ಕಾನ್ಪುರ (ಉತ್ತರ ಪ್ರದೇಶ):ಪಕ್ಕದ ಮನೆಯವಳ ಮಾತು ಕೇಳಿ ಆಕೆಯ ಅಣ್ಣನ ಹುಟ್ಟುಹಬ್ಬಕ್ಕೆ ಹೋದ ಯುವತಿಯೊಬ್ಬಳ ಗ್ಯಾಂಗ್​ರೇಪ್​ ಆಗಿರುವ ಆತಂಕದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
23 ವರ್ಷದ ಯುವತಿಯ ಮೇಲೆ ಇಬ್ಬರು ಯುವಕರು ಸೇರಿ ಅತ್ಯಾಚಾರ ನಾಡಿರುವ ಘಟನೆ ನಡೆದಿದೆ. ಘಟನೆಯಿಂದ ಜರ್ಜರಿತಳಾಗಿ ಹೋಗಿದ್ದ ಯುವತಿಯನ್ನು ಮನೆಯವರೇ ಒಳಕ್ಕೆ ಸೇರಿಸಿಕೊಳ್ಳದ ಕಾರಣ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ನಂತರ ಯುವತಿಯ ಸ್ನೇಹಿತ ಬಂದು ಕಾಪಾಡಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.
ಆಗಿದ್ದೇನು? ಸಂತ್ರಸ್ತೆಯ ನೆರೆಹೊರೆಯ ಹುಡುಗಿಯೊಬ್ಬಳು ತನ್ನ ಅಣ್ಣ ಆಶೀಷ್​ನ ಹುಟ್ಟುಹಬ್ಬವಿದ್ದು ಬಾ ಎಂದು ಆಹ್ವಾನಿಸಿದ್ದಳು. ಮಾತನ್ನು ನಂಬಿ ಸಂತ್ರಸ್ತೆ ಹೋಗಿದ್ದಾಳೆ.
ಅಲ್ಲಿ ಪಾರ್ಟಿ ನಡೆಯುತ್ತಿತ್ತು. ಆಶೀಷ್​ ತನ್ನ ಸ್ನೇಹಿತ ಅಭಿಷೇಕ್ ಜತೆ ಅಲ್ಲಿದ್ದನು. ಇವರಿಬ್ಬರು ಸ್ವಲ್ಪ ಸಮಯದವರೆಗೆ ಸಂತ್ರಸ್ತೆ ಜತೆ ಮಾತನಾಡಿದ್ದಾರೆ. ನಂತರ ಪಾನೀಯ ನೀಡಿದ್ದಾರೆ. ಆದರೆ ಅದರಲ್ಲಿ ನಿದ್ದೆ ಬರುವ ಔಷಧಿ ಮಿಕ್ಸ್ ಮಾಡಲಾಗಿತ್ತು. ಇದನ್ನು ತಿಳಿಯದ ಯುವತಿ ಅದನ್ನು ಕುಡಿದಿದ್ದಾಳೆ.
ಇದನ್ನೂ ಓದಿ:ತಂಗಿ ಸಾವಿಗೆ ಭಾವನೇ ಕಾರಣವೆಂದು 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಬಾಮೈದ
ಪಾನೀಯವನ್ನು ಕುಡಿದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದಾಳೆ ಸಂತ್ರಸ್ತೆ. ನಂತರ ಇಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ಎಚ್ಚರಗೊಂಡ ನಂತರ ತನ್ನ ಮೇಲೆ ಅತ್ಯಾಚಾರ ಆಗಿರುವುದು ತಿಳಿದಿದೆ.
ನಂತರ ಆತಂಕದಿಂದ ಮನೆಗೆ ಹೋಗಿದ್ದಾಳೆ. ಆದರೆ ಆಕೆಯನ್ನು ಸಾಂತ್ವನ ಮಾಡಿ ಧೈರ್ಯ ಹೇಳುವ ಬದಲು ಕುಟುಂಬದವರು ಅವಳಿಗೆ ಬೈದು, ಮನೆಯೊಳಗೆ ಬರಬಾರದೆಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು ಎನ್ನಲಾಗಿದೆ.
ಇದರಿಂದ ಇನ್ನಷ್ಟು ಮಾನಸಿಕವಾಗಿ ನೊಂದ ಯುವತಿ, ಸಮೀಪದ ರೈಲ್ವೆ ನಿಲ್ದಾಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾಳೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಸ್ನೇಹಿತ ಆಕೆಯನ್ನು ಬಚಾವ್​ ಮಾಡಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಗಳಾದ ಆಶಿಶ್ ಮತ್ತು ಆತನ ಸ್ನೇಹಿತ ಅಭಿಷೇಕ್ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ​ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್​, ಕೆಲವೇ ಗಂಟೆ ಬಾಕಿ…

9ನೇ ಕ್ಲಾಸ್‌ ಹುಡುಗ ಕಿಡ್‌ನ್ಯಾಪ್‌: ‘ಅಪಹರಣಕಾರ’ರನ್ನು ನೋಡಿದ ಪಾಲಕರು, ಪೊಲೀಸರು ಕಕ್ಕಾಬಿಕ್ಕಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 12 =
Remember me
