ಲಖನೌ:ಇನ್ನೇನು ಉತ್ತರ ಪ್ರದೇಶ ಚುನಾವಣೆಗೆ ಕ್ಷಣಗಣನೆಗೆ ಆರಂಭವಾಗಿದೆ. ಎಲ್ಲಾ ಪಕ್ಷಗಳು ಗೆಲುವಿಗಾಗಿ ಶತಾಯುಗತವಾಗಿ ಪ್ರಯತ್ನ ಪಡುತ್ತಿವೆ. ಈ ನಡುವೆಯೇ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಓರ್ವ ಸಚಿವ ಹಾಗೂ ನಾಲ್ವರು ಶಾಸಕರು ದೊಡ್ಡದೊಂದು ಶಾಕ್‌ ನಿಡಿದ್ದಾರೆ.
ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಸೇರಿದಂತೆ ನಾಲ್ವರು ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ (ಎಸ್‌ಪಿ) ಸೇರಲು ರೆಡಿಯಾಗಿದ್ದಾರೆ. ಯೋಗಿಯವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಮೌರ್ಯ ಸೇರಿದಂತೆ ಶಾಸಕರಾಗಿರುವ ರೋಷನ್‌ ಲಾ ವರ್ಮಾ, ಬ್ರಿಜೇಶ್‌ ಪ್ರಜಾಪತಿ, ಭಾಗ್ವತಿ ಸಾಗರ್‌, ವಿನಯ್‌ ಶಂಕ್ಯಾ ರಾಜೀನಾಮೆ ನೀಡಿರುವುದು ಪಕ್ಷ ಹಾಗೂ ಖುದ್ದು ಯೋಗಿ ಸರ್ಕಾರಕ್ಕೆ ಭಾರಿ ಆತಂಕವನ್ನು ಉಂಟು ಮಾಡಿದೆ.
ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಪ್ರಭಾವಿ ನಾಯಕನಾಗಿರುವ ಸ್ವಾಮಿ ಪ್ರಸಾದ್‌ ಮೌರ್ಯ ಅವರು ತಾವು ಬಿಜೆಪಿಗೆ ರಾಜೀನಾಮೆ ನೀಡಿ ಎಸ್‌ಪಿ ಸೇರುವುದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ತಾವು ರಾಜೀನಾಮೆ ಪತ್ರವನ್ನು ಪೋಸ್ಟ್‌ ಮಾಡಿರುವುದಾಗಿ ಹೇಳಿದ್ದಾರೆ. ಮೌರ್ಯ ಅವರು ಈ ಹಿಂದೆ ಮಾಯಾವತಿ ನಾಯಕತ್ವದ ಬಿಎಸ್‌ಪಿ ತೊರೆದು 2016ರಲ್ಲಿ ಬಿಜೆಪಿ ಸೇರಿದ್ದರು. ಒಬಿಸಿ ಮತದಾರರನ್ನು ಸೆಳೆಯಲು ಇವರದ್ದು ದೊಡ್ಡ ಪಾಲಿತ್ತು. ಅಷ್ಟೇ ಅಲ್ಲದೇ ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷಕ್ಕೂ ಇವರು ಪೈಪೋಟಿ ಕೊಡಬಲ್ಲ ವ್ಯಕ್ತಿಯಾಗಿದ್ದರು.
ಮೌರ್ಯ ಹೇಳಿದ್ದೇನು?ತಾವು ರಾಜೀನಾಮೆ ಘೋಷಿಸಿದ ಬಳಿಕ ಈ ಕುರಿತು ಮಾತನಾಡಿರುವ ಸ್ವಾಮಿ ಪ್ರಸಾದ್‌ ಮೌರ್ಯ, ‘ಭಿನ್ನ ಸಿದ್ಧಾಂತಗಳ ನಡುವೆಯೂ ಯೋಗಿ ಆದಿತ್ಯನಾಥ್‌ ಸಂಪುಟದಲ್ಲಿ ನಾನು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ಆಗುತ್ತಿರುವ ತೀವ್ರ ದಬ್ಬಾಳಿಕೆಯಿಂದ ನಾನು ನೊಂದಿದ್ದೇನೆ. ಆದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದಿದ್ದಾರೆ. ನಾನು ಬಿಜೆಪಿ ತೊರೆದ ಮೇಲೆ ಆ ಪಕ್ಷಕ್ಕೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಬರುವ ವಿಧಾನಸಭಾ ಚುನಾವಣೆಯಲ್ಲಿಯೇ ತಿಳಿದುಬರಲಿದೆ ಎಂದೂ ಹೇಳಿದ್ದಾರೆ.
ಇನ್ನೊಂದೆಡೆ, ಮೌರ್ಯ ಅವರು ತಮ್ಮ ಪಕ್ಷ ಸೇರುತ್ತಿರುವುದನ್ನು ಖುಷಿಯಿಂದ ಹೇಳಿಕೊಂಡಿರುವ ಅಖಿಲೇಶ್‌ ಯಾದವ್‌, ಮೌರ್ಯ ಅವರಿಗೆ ಹಾಗೂ ಅವರ ಬೆಂಬಲಿಗರಿಗೆ ಸಮಾಜವಾದಿ ಪಕ್ಷಕ್ಕೆ ಆತ್ಮೀಯ ಸ್ವಾಗತ ಎಂದು ಪೋಸ್ಟ್‌ ಮಾಡಿದ್ದಾರೆ.
‘ನನ್ನ ಮಗಳಿನ್ನೂ ಚಿಕ್ಕೋಳು, ಏನೂ ಗೊತ್ತಿಲ್ಲ… ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಓಟಿಪಿ ಕೊಟ್ಟಿದ್ದೇ ಮಿಸ್ಟೆಕ್‌’ ಎಂದ ಶಾಸಕ

ಅರೆಸ್ಟ್‌ ಮಾಡಿದ ಪೊಲೀಸ್‌ ಅಧಿಕಾರಿಯ ಹತ್ಯೆಗೆ ಖ್ಯಾತ ನಟನ ಸಂಚು! ಬಯಲಾಯ್ತು ಭಯಾನಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eighteen =
Remember me
