ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ಕುರಿತಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ, ಈ ಕುರಿತ ಮಾತುಕತೆಗೆ ಸುಪ್ರೀಂಕೋರ್ಟ್‌ ಸಮಿತಿಯೊಂದನ್ನು ರಚನೆ ಮಾಡಿದೆ.
ಈ ಸಮಿತಿಯಲ್ಲಿ ಪಂಜಾಬ್‌ನ ರೈತ ನಾಯಕ ಭೂಪೇಂದರ್ ಸಿಂಗ್ ಮಾನ್ ಅವರು ಕೂಡ ಒಬ್ಬರಾಗಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಈ ಸಮಿತಿಯಲ್ಲಿ ತಾವು ಇರುವುದಿಲ್ಲ ಎಂದು ಸಿಂಗ್‌ ಹೇಳಿದ್ದು, ಸಮಿತಿಯಿಂದ ಹೊರಕ್ಕೆ ಬಂದಿದ್ದಾರೆ.
ಈ ಸಮಿತಿಯಲ್ಲಿ ನಾಲ್ವರು ಸದಸ್ಯರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ಸಿಂಗ್‌ ಕೂಡ ಒಬ್ಬರಾಗಿದ್ದರು. ಇನ್ನುಳಿದವರು ಕೃಷಿ ತಜ್ಞರಾದ ಅಶೋಕ್ ಗುಲಟಿ, ಡಾ.ಪ್ರಮೋದ್ ಕುಮಾರ್ ಜೋಷಿ, ಅನಿಲ್ ಧನ್ವಂತ್. ಸಿಂಗ್‌  ಭಾರತೀಯ ಕಿಸಾನ್ ಯೂನಿಯನ್‌ನ (ಬಿಕೆಯು) ರಾಷ್ಟ್ರೀಯ ಅಧ್ಯಕ್ಷ, ಅಖಿಲ ಭಾರತೀಯ ಕಿಸಾನ್ ಸಮನ್ವಯ ಸಮಿತಿ ಅಧ್ಯಕ್ಷ ಕೂಡ ಹೌದು. ಈಗ ಸಮಿತಿಯಿಂದ ಹೊರಕ್ಕೆ ನಡೆದಿರುವ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ ಮಾಹಿತಿ ನೀಡಿದೆ.
ತಾವು ಸಮಿತಿ ಸದಸ್ಯ ಸ್ಥಾನದಿಂದ ಹೊರಬರುತ್ತಿರುವುದರ ಬಗ್ಗೆ ಪತ್ರ ಬರೆದಿರುವ ಮಾನ್, “ತಮ್ಮನ್ನು ನೇಮಕ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸುತ್ತೇನೆ, ನಾನು ರೈತರ ನಾಯಕನಾಗಿದ್ದುಕೊಂಡು ಅವರ ಹಿತಾಸಕ್ತಿಗಾಗಿ ಯಾವುದೇ ಹುದ್ದೆಯನ್ನೂ ತ್ಯಜಿಸುವುದಕ್ಕೂ ಸಿದ್ಧನಿದ್ದೇನೆ, ನಾನು ಎಂದಿಗೂ ರೈತರ ಪರ ಹಾಗೂ ಪಂಜಾಬ್ ಪರವಾಗಿರುತ್ತೇನೆ, ಸಮಿತಿ ಸದಸ್ಯತ್ವದಿಂದ ಹೊರಬರುತ್ತಿದ್ದೇನೆ ಎಂದು ಹೇಳೀರುವುದಾಗಿ ತಿಳಿದುಬಂದಿದೆ.
ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?

15 ವರ್ಷಕ್ಕೇನೇ ಮಕ್ಳನ್ನು ಹೆರ್ಬೋದು- ಮದುವೆ ವಯಸ್ಸು 21 ಮಾಡೋದ್ಯಾಕೆ ಎಂದ ಮಾಜಿ ಸಚಿವ!

ಮದುವೆಯಾದ ತಿಂಗಳಲ್ಲೇ ರೈಲಿನಿಂದ ಪತ್ನಿಯ ನೂಕಿ ಕೊಲೆ- ಮುಂಬೈನಲ್ಲಿ ಅಮಾನುಷ ಘಟನೆ

ಉನ್ನತ ಹುದ್ದೆ ತ್ಯಜಿಸಿ ಬಿಜೆಪಿ ಸೇರಲಿರುವ ಐಎಎಸ್‌ ಅಧಿಕಾರಿ: ಚುನಾವಣಾ ಕಣಕ್ಕೆ ಇಳಿಯೋ ಸಾಧ್ಯತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − two =
Remember me
