ಮುಂಬೈ:ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಸಿಲುಕಿದ ನಂತರ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದೆ ಮಾಸ್ಕ್​ ಧರಿಸಿ ಓಡಾಡುತ್ತಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.
ಹಿಂದಿ ಬಿಗ್​ಬಾಸ್​ ಸೀಸನ್​-16 ಇನ್ನೇನು ಶುರುವಾಗಲಿದ್ದು, ಅದರಲ್ಲಿ ಉದ್ಯಮಿ ರಾಜ್​ಕುಂದ್ರಾ ಅವರು ಭಾಗವಹಿಸುವ ನಿರೀಕ್ಷೆ ಇದೆ. ನಟ ಸಲ್ಮಾನ್​ ಖಾನ್​ ಈ ಷೋ ನಡೆಸಿಕೊಡುತ್ತಿದ್ದಾರೆ. ಸೀಜನ್​ 15ರಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಶಿಲ್ಪಾ ಶೆಟ್ಟಿ ಕೆಲ ಕಾಲ ಬಿಗ್‌ಬಾಸ್ ಹೋಸ್ಟ್ ಮಾಡಿದ್ದರು.
ಇದೀಗ ಬಿಗ್‌ಬಾಸ್ ಆಯೋಜಕರು ರಾಜ್ ಕುಂದ್ರಾ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕುಂದ್ರಾಗೆ ಪತ್ನಿ ಶಿಲ್ಪಾ ಶೆಟ್ಟಿಯ ಬೆಂಬಲವೂ ಇದೆ ಎನ್ನಲಾಗುತ್ತಿದೆ.
ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿದ ಆರೋಪದಲ್ಲಿ ರಾಜ್ ಅವರನ್ನು ಜುಲೈ 2021 ರಲ್ಲಿ ಬಂಧಿಸಲಾಗಿತ್ತು. ಅವರಿಗೆ ಅದೇ ಸಾಲಿನ ಸೆಪ್ಟೆಂಬರ್‌ನಲ್ಲಿ ಜಾಮೀನು ಮಂಜೂರಾಗಿದ್ದು, ಸದ್ಯ ಜಾಮೀನಿನ ಮೇಲೆ ಇದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅವರು ಎಲ್ಲಿಯೇ ಹೋಗಬೇಕಿದ್ದರೂ ಮಾಸ್ಕ್​ ಹಾಕಿಕೊಂಡು ಓಡಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಿಂದಲೂ ದೂರವಾಗಿದ್ದರು.
ಅಶ್ಲೀಲ ವಿಡಿಯೋ ಘಟನೆ ಸ್ವಲ್ಪ ತಣ್ಣಗಾಗುತ್ತಿದ್ದಂತೆಯೇ ಕಳೆದ ಜೂನ್ 8ರಂದು ಹುಟ್ಟುಹಬ್ಬದಂದು ಪತ್ನಿ ಶಿಲ್ಪಾಗೆ ಶುಭ ಹಾರಿಸಿದ್ದರು. ಈ ಮೂಲಕ ಅವರು ಒಂದು ವರ್ಷದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್​)
ಇರುವೆ ತಂದಿಟ್ಟ ಸಂಕಷ್ಟ: ಬದುಕು ಹೈರಾಣ- ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!

ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿನ ಭವಿಷ್ಯ ಮೊದಲೇ ನುಡಿದಿದ್ದ ಸ್ವಾಮೀಜಿ! ಪೋಸ್ಟ್​ ವೈರಲ್​

ಏನೂ ಕೆಲಸ ಮಾಡದೇ, ಸತತ ನಿದ್ದೆ ಮಾಡಿಕೊಂಡೇ ಐದು ಲಕ್ಷ ರೂ. ಬಹುಮಾನ ಗೆದ್ದ ಯುವತಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:7 − one =
Remember me
