೆಗಿದೆ. ಆದ್ದರಿಂದ ಡಿವೋರ್ಸ್​ಗೂ ಅರ್ಜಿ ಸಲ್ಲಿಸಿದ್ದು, ಅದಿನ್ನೂ ಇತ್ಯರ್ಥವಾಗಬೇಕಿದೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ.
ನನ್ನ 30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂತಹ ಘಟನೆ ನಡೆದಿಲ್ಲ. ನನ್ನ ಮನೆಗೆ ರೇಷ್ಮಾ ಬಂದು ಯುವತಿ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾವು ಯಾವುದೇ ಅಸಭ್ಯ ರೀತಿಯಲ್ಲಿ ಇರಲಿಲ್ಲ. ಆದರೆ, ರಂಗೀನಾಟದಲ್ಲಿ ತೊಡಗಿದ್ದರು ಎಂದು ರೇಷ್ಮಾ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ನನ್ನ ಬಳಿ ಯಾವುದೇ ಸ್ಪಷ್ಟನೆ ಕೇಳಿಲ್ಲ ಎಂದು ಮಾಹಿತಿ ನೀಡಿದರು.
ವಿಡಿಯೋ ಇಲ್ಲಿದೆ ನೋಡಿ:

ಲವರ್​ ಬೇರೊಬ್ಬಳ ಜತೆ ಸಲುಗೆಯಿಂದ ಇದ್ದುದಕ್ಕೆ ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿದ ಯುವತಿ!

ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋದ್ಯಾಕೆ? ಅವರೇನೂ ಹೊರಗಿನವರಲ್ಲ: ಸಂಚಲನ ಮೂಡಿಸಿದ ಭಾಗವತ್​ ಹೇಳಿಕೆ

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಇನ್ಮುಂದೆ ಸೇವಾ ಶುಲ್ಕ ವಿಧಿಸುವಂತಿಲ್ಲ: ಕೇಂದ್ರದ ವಾರ್ನಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
