ಪಟ್ನಾ:ಬಿಹಾರದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಅಕ್ಟೋಬರ್​ 28ರಿಂದ ನವೆಂಬರ್​ 7ರ ನಡುವೆ ಮೂರು ಹಂತದ ಮತದಾನ ನಡೆಯಲಿದೆ.
ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿದೆ. ಪಕ್ಷ ಸೇರುವುದು, ಪಕ್ಷ ತೊರೆಯುವುದು ಈ ಸಮಯದಲ್ಲಿ ಸಾಮಾನ್ಯ.
ಅಂತೆಯೇ ಇದೀಗ, ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಜಕಾರಣಿ ಆನಂದ್ ಮೋಹನ್ ಅವರ ಪತ್ನಿ ಲವ್ಲಿ ಮತ್ತು ಮಗ ಚೇತನ್ ರಾಷ್ಟ್ರೀಯ ಜನತಾದಳಕ್ಕೆ (ಆರ್ಜೆಡಿ) ಸೇರ್ಪಡೆಯಾದರು. 1994ರಲ್ಲಿ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ.ಕೃಷ್ಣಯ್ಯ ಅವರ ಹತ್ಯೆಗೆ ಸಂಬಂಧಿಸಿದಂತೆ ಮೋಹನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತೇವೆ. ಪಕ್ಷವನ್ನು ಆದಷ್ಟು ಮುನ್ನಡೆಸಲು ನೋಡುವುದಾಗಿ ಲಬ್ಲಿ ಹಾಗೂ ಚೇತನ್​ ಹೇಳಿದ್ದಾರೆ. ತಾವು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ನಮಗೆ ನೀಡಲಾಗುವ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ” ಎಂದು ಲವ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಆರು ಬೃಹತ್​ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಆನಂದ್​ ಮೋಹನ್​ ಸಿಂಗ್​ ಹಿಂದೆ ಬಿಹಾರ ಪೀಪಲ್ಸ್ ಪಾರ್ಟಿಯ (ಬಿಪಿಪಿ) ನಾಯಕರಾಗಿದ್ದರು. ಶಿಯೋಹಾರ್ ಕ್ಷೇತ್ರದಿಂದ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದು. 1994ರ ಡಿಸೆಂಬರ್ 5ರಂದು ಕೃಷ್ಣಯ್ಯನನ್ನು ಹತ್ಯೆ ಮಾಡಲು ಸಂಚುರೂಪಿಸಿ, ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದರು. ಇದು ಸಾಬೀತಾಗಿತ್ತು.
ಕೃಷ್ಣಯ್ಯ ಅವರನ್ನು ಕಾರಿನಿಂದ ಹೊರಗೆಳೆದು, ನಿರ್ದಯವಾಗಿ ಥಳಿಸಿ ನಂತರ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಇವರಿಗೆ 2007ರಂದು ಮರಣದಂಡನೆ ವಿಧಿಸಿದ್ದರು.
ಇದನ್ನು ಪ್ರಶ್ನಿಸಿ ಪಟ್ನಾ ಹೈಕೋರ್ಟ್​ ಮೊರೆ ಹೋಗಿದ್ದರು ಸಿಂಗ್​. ಅಲ್ಲಿ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಯಿತು. ಆರೋಪಮುಕ್ತಗೊಳಿಸುವಂತೆ ಕೋರಿ ಇವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಬಿಪಿಪಿ ಈಗ ನಿಷ್ಕ್ರಿಯ ಪಕ್ಷವಾಗಿದೆ.
ಅ.1ರಿಂದ ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ…

ಹೆಂಡ್ತಿ ಜತೆ ಜಗಳವಾಡಿ ಗಂಡ ಹೀಗೆ ಮಾಡೋದಾ? ಪೊಲೀಸರೇ ಕಕ್ಕಾಬಿಕ್ಕಿ

ಉಗುಳಬೇಡ ಎಂದದ್ದೇ ತಪ್ಪಾಯ್ತು… ಮನೆಯಲ್ಲಿದ್ದ ಪಾರಿವಾಳಗಳನ್ನೆಲ್ಲಾ ಕೊಂದುಹಾಕಿದ ಯುವಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 3 =
Remember me
