ಕೊಚ್ಚಿ:ಕರೊನಾ, ಒಮಿಕ್ರಾನ್‌ನಿಂದ ಇನ್ನೂ ಜನರು ಸುಧಾರಿಸಿಕೊಳ್ಳುತ್ತಿಲ್ಲ. ಇದರ ನಡುವೆಯೇ ಮತ್ತೆ ಹಕ್ಕಿಜ್ವರದ ಭೀತಿ ಆವರಿಸಿದೆ. ಇದಾಗಲೇ ಕೆಲವು ಪ್ರದೇಶಗಳಲ್ಲಿ ಕಾಗೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿರುವ ನಡುವೆಯೇ ಕೇರಳದಲ್ಲಿ ಕೋಳಿ ಮತ್ತು ಬಾತುಕೋಳಿಗಳು ಆತಂಕ ಸೃಷ್ಟಿಸಿವೆ.
ಕೇರಳದ ಅಲಪ್ಪುಳದಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 12 ಸಾವಿರ ಕೋಳಿ ಮತ್ತು ಬಾತುಕೋಳಿಗಳನ್ನು ಸಾಯಿಸಲಾಗಿದೆ. ಕೇರಳದ ತಕಾಝಿ ಪಂಚಾಯಿತಿಯ 1 ಕಿ.ಮೀ. ವ್ಯಾಪ್ತಿಯಲ್ಲಿನ ಕೋಳಿ, ಬಾತುಕೋಳಿಗಳನ್ನು ಕೊಂದು ಸುಟ್ಟುಹಾಕಲಾಗಿದೆ ಎಂದು ಪಶುಸಂಗೋಪನೆ ಸಚಿವೆ ಜೆ. ಸಿಂಚು ರಾಣಿ ಮಾಹಿತಿ ನೀಡಿದ್ದಾರೆ. ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲು ಸೂಚನೆ ನೀಡಲಾಗಿದೆ. ಹಕ್ಕಿ ಜ್ವರ ತಡೆಗಟ್ಟಲು ನಾಗರಿಕರು ಸಹಕಾರ ನೀಡಬೇಕೆಂದು ಅವರು ಜಿಲ್ಲಾಡಳಿತಕ್ಕೆ ಕೋರಿಕೊಂಡಿದ್ದಾರೆ.
ಲಪ್ಪುಳ ಮತ್ತು ಕೊಟ್ಟಯಾಂನಲ್ಲಿ ಬಾತುಕೋಳಿ ಸಾಕಣೆಯು ಒಂದು ಪ್ರಮುಖ ವ್ಯವಹಾರವಾಗಿದೆ.ಇಲ್ಲಿ ಬಾತುಕೋಳಿಗಳ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಇಲ್ಲಿಯೇ ಹಕ್ಕಿಜ್ವರ ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.ಆಲಪ್ಪುಳದಲ್ಲಿ ಈವರೆಗೆ ಹಕ್ಕಿಜ್ವರದ 26 ಪ್ರಕರಣಗಳು ಪತ್ತೆಯಾಗಿವೆ. 13 ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಟ್ಟೆ, ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಇದರ ಜತೆಗೆ ವಾಹನ ಸಂಚಾರ ಮತ್ತು ಜನರ ಓಡಾಟವನ್ನು ನಿಷೇಧಿಸಲಾಗಿದೆ. ನೆರೆಯ ಕರ್ನಾಟಕದಲ್ಲಿಯೂ ಇದೀಗ ಹಕ್ಕಿಜ್ವರದ ಭೀತಿ ಶುರುವಾಗಿದೆ.
ಕೇರಳದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರದ ಮಾದರಿಗಳನ್ನು ಸಂಗ್ರಹಿಸಿ ಅವುಗಳ ಪರೀಕ್ಷೆಗಾಗಿ ಭೋಪಾಲ್‌ಗೆ ಕಳುಹಿಸಲಾಗಿದೆ. ಇದಾಗಲೇ ಕಳುಹಿಸಿರುವ ಮಾದರಿಯಲ್ಲಿ ಹಕ್ಕಿಜ್ವರ ಇರುವುದಾಗಿ ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ ವರದಿ ನೀಡಿತ್ತು.
2016 ರಲ್ಲಿ ಹಕ್ಕಿ ಜ್ವರ ನಿಯಂತ್ರಿಸಲು ಕೇರಳ ರಾಜ್ಯಾದ್ಯಂತ ಕನಿಷ್ಠ 5 ಲಕ್ಷ ಕೋಳಿ ಮತ್ತು ಬಾತುಕೋಳಿಗಳನ್ನು ಕೊಲ್ಲಲಾಗಿತ್ತು.
ಒಮಿಕ್ರಾನ್‌ ಭೀತಿ ನಡುವೆಯೇ ಕಾಗೆಗಳ ಸಾವು: ದೃಢಪಟ್ಟ ಹಕ್ಕಿಜ್ವರ- ಕೋಳಿಗಳ ಸ್ಯಾಂಪಲ್‌ ರವಾನೆ, ಕೆಲವೆಡೆ ಮಾಂಸದಂಗಡಿ ಕ್ಲೋಸ್‌

ಒಬ್ಬ ವಿವಾಹಿತೆ- ಡಬಲ್‌ ಮರ್ಡರ್‌! ಪತ್ನಿಯನ್ನು ಛೇಡಿಸಿದ್ದಕ್ಕೆ ಮೈಸೂರಲ್ಲಿ ಬಿತ್ತು ಎರಡು ಹೆಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
