ಬಿಹಾರ:ಬಿಹಾರದ ಎಲ್ಲ 45,945 ಗ್ರಾಮಗಳಿಗೆ ಆಫ್ಟಿಕಲ್ ಫೈಬರ್ ಇಂಟರ್​ನೆಟ್​ ಸೇವೆಯ ಮೂಲಕ ಸಂಪರ್ಕ ಕಲ್ಪಿಸುವ ಆಫ್ಟಿಕಲ್ ಫೈಬರ್ ಕೇಬಲ್​ ಸೇವೆ ಹಾಗೂ 14,000 ಕೋಟಿ. ರೂ. ಮೌಲ್ಯದ 9 ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುತ್ತಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿಯವರು ಈ ಎರಡು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.
ಏನಿದು ಫೈಬರ್ ಕೇಬಲ್​ ಸೇವೆ?ಇದು ಬಿಹಾರದ ಎಲ್ಲಾ 45,945 ಹಳ್ಳಿಗಳನ್ನು ಒಳಗೊಂಡ ಪ್ರತಿಷ್ಠಿತ ಯೋಜನೆಯಾಗಿದ್ದು, ಡಿಜಿಟಲ್ ಕ್ರಾಂತಿಯು ರಾಜ್ಯದ ದೂರದ ಮೂಲೆಯನ್ನೂ ತಲುಪಲು ಅನುವು ಮಾಡಿಕೊಡುತ್ತದೆ. ಟೆಲಿಕಾಂ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌.ಸಿ) ಸಂಯೋಜಿತ ಪ್ರಯತ್ನದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.
ಬಿಹಾರ ರಾಜ್ಯದ ಉದ್ದಗಲದಲ್ಲಿ 34,821 ಸಿಎಸ್.ಸಿ. ಕೇಂದ್ರಗಳಿವೆ. ಪ್ರಾಥಮಿಕ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಶಾ ಕಾರ್ಯಕರ್ತರು, ಜೀವಿಕಾ ದೀದಿ ಇತ್ಯಾದಿ ಸರ್ಕಾರಿ ಸಂಸ್ಥೆಗಳಿಗೆ 1 ವೈ-ಫೈ ಮತ್ತು 5 ಉಚಿತ ಸಂಪರ್ಕಗಳನ್ನು ಅನುಷ್ಠಾನಗೊಳಿಸುವ ಯೋಜನೆಯೂ ಇದರಲ್ಲಿ ಸೇರಿದೆ.
350 ಕಿ.ಮೀ ಹೆದ್ದಾರಿ ಯೋಜನೆ:ಇಂದು ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ನೆರವೇರಸಲಿರುವ ಒಂಬತ್ತು ಹೆದ್ದಾರಿ ಯೋಜನೆಗಳು 350 ಕಿಲೋ ಮೀಟರ್ ಉದ್ದದ್ದಾಗಿದ್ದು, 14,258 ಕೋಟಿ ರೂಪಾಯಿ ವೆಚ್ಚದ್ದಾಗಿವೆ.
ಬಿಹಾರದ ಅಭಿವೃದ್ಧಿಗೆ ಹಾದಿ ಮಾಡಿಕೊಡಲಿರುವ ಈ ರಸ್ತೆಗಳು ರಾಜ್ಯದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಸಂಪರ್ಕ, ಅನುಕೂಲತೆ ಮತ್ತು ಆರ್ಥಿಕ ಪ್ರಗತಿ ಹೆಚ್ಚಿಸುತ್ತವೆ. ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳಲ್ಲಿ  ಗಣನೀಯವಾಗಿ ಜನರ ಮತ್ತು ಸರಕುಗಳ ಸಾಗಾಟವೂ ಸುಧಾರಿಸಲಿದೆ.
ಪ್ರಧಾನಮಂತ್ರಿ ಪ್ಯಾಕೇಜ್ ಅಡಿಯಲ್ಲಿ, ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗಳ ಸಂಖ್ಯೆ 17 ಆಗಿದ್ದು, ಮಾರ್ಗಗಳ ಸಾಮರ್ಥ್ಯ 62 ಆಗಿದೆ. ಇದರೊಂದಿಗೆ ಸರಾಸರಿ ರಾಜ್ಯದಲ್ಲಿ ನದಿಗಳ ಮೇಲಿನ ಸೇತುವೆ ಪ್ರತಿ 25 ಕಿ.ಮೀ.ಗೆ ಒಂದಾಗಲಿದೆ.
ಪ್ರಧಾನಮಂತ್ರಿಯವರು 2015ರಲ್ಲಿ ಬಿಹಾರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಇದರಲ್ಲಿ 54,700 ಕೋಟಿ ರೂ. ಮೌಲ್ಯದ 75 ಯೋಜನೆಗಳು ಸೇರಿದ್ದು, ಈ ಪೈಕಿ 13 ಯೋಜನೆಗಳು ಪೂರ್ಣಗೊಂಡಿದ್ದರೆ, 38 ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಇತರ ಯೋಜನೆಗಳು ಡಿಪಿಆರ್/ಬಿಡ್ಡಿಂಗ್/ಮಂಜೂರಾತಿ ಹಂತದಲ್ಲಿವೆ.
Sign in to your account
Please enter an answer in digits:20 − 5 =
Remember me
