ಮುಂಬೈ:ಹಿಂದಿನ ಬಿಗ್​ಬಾಸ್​ ಷೋನಲ್ಲಿ ಭಾಗವಹಿಸಿದ್ದ ನಟಿ, ಪಂಜಾಬಿ ಗಾಯಕಿ ಸಾರಾ ಗುರ್ಪಾಲ್ ಇದೀಗ ಕಣ್ಣಿಗೆ ಗಾಯ ಮಾಡಿಕೊಂಡು ನರಳಾಡುತ್ತಿದ್ದಾರೆ.
14 ವಾರಗಳವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾರಾ ಇದೀಗ ಎಲಿಮಿನೇಟ್​ ಆಗಿದ್ದಾರೆ. ಆದರೆ ಕೊನೆಯ ಟಾಸ್ಕ್​ ಒಂದರಲ್ಲಿ ತಮ್ಮ ಪ್ರತಿಸ್ಪರ್ಧಿ ನಿಕ್ಕಿ ತಂಬೀಲಿಯಾ ಅಕ್ರಿಲಿಕ್​ ಅವರ ಉಗುರು ತಗುಲಿಸಿಕೊಂಡಿರುವ ಕಾರಣ, ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕುರಿತಾಗಿ ಇರುವ ಟಾಸ್ಕ್​ನಲ್ಲಿ ಉಗುರು ತಗುಲಿತ್ತು. ಈ ಟಾಸ್ಕ್​ನಲ್ಲಿ ಸೀಟು ಬದಲಾವಣೆ ವೇಳೆ ನಿಕ್ಕಿ ಅವರ ಉದ್ದನೆಯ ಉಗುರು ಇವರ ಕಣ್ಣುಹೊಕ್ಕಿತ್ತು. ಇದೀಗ ಕಣ್ಣು ಕೆಂಪಗೆ ಊದಿಕೊಂಡಿದ್ದು, ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಸಚಿನ್​ ಮಗಳನ್ನು ಮದುವೆಯಾದ್ರಾ ಶುಭ್​ಮನ್​ ಗಿಲ್​?: ಹೌದು ಎನ್ನುತ್ತಿದೆ ಗೂಗಲ್​..!
ಇದೇ ಸಮಯದಲ್ಲಿ ಬಿಗ್​​ಬಾಸ್​ ಮನೆಯಿಂದ ಹೊರಕ್ಕೆ ಯಾರನ್ನು ಹಾಕಬೇಕು ಎಂದು ಇತರ ಹಿರಿಯ ಪ್ರತಿಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ, ಗೌಹರ್ ಖಾನ್ ಮತ್ತು ಹಿನಾ ಖಾನ್ ಅವರನ್ನು ಕೇಳಿದಾಗ ಅವರು ಸಾರಾ ಹೆಸರು ಹೇಳಿದ್ದರು. ಆದ್ದರಿಂದ ಈಕೆಯನ್ನು ಹೊರಕ್ಕೆ ಹಾಕಲಾಗಿತ್ತು.
ಈಕೆಯನ್ನು ಬಿಗ್​ಬಾಸ್​ ಮನೆಯಿಂದ ಹೊರಹಾಕಿರುವುದಕ್ಕೆ ಆಕೆಯ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಬಿಗ್​ಬಾಸ್​ನ ಈ ಸೀಸನ್​ ಬಹು ವಿವಾದಕ್ಕೆ ಕಾರಣವಾಗಿದೆ. ಇದರ ಮಧ್ಯೆಯೇ, ವಿವಾದಿತ ನಟಿ ಎಂದೇ ಕರೆಸಿಕೊಂಡಿರುವ ಸಾರಾ ಬಿಗ್​ಬಾಸ್ ಮನೆಯಿಂದ ಹೊರಕ್ಕೆ ಬಂದಿರುವುದೂ ಅಲ್ಲದೇ, ಕಣ್ಣಿಗೆ ಗಾಯ ಮಾಡಿಕೊಂಡಿರುವುದಕ್ಕೆ ದುಃಖ ತೋಡಿಕೊಂಡಿದ್ದಾರೆ.
ಅಮೆರಿಕ ಮೂಲದ ಸಂಗೀತಗಾರ ತುಷಾರ್ ಕುಮಾರ್ ಅವರನ್ನು ಗುಟ್ಟಾಗಿ ಮದುವೆಯಾಗಿ ಅದನ್ನು ಮರೆಮಾಚಿ ವಿವಾಹಕ್ಕೆ ಕಾರಣವಾಗಿದ್ದಾರೆ ಸಾರಾ.
ಗರ್ಲ್​ಫ್ರೆಂಡ್​ಗಾಗಿ ಬ್ಯಾಂಕ್​ಗೆ ಕನ್ನ ಹಾಕಿದೆ…. ಪ್ಲೀಸ್​ ನನ್ನನ್ನು ಬಿಟ್ಟುಬಿಡಿ…

ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ 15 ವರ್ಷ ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 13 =
Remember me
