ಲಖನೌ:ಕೆಲವರಿಗೆ ಎಂತೆಂಥದ್ದೋ ಕ್ರೇಜ್​ಗಳು ಇರುತ್ತವೆ. ಇದೇ ಹುಚ್ಚಿನಿಂದಾಗಿ ಕೆಲವೊಮ್ಮೆ ಅಪಾಯಕಾರಿ ಎನ್ನುವಂತ ಸಾಹಸಕ್ಕೆ ಕೈಹಾಕುವುದೂ ಇದೆ. ಇನ್ನು ಕೆಲವರು ಅಧಿಕಾರ, ಹಣದ ದರ್ಪದಿಂದ ತೀರಾ ಹುಚ್ಚು ಎನಿಸುವ ಕಾರ್ಯಕ್ಕೆ ಕೈಹಾಕಿ, ದೊಡ್ಡ ಹೆಸರು ಮಾಡುವ ತವಕದಲ್ಲಿ ಇರುತ್ತಾರೆ.
ಇಂಥದ್ದೇ ಹುಚ್ಚು ಸಾಹಸಕ್ಕೆ ಕೈಹಾಕಿರುವ ಇಬ್ಬರು ವ್ಯಕ್ತಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಿಫರೆಂಟ್​ ಆಗಿ ಹುಟ್ಟುಹಬ್ಬ ಆಚರಿಸಲು ಹೋಗಿರುವುದೇ ಈ ಯುವಕರಿಗೆ ಮುಳುವಾಗಿದೆ. ವಿಚಿತ್ರ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದರೆ ಏನಾಗುತ್ತಿರಲಿಲ್ಲವೇನೋ, ತಾವು ಮಾಡಿರುವ ಈ ಸಾಹಸ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇದೀಗ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ.
ಉತ್ತರ ಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ಜ.10ರಂದು ನಡೆದಿರುವ ಹುಟ್ಟುಹಬ್ಬದ ಘಟನೆ ಇದಾಗಿದೆ. ಅಷ್ಟಕ್ಕೂ ಈ ಯುವಕರು ಮಾಡಿದ್ದೇನೆಂದರೆ ಗನ್​ ಬಳಸಿ ಕೇಕ್​ ಕಟ್​ ಮಾಡಿದ್ದಾರೆ!
ವೈರಲ್​ ಆಗಿರುವ ವಿಡಿಯೋ ನೀವೂ ನೋಡಿ:
ಗನ್​ನಲ್ಲಿ ಕೇಕ್​ ಕಟ್​ ಮಾಡಿ ಹುಟ್ಟುಹಬ್ಬ ಆಚರಿಸಿ ಪೊಲೀಸರ ಬಲೆಗೆ ಬಿದ್ದ ಉತ್ತರಪ್ರದೇಶದ ಯುವಕರು#gun#cake#arrestpic.twitter.com/rdxmT0Ge23
— Vijayavani (@VVani4U)January 16, 2021

ಎಲ್ಲರಿಗಿಂತಲೂ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಎಲ್ಲರೂ ತಮಗೆ ಶಹಬ್ಬಾಸ್​ಗಿರಿ ಕೊಡಲಿ ಎನ್ನುವ ಕಾರಣಕ್ಕೆ ಶಹನವಾಜ್ ಎಂಬ ಯುವಕ ಗನ್​ನಿಂದ ಕೇಕ್​ ಕಟ್​ ಮಾಡಿದ್ದಾನೆ. ಇದಕ್ಕೆ ಆತನ ಸ್ನೇಹಿತ ಶಕೀಬ್ ಸಾಥ್​ ನೀಡಿದ್ದಾರೆ.
ಇಷ್ಟು ಮಾಡಿ ಕುಣಿದು ಕುಪ್ಪಳಿಸಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ಪೊಲೀಸರು ಈ ಯುವಕರ ಬಳಿ ಗನ್​ ಬಂದದ್ದು ಹೇಗೆ ಎಂದು ತನಿಖೆ ಕೈಗೊಂಡಿದ್ದಾರೆ. ಈ ರೀತಿ ಜೀವಂತ ಗುಂಡುಗಳನ್ನು ಇಟ್ಟುಕೊಂಡು ಗನ್​ನಿಂದ ನಿಯಮ ಉಲ್ಲಂಘಿಸಿ ಶೂಟ್​ ಮಾಡಿರುವ ಕಾರಣ, ಇಬ್ಬರೂ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
बर्थडे पार्टी पर तमंचे से केक काटकर जश्न मनाते हुए सोशल मीडिया पर वायरल वीडियो के सम्बन्ध में थाना हापुड नगर पुलिस ने त्वरित कार्यवाही करते हुए 02 आरोपियों को किया गिरफ्तार, जिनके कब्जे से केक काटने में प्रयुक्त असलहा बरामद।@Uppolice@dgpup@adgzonemeerut#Hapurpolicepic.twitter.com/gfz6XSAsTb
— HAPUR POLICE (@hapurpolice)January 15, 2021

ಗನ್​ ಹಾಗೂ ಜೀವಂತ ಗುಂಡ ವಶಕ್ಕೆ ಪಡೆದಿರುವ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. 20 ಸೆಕೆಂಡ್​ಗಳ ವಿಡಿಯೋದಿಂದ ಇದೀಗ ಈ ಯುವಕರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಈರುಳ್ಳಿ ಉಪ್ಪಿನಕಾಯಿ ಹೇಗೆ ಮಾಡೋದು ಗೊತ್ತಾ? ಸಲ್ಮಾನ್​ ಖಾನ್​ ಇಲ್ಲಿ ತೋರಿಸಿಕೊಟ್ಟಿದ್ದಾರೆ ನೋಡಿ…

ಮಂಡ್ಯದಲ್ಲಿ ಜೆಡಿಎಸ್​ಗೆ ಶಾಕ್​ ಕೊಟ್ಟ ಮಾಜಿ ಕಂದಾಯ ಅಧಿಕಾರಿ: ಬಿಜೆಪಿಗೆ ಸೇರ್ಪಡೆ

ವಯಸ್ಸಿದ್ದಾಗ ಮಾಡಬಾರದ್ದೆಲ್ಲಾ ಮಾಡಿದೆ, ಈಗ ಹೆಂಡ್ತಿ ಹತ್ತಿರ ಸೇರಿಸುತ್ತಿಲ್ಲ- ಏನು ಮಾಡಲಿ?

ಧಾರವಾಡದ ಭೀಕರ ಅಪಘಾತದಲ್ಲಿ ಬದುಕುಳಿದ ಮಹಿಳೆ ಏರ್​ಲಿಫ್ಟ್​ ಮೂಲಕ ಬೆಂಗಳೂರಿಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nine =
Remember me
