ಭೋಪಾಲ್:ಸುಂದರವಾಗಿ ಕಾಣಿಸಲು, ದೇಹವನ್ನು ಬಳ್ಳಿಯಂತೆ ಮಾಡಲು ಇಂದು ಹಲವಾರು ಮಂದಿ ವಿವಿಧ ರೀತಿಯ ಕಸರತ್ತು ಮಾಡಿ ತೂಕ ಇಳಿಸಿಕೊಳ್ಳುವುದು ಮಾಮೂಲು. ಆದರೆ ಇಲ್ಲೊಬ್ಬ ಭೂಪ ಕಳ್ಳತನ ಮಾಡುವ ಸಲುವಾಗಿ, ತೂಕ ಇಳಿಸಿಕೊಂಡು ಭಾರಿ ಸುದ್ದಿಯಾಗಿದ್ದಾನೆ.
ಕಳ್ಳತನ ಮಾಡಲು ಮೊದಲೇ ಸ್ಕೆಚ್‌ ಹಾಕಿಕೊಂಡಿದ್ದ ಈತ ಕಿಟಕಿ ಒಳಗಿನಿಂದ ನುಸುಳುವ ಸಲುವಾಗಿ ಸಣ್ಣವಾಗಲು ಬಯಸಿದ್ದ. ಅದರಂತೆ ವ್ಯಾಯಾಮ ಮಾಡಿ, ಒಂದು ಹೊತ್ತಿನ ಊಟ ಬಿಟ್ಟು ತಾನು ಅಂದುಕೊಂಡಷ್ಟು ತೆಳ್ಳಗಾದ. ಮೂರು ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಂಡ. ಕಳ್ಳತನ ಮಾಡುವಲ್ಲಿಯೂ ಸಫಲನಾದ. ಆದರೆ ಆತನ ಅದೃಷ್ಟ ಕೈಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ.
ಈ ಚಾಲಾಕಿಯ ಹೆಸರು ಮೋತಿಸಿಂಗ್ ಚೌಹಾಣ್ (34). ಗುಜರಾತ್​ನ ಅಹಮದಾಬಾದ್​ ಮೂಲದ ಈತ ಮಧ್ಯಪ್ರದೇಶದ ಭೋಪಾಲ್​ ನಗರದ ಬಸಂತ್ ಬಹಾರ್ ಸೊಸೈಟಿಯಲ್ಲಿರುವ ಮನೆಗಳ ಮೇಲೆ ಕಣ್ಣು ಹಾಕಿದ್ದ. ಅಲ್ಲಿರುವ ಮೋಹಿತ್ ಮರಾಡಿಯಾ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಮನೆಯನ್ನು ದೋಚಬೇಕು ಎಂದು ಸಂಚು ರೂಪಿಸಿದ್ದ. ದುಡ್ಡು ಇದ್ದ ಜಾಗ, ಸಿಸಿಟಿವಿ, ಚಿನ್ನಾಭರಣ ಇರುವ ಜಾಗ ಎಲ್ಲ ತಿಳಿದುಕೊಂಡ ಈತನಿಗೆ ಒಂದು ಸಮಸ್ಯೆ ಎದುರಾಗಿತ್ತು. ಅದೇನೆಂದರೆ ಮನೆಯಲ್ಲಿ ವಿದ್ಯುತ್​ಚಾಲಿತ ಬಾಗಿಲುಗಳು.
75 ಕೆಜಿ ಇದ್ದ ಮೋತಿ ಸಿಂಗ್ 65 ಕೆಜಿಗೆ ದೇಹದ ತೂಕವನ್ನು ಇಳಿಸಿಕೊಂಡ ಮೇಲೆ ಅಡುಗೆ ಮನೆಯ ಕಿಟಕಿಯ ಗಾಜನ್ನು ಉಪಕರಣಗಳ ಸಹಾಯದಿಂದ ಕತ್ತರಿಸಿ ತೂರಿದ. ಮನೆಯ ಸಿಸಿಟಿವಿ ಕ್ಯಾಮರಾಗಳಿಗೆ ಕಾಣಿಸದಂತೆ ಒಳಕ್ಕೆ ನುಗ್ಗಿ 37 ಲಕ್ಷ ರೂಪಾಯಿ, ಚಿನ್ನಾಭರಣಗಳನ್ನು ಕದ್ದೊಯ್ದ.
ಕಳ್ಳತನದ ಜಾಡು ಹಿಡಿದು ಹೋದ ಪೊಲೀಸರಿಗೆ ಎಲ್ಲಿಯೂ ಕಳ್ಳನ ಸುಳಿವೇ ಸಿಗಲಿಲ್ಲ. ಇಷ್ಟೆಲ್ಲಾ ಸಿಸಿಟಿವಿ ಇದ್ದರೂ ಎಲ್ಲಿಯೂ ಕಳ್ಳ ಬಂದ ಗುರುತೇ ಸಿಗಲಿಲ್ಲ. ಕೊನೆಗೆ ಗಾಜು ಕತ್ತರಿಸುವ ಉಪಕರಣಕ್ಕಾಗಿ ಮೋತಿ ಸಿಂಗ್ ಹಾರ್ಡ್​​ವೇರ್​ ಶಾಪ್​​ಗೆ ತೆರಳಿದ್ದು ಅಲ್ಲಿದ್ದ ಸಿಸಿಟಿವಿಯೊಂದರಲ್ಲಿ ರೆಕಾರ್ಡ್​ ಆಗಿತ್ತು. ಇದರ ಜಾಡು ಹಿಡಿದು ಹೋದ ಪೊಲೀಸರಿಗೆ ಆಸಾಮಿ ಸಿಕ್ಕಿಬಿದ್ದಿದ್ದಾನೆ. ನಂತರ ತಾನು ಮಾಡಿದ್ದ ಉಪಾಯವನ್ನೆಲ್ಲಾ ಪೊಲೀಸರಿಗೆ ಹೇಳಿದ್ದಾನೆ. ಸದ್ಯ ಈತ ಪೊಲೀಸರ ಅತಿಥಿ!
ನಿನ್ನಿಂದಲೇ ನಾನು ಹುಷಾರಾಗಿದ್ದು… ‘ಕರ್ನಾಟಕದ ಅಳಿಯ’ನಿಗೂ ನೀನೇ ಕಾರಣ… ರಾಘವೇಂದ್ರ ರಾಜ್‌ಕುಮಾರ್‌ ಭಾವನಾತ್ಮಕ ಟ್ವೀಟ್‌

VIDEO: ಭಯಾನಕ ಮಳೆಯಲ್ಲಿ ಪುನೀತ್‌ ಬ್ಯಾನರ್‌ ಎದುರು ಕೈಮುಗಿದು ಕುಳಿತ ಅಭಿಮಾನಿ- ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 8 =
Remember me
