ಹೈದರಾಬಾದ್:ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿ ಪಾತ್ರದಲ್ಲಿ ಬೃಹದಾಕಾರದ ಸುಂದರವಾಗಿರುವ ಅಪರೂಪದ ಬಸವನ ಹುಳು ಪತ್ತೆಯಾಗಿದೆ.ಈ ಬಸವನ ಹುಳು ಸೈರಿಂಕ್ಸ್ ಅರುವ್ಯಾನಸ್ ಎಂಬ ಜಾತಿಗೆ ಸೇರಿದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಜಗತ್ತಿನಲ್ಲಿಯೇ ಭೂಮಿ ಮತ್ತು ನೀರಿನಲ್ಲಿ ಕಂಡು ಬರುವ ಅತೀ ದೊಡ್ಡ ಬಸವನ ಹುಳು ಎನ್ನಲಾಗಿದೆ. ಇದು 70 ಸೆ.ಮೀ.ವರೆಗೆ ಉದ್ದ ಬೆಳೆಯಲಿದ್ದು, 18 ಕೆಜಿವರೆಗೆ ತೂಗಲಿದೆ.ಇದು ಆಸ್ಟ್ರೇಲಿಯಾ ಕಹಳೆ ಎಂದೇ ಜನಪ್ರಿಯವಾಗಿದೆ. ಅಳಿವಿನಂಚಿನಲ್ಲಿರುವ ಮಾಂಸಾಹಾರಿ ಬಸವನಹುಳು. ಇದರ ಚಿಪ್ಪುಗಳು ಕೂಡ ಅಷ್ಟೇ ಜನಪ್ರಿಯವಾಗಿದೆ. ಆದರೆ ಇದನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿರುವ ಕಾರಣ, ಅಳಿವಿನಂಚಿಗೆ ಬಂದಿದೆ.ಆಂಧ್ರಪ್ರದೇಶದ ಗೋದಾವರಿ ನದಿ ಪ್ರದೇಶದಲ್ಲಿ ಪತ್ತೆಯಾದ ಕಿತ್ತಳೆ ಬಣ್ಣದ ಬಸವನ ಹುಳು ಜನರಲ್ಲಿ ಕುತೂಹಲ, ಅಚ್ಚರಿ ಮೂಡಿಸಿದ್ದು ಸದ್ಯ ಇದನ್ನು ಹರಾಜು ಮಾಡಲಾಗಿದೆ. ಇದನ್ನು 18 ಸಾವಿರ ರೂಪಾಯಿಗೆ ಕೊಟ್ಟು ಖರೀದಿ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವಿವರಿಸಿದೆ.
Andhra Pradesh | A large sea snail found on the shores of river in Uppada village, East Godavari district has been reportedly auctioned for Rs 18,000. Scientifically, the snail is referred to as 'Syrinx Aruanus', suggesting snails with extremely large appearance.pic.twitter.com/70QFM6xwaX— ANI (@ANI)June 27, 2021
Andhra Pradesh | A large sea snail found on the shores of river in Uppada village, East Godavari district has been reportedly auctioned for Rs 18,000. Scientifically, the snail is referred to as 'Syrinx Aruanus', suggesting snails with extremely large appearance.pic.twitter.com/70QFM6xwaX
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + seven =
Remember me
