ನವದೆಹಲಿ:ಪ್ರತಿಷ್ಠಿತ ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ, ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್‌ ಷಾ ಅವರಿಗೆ ಕರೊನಾ ಸೋಂಕು ತಗುಲಿದೆ.
ಕರೊನಾ ರೋಗಿಗಳ ಜೀವ ಉಳಿಸಬಹುದಾದ ಕರೊನಾ ಔಷಧವನ್ನು ಕಂಡುಹಿಡಿದಿದ್ದ ಕಿರಣ್‌ ಅವರಿಗೂ ಕರೊನಾ ಬಿಟ್ಟಿಲ್ಲ.
‘ಇಟೋಲಿಝುಮಬ್’ ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಬಯೋಕಾನ್ ಸಂಸ್ಥೆ ಅನುಮತಿ ಪಡೆದುಕೊಂಡಿತ್ತು.
ಆದರೆ ಇದೀಗ ಕಿರಣ್‌ ಅವರಿಗೆ ಕರೊನಾ ತಗುಲಿರುವುದರಿಂದ ಎಲ್ಲರಲ್ಲಿ ಆತಂಕ ಮನೆಮಾಡಿದೆ. ತಮಗೆ ಕರೊನಾ ಪಾಸಿಟಿವ್‌ ಬಂದಿರುವ ಕುರಿತು ಸತಃ ಕಿರಣ್‌ ಅವರೇ ಟ್ವೀಟ್‌ ಮಾಡಿದ್ದಾರೆ.
I have added to the Covid count by testing positive. Mild symptoms n I hope it stays that way.
— Kiran Mazumdar-Shaw (@kiranshaw)August 17, 2020

ಕರೊನಾವೈರಸ್‌ ಪರೀಕ್ಷೆ ವರದಿಯು ಪಾಸಿಟೀವ್‌ ಬಂದಿದ್ದು, ಈ ಮೂಲಕ ಕೋವಿಡ್‌ ಸೋಂಕಿನ ಎಣಿಕೆಯಲ್ಲಿ ಈಗ ನಾನು ಕೂಡ ಸೇರಿಕೊಂಡಿದ್ದೇನೆ. ಆದರೆ, ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದು, ಗುಣವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ನಿವಾಸಿ ಆಗಿರುವ ಕಿರಣ್ ಮಜುಂದಾರ್ ಷಾ ಅವರಿಗೆ ನೂರಾರು ಮಂದಿ ಟ್ವೀಟ್ ಮಾಡಿದ್ದು, ಬೇಗ ಚೇತರಿಸಿಕೊಳ್ಳಿ ಹಾರೈಸಿದ್ದಾರೆ.
ಇವರು ಕಂಡುಹಿಡಿದಿರುವ ಸ್ವಲ್ಪ ದುಬಾರಿ ಎನಿಸಿರುವ ಕರೊನಾ ಔಷಧಿಯು ಕರೊನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಳಿಸುತ್ತದೆ.
ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸಿರುವ ವೈರಸ್ ವಿರುದ್ಧ ಹೋರಾಡುವಂಥ ಇಟೋಲಿಝುಮಬ್, ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಯಶಸ್ವಿ ಆಗಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ, ಕಿರಣ್‌ ಅವರೂ ಶೀಘ್ರದಲ್ಲಿ ಗುಣಮುಖರಾಗುವ ಭರವಸೆಯನ್ನು ಅವರ ಅಭಿಮಾನಿಗಳು ಹೊಂದಿದ್ದಾರೆ.
ಬಿಜೆಪಿ ಕೈಯಲ್ಲಿ ಫೇಸ್‌ಬುಕ್‌ ಇಂಡಿಯಾ: ತನಿಖೆ ಕೋರಿ ಜುಕರ್‌ಬರ್ಗ್‌ಗೆ ಕಾಂಗ್ರೆಸ್‌ ಪತ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 3 =
Remember me
