ಪಟ್ನಾ:ಬಿಹಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಇಸ್ರೇಲ್ ಮನ್ಸೂರ್ ಅವರು ಗಯಾದ ಪ್ರಸಿದ್ಧ ವಿಷ್ಣುಪಾದ್ ದೇವಸ್ಥಾನ ಪ್ರವೇಶಿಸಿ ನಿನ್ನೆಯಷ್ಟೇ (ಮಂಗಳವಾರ) ಭಾರಿ ವಿವಾದ ಸೃಷ್ಟಿಸಿದ್ದರು. ಮುಸ್ಲಿಂ ಧರ್ಮೀಯರೊಬ್ಬರು ದೇವಾಲಯ ಪ್ರವೇಶಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿರುವ ಕಾರಣ ಏನೆಂದರೆ, ದೇವಾಲಯದಲ್ಲಿ ತಲೆತಲಾಂತರಗಳಿಂದ ನಡೆದುಬಂದಿರುವ ಸಂಪ್ರದಾಯ ಮುರಿದು ಹೋಗಿದ್ದುದು.
ವಿಷ್ಣುಪಾದ್​ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ. ಇದೇ ಕಾರಣಕ್ಕೆ ಯಾವುದೇ ಅಚಾತುರ್ಯ ನಡೆಯಬಾರದು ಎನ್ನುವ ಕಾರಣಕ್ಕೆ ಮುಖ್ಯದ್ವಾರದ ಮೇಲೆಯೇ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇಂದೋರ್‌ನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಸ್ಥಾಪಿಸಿರುವ ಈ ದೇಗುಲದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದೆ. ಇದರ ಹೊರತಾಗಿಯೂ ಮನ್ಸೂರ್​ ದೇವಾಲಯ ಪ್ರವೇಶಿಸಿದ್ದು, ದೇವಾಲಯದ ಆಡಳಿತ ಮಂಡಳಿಯ ಭಾರಿ ಬೇಸರಕ್ಕೆ ಕಾರಣವಾಗಿತ್ತು.
ಆದರೆ ಹಿಂದೂ ಸಂಪ್ರದಾಯದಂತೆ ದೇಗುಲದಲ್ಲಿ ಯಾರೇ ಪ್ರವೇಶಿಸಿದರೂ ಅವರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಹಿಂದೂಯೇತರರೊಬ್ಬರು ಮುರಿದರು ಕೂಡ ದೇಗುಲದ ಅರ್ಚಕರು ಪೂಜೆಯ ಬಳಿಕ ಸಚಿವ ಮನ್ಸೂರ್​ ಅವರಿಗೆ ಪ್ರಸಾದ ನೀಡಿದ್ದರು. ಮನ್ಸೂರ್​ ಅವರು ಮೊದಲಿಗೆ ಪ್ರಾರ್ಥನೆ ಸಲ್ಲಿಸಿರಲಿಲ್ಲ. ಇದನ್ನು ಅರ್ಚಕರು ಗಮನಿಸಿದ್ದರೂ ಸುಮ್ಮನಿದ್ದರು. ಆದರೆ ಕೊನೆಯ ಪಕ್ಷ ಪ್ರಸಾದವನ್ನೂ ಸ್ವೀಕರಿಸದೇ ಇರುವುದು ಮಾತ್ರ ಅರ್ಚಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರವೇಶ ದ್ವಾರದಲ್ಲಿಯೇ ಇರುವ ಬರಹವನ್ನು ನೋಡಿಯೂ ದೇಗುಲದ ಒಳಗೆ ಪ್ರವೇಶಿಸಿದ ಸಚಿವರೊಬ್ಬರು, ಪ್ರಸಾದವನ್ನು ಸ್ವೀಕರಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಅರ್ಚಕರು, ಸಚಿವರ ಈ ವರ್ತನೆ ಹಿಂದೂ ಧರ್ಮಿಯರ ಧಾರ್ಮಿಕ ಭಾವನಗೆ ಧಕ್ಕೆ ಉಂಟು ಮಾಡಿದೆ. ಒಂದು ವೇಳೆ ಅವರು ದೇಗುಲ ಪ್ರವೇಶಿಸಿರುವ ಉದ್ದೇಶ ಒಳ್ಳೆಯದ್ದೇ ಆಗಿದ್ದರೆ ಪ್ರಸಾದ ಸ್ವೀಕರಿಸಬಹುದಿತ್ತು. ಆದರೆ ನಾವು ಪ್ರಸಾದ ನೀಡಿದಾಗ ಅದನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೀಗಿದ್ದ ಮೇಲೆ ಸಚಿವರು ದೇಗುಲಕ್ಕೆ ಪ್ರವೇಶ ಮಾಡಿರುವ ಹಿಂದೆ ಬೇರೆಯದ್ದೇ ಉದ್ದೇಶ ಇದ್ದಂತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಚಿವರು ಪ್ರಸಾದವನ್ನು ಸ್ವೀಕರಿಸದೇ ಹೋಗಿದ್ದು, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಚಿವರು ದೇವಾಲಯಕ್ಕೆ ಭೇಟಿ ನೀಡಿದ್ದರೂ ಅವರ ಉದ್ದೇಶ ಬೇರೆಯೇ ಆಗಿತ್ತು ಎಂಬುದು ಸ್ಪಷ್ಟವಾಗಿ ತೋರುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ದೇಗುಲದ ಅರ್ಚಕರು ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
ದೇವಾಲಯ ಪ್ರವೇಶಿಸಿದ ಸಚಿವ ​ಮನ್ಸೂರಿ: ಮೈತ್ರಿ ಸರ್ಕಾರಕ್ಕೆ ಶುರುವಾಯ್ತು ಸಂಕಟ! ಆಗಿದ್ದೇನು ನೋಡಿ…

ಬಿಗ್​ಬಾಸ್​ ಸ್ಪರ್ಧಿ, ಖ್ಯಾತ ನೃತ್ಯಗಾತಿ ಸಪ್ನಾಗೆ ಬಂಧನದ ಭೀತಿ: ಕೋರ್ಟ್​ನಿಂದ ವಾರೆಂಟ್​ ಜಾರಿ​

ಪುನಃ ವಿದೇಶಕ್ಕೆ ಹಾರಲಿದೆ ಸೋನಿಯಾ ಕುಟುಂಬ! ಚುನಾವಣೆ ನಿರ್ಧಾರದ ಬೆನ್ನಲ್ಲೇ ಕುತೂಹಲ ಮೂಡಿಸಿದ ನಡೆ

ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
