ಹೈದರಾಬಾದ್:ಈಗ ಮಾಸ್ಕ್‌ ಎನ್ನುವುದು ಜೀವನದ ಅವಿಭಾಜ್ಯ ಅಂತವಾಗಿ ಹೋಗಿದೆ. ಮಾಸ್ಕ್‌ ಇಲ್ಲದೇ ಇದ್ದರೆ ದಂಡ ಕಟ್ಟುವ ಪರಿಸ್ಥಿತಿ ಇದೆ.
ಇಲ್ಲೊಬ್ಬ ಅಜ್ಜ ಇದೇ ಮಾಸ್ಕ್‌ನಿಂದಾಗಿ ಭಾರಿ ಸುದ್ದಿಯಾಗಿದ್ದಾನೆ. ಇದಕ್ಕೆ ಕಾರಣ, ಬಟ್ಟೆಯ ಬದಲು ಈ ವೃದ್ಧ ಹಕ್ಕಿಯ ಗೂಡನ್ನು ಮೂಗಿಗೆ, ಬಾಯಿಗೆ ಕಟ್ಟಿಕೊಂಡು ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾನೆ. ತೆಲಂಗಾಣದ ಮೆಹಬೂಬ್‌ ನಗರದ ನಿವಾಸಿ ಮೆಕಲಾ ಕೂರ್ಮಯ್ಯ ಎನ್ನುವ ಈ ವೃದ್ಧ ತಮಗೆ ಮಾಸ್ಕ್‌ ಕೊಳ್ಳಲು ಹಣ ಇಲ್ಲ, ಆದ್ದರಿಂದ ಹಕ್ಕಿಯ ಗೂಡನ್ನು ಕಟ್ಟಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.
ಮೆಕಲಾ ಅವರಿಗೆ ಪಿಂಚಣಿ ಹಣ ಬರಬೇಕಿತ್ತು. ಆದರೆ ಅವರಿಗೆ ಅದಿನ್ನೂ ಬರಲಿಲ್ಲ. ಆದ್ದರಿಂದ ಪಿಂಚಣಿಗಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟು ಕೊಟ್ಟು ಸಾಕಾಗಿದೆ. ಈ ವೇಳೆ ಹಕ್ಕಿಯ ಗೂಡನ್ನು ಬಾಯಿ, ಮೂಗಿಗೆ ಕಟ್ಟಿಕೊಂಡಿರುವ ಅವರನ್ನು ಪೊಲೀಸರು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನಾನೇನು ಮಾಡಲಿ ನಿಮ್ಮಿಂದ (ಸರ್ಕಾರದಿಂದ) ಪಿಂಚಣಿ ಹಣ ಬರಲಿಲ್ಲ. ಮಾಸ್ಕ್‌ ಕೊಳ್ಳಲು ದುಡ್ಡು ಇಲ್ಲ, ಅದಕ್ಕಾಗಿ ಹೀಗೆ ಮಾಡಿದ್ದೇನೆ ಎಂದಿದ್ದಾರೆ.
ಸದ್ಯ ಇವರ ಫೋಟೋ ಭಾರಿ ವೈರಲ್‌ ಆಗಿದ್ದು, ಇದಕ್ಕೆ ಪರ- ವಿರೋಧವಾಗಿ ಹಲವಾರು ಕಮೆಂಟ್‌ಗಳು ಬರುತ್ತಿವೆ.
ಪದವಿ ಯಾವುದೇ ಇರಲಿ… ಕ್ರೀಡಾ ಪ್ರಾಧಿಕಾರದಲ್ಲಿದೆ ವಿವಿಧ ಹುದ್ದೆಗಳು- 60 ಸಾವಿರ ರೂ.ವರೆಗೆ ಸಂಬಳ

ರೂಮಿನಲ್ಲಿ ಒಬ್ಬಳೇ ಚಿಲಕ ಹಾಕಿಕೊಂಡು ಮಲಗುವವಳ ಜತೆ ಹೇಗೆ ಸಂಸಾರ ಮಾಡ್ಲಿ? ಪ್ಲೀಸ್‌ ದಾರಿ ತೋರಿ…

ಹೇಗಿದ್ದಿಯಾ ಕಂದ? ನೋವಾಗುತ್ತಿಲ್ಲ ತಾನೆ? ಮೃತ ಮಗನೊಂದಿಗೆ ಆಸ್ಪತ್ರೆ ಎದುರು ದಿನವೂ ವಿಡಿಯೋ ಕಾಲ್‌- ಕಣ್ಣೀರ ಕಥೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
