ಪಟ್ನಾ:ಕಾಲೇಜು ಆವರಣದಲ್ಲಿ ಅನಧಿಕೃತವಾಗಿ ಚಹದ ಅಂಗಡಿ ಇಟ್ಟುಕೊಂಡಿರುವ ಮಹಿಳೆಯೊಬ್ಬರನ್ನು ತೆರವುಗೊಳಿಸಲು ಬಂದ ಪೊಲೀಸ್​ ಅಧಿಕಾರಿಗಳ ಮುಖದ ಮೇಲೆ ಬಿಸಿಬಿಸಿ ಚಹ ಚೆಲ್ಲಿದ್ದಾಳೆ ಇಲ್ಲೊಬ್ಬ ಮಹಿಳೆ.
ಬಿಹಾರದ ಮುಜಾಫರ್ ನಗರದ ಬೊಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ಪುರ್ ಸಲೀಮ್ ಗ್ರಾಮದ ಸರಿತಾ ದೇವಿ ಈ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾಳೆ. ಅಹಿಯಾಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುನೀಲ್ ರಜಾಕ್ ಹಾಗೂ ಇಬ್ಬರು ಕಾನ್ಸ್​ಟೆಬಲ್​ ಅವರಿಗೆ ತೀವ್ರ ಸುಟ್ಟು ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿದೆ.
ಕ್ಯಾಂಪಸ್‌ನಲ್ಲಿನ ಅಕ್ರಮ ಅಂಗಡಿಗಳ ಬಗ್ಗೆ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಎಸ್‌ಕೆಎಂಸಿಎಚ್) ಕಾಲೇಜಿನ ಪ್ರಾಂಶುಪಾಲ ಡಾ.ವಿಕಾಸ್ ಕುಮಾರ್ ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಅಂಗಡಿ ತೆರವು ಮಾಡಲು ಬಂದಿದ್ದರು. ಈ ವೇಳೆ ಮಹಿಳೆ ಅವರ ಮೇಲೆ ಬಿಸಿಬಿಸಿ ಟೀ ಎಸೆದಿದ್ದಾಳೆ. ಈಕೆಗೆ ಅಂಗಡಿಯಲ್ಲಿದ್ದ ಇಬ್ಬರು ಸಹಾಯ ಮಾಡಿದ್ದಾರೆ.ಇಷ್ಟು ಮಾಡಿ ಆ ಇಬ್ಬರು ಸಹಾಯಕರು ಅಲ್ಲಿಂದ ಪರಾರಿಯಾಗಿದ್ದು, ಮಹಿಳೆ ಸಿಕ್ಕಿಬಿದ್ದಿದ್ದಾಳೆ.
“ಮಹಿಳೆಯನ್ನು ಬಂಧಿಸಲಾಗಿದೆ, ಆದರೆ ಅವರ ಇಬ್ಬರು ಸಹಚರರು ಇನ್ನೂ ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು, ”ಎಂದು ರಜಾಕ್ ಹೇಳಿದ್ದಾರೆ. ರಜಾಕ್​ ಅವರಿಗೆ ವಿಪರೀತ ಸುಟ್ಟುಗಾಯಗಳಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೊದಲಿಗೆ ಒಳ್ಳೆಯ ಮಾತಿನಲ್ಲಿ ಮಳಿಗೆಯನ್ನು ತೆರವುಗೊಳಿಸಲು ಹೇಳಿದೆವು. ಆದರೆ ಆಕೆ ಸಾಧ್ಯವಿಲ್ಲ ಎಂದಳು. ನಂತರ ಲಿಖಿತ ದೂರು ಬಂದಿರುವ ಹಿನ್ನೆಲೆಯಲ್ಲಿ ಮಳಿಗೆ ತೆರವುಗೊಳಿಸದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದೆವು. ಕೂಡಲೇ ಸಿಟ್ಟಿನಿಂದ ಆ ಮಹಿಳೆ, ಚಹವನ್ನು ಎಸೆದಿದ್ದಾಳೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.
ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

ಪ್ರೀತಿಸಿದವಳನ್ನು ಮದುವೆಯಾಗಲು ಮನೆಯವರು ಬಿಡುತ್ತಿಲ್ಲ- ನಮಗಿರುವ ಮುಂದಿನ ದಾರಿಗಳೇನು?

ಮರದಿಂದ ನೋಟುಗಳ ಸುರಿಮಳೆ- ಹಣ ಹೆಕ್ಕಲು ನೂಕುನುಗ್ಗಲು: ನಿಜವಾಗಿಯೂ ಆಗಿದ್ದೇನು?

ಜಗತ್ತಿನ ನಾಲ್ಕನೇ ಸಿರಿವಂತರ ಕುಟುಂಬದ ಕುಡಿಯ ಹೆಸರು ಬಹಿರಂಗ: ಇದರಲ್ಲಿದೆಯೊಂದು ವಿಶೇಷ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × five =
Remember me
