ವಿಜಯವಾಡ (ಆಂಧ್ರಪ್ರದೇಶ):’ನಿಮ್ಗೆ 50-70 ರೂ.ಗೆ ಕ್ವಾರ್ಟರ್‌ ಬಾಟಲ್‌ ಮದ್ಯ ಬೇಕಾ? ಹಾಗಿದ್ರೆ ನಮಗೆ ಒಂದು ಕೋಟಿಯಷ್ಟು ಮತಹಾಕಿ, ಆಗ ನೋಡಿ ಗಮ್ಮತ್ತು…’– ಹೀಗೆಂದವರು ಆಂಧ್ರಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು. 2024ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮದ್ಯಪ್ರಿಯರಿಗೆ ಹೀಗೊಂದು ಆಮಿಷ ಒಡ್ಡಿದ್ದಾರೆ ಸೋಮು ವೀರರಾಜು. ಬಿಜೆಪಿಗೆ ಒಂದು ಕೋಟಿಯಷ್ಟು ಮತ ಹಾಕಿದರೆ ಎಲ್ಲರಿಗೂ 50-70 ರೂಪಾಯಿಗೆ ಮದ್ಯ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗುವುದು, ಒಂದು ವೇಳೆ ಅಷ್ಟು ಹಣ ಕೊಡಲು ಸಾಧ್ಯವಿಲ್ಲವಾದರೆ ಮದ್ಯದ ರೇಟ್‌ ಕಡಿಮೆ ಮಾಡಲಾಗುವುದು ಎಂದಿದ್ದಾರೆ. ಪ್ರಸ್ತುತ ಆಂಧ್ರದಲ್ಲಿ ಕ್ವಾರ್ಟರ್ ಬಾಟಲಿ ಗುಣಮಟ್ಟದ ಲಿಕ್ಕರ್ ದರ 200 ರೂ ಇದೆ.ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಕೇವಲ 50 ರೂಪಾಯಿಗೆ ಒಂದು ಕ್ವಾರ್ಟರ್ ಬಾಟಲಿಯ ಗುಣಮಟ್ಟದ ಮದ್ಯವನ್ನು ಮಾರಾಟ ಮಾಡಲಾಗುವುದು ಎಂದರು.ವಿಜಯವಾಡದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಒಂದು ಕೋಟಿ ಜನರು ಹೆಚ್ಚಿನ ದರದಲ್ಲಿ ಮದ್ಯ ಸೇವಿಸುತ್ತಿದ್ದಾರೆ. ಅಗ್ಗದ ಮದ್ಯಕ್ಕಾಗಿ 2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದರು. ರಾಜ್ಯದ ಪ್ರತಿ ವ್ಯಕ್ತಿ ತಿಂಗಳಿಗೆ ಸುಮಾರು 12 ಸಾವಿರ ರೂಪಾಯಿಯನ್ನು ಮದ್ಯಕ್ಕಾಗಿ ವ್ಯಯ ಮಾಡುತ್ತಿದ್ದಾನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಬಾಟಲಿ ಮದ್ಯವನ್ನು 75 ರೂಪಾಯಿಗೆ ಇಳಿಸುತ್ತೇವೆ, ರಾಜ್ಯದ ಆದಾಯ ಸುಧಾರಣೆಯಾದರೆ ಪ್ರತಿ ಬಾಟಲಿಗೆ 50 ರೂಪಾಯಿಯಂತೆಯೂ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.ಹಾಲಿ ಆಡಳಿತದಲ್ಲಿ ಇರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಇದೇ ಸಂದರ್ಭದಲ್ಲಿ ಟೀಕಿಸಿದ ಅವರು, ರಾಜ್ಯ ಸರ್ಕಾರವು ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ, ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಡಿಮೆ ಬೆಲೆಯಲ್ಲಿಯೇ ಉತ್ತಮ ಗುಣಮಟ್ಟದ ಮದ್ಯ ಪೂರೈಕೆ ಮಾಡುತ್ತದೆ ಎಂದರು. ಇವರ ಈ ಮಾತು ಇದೀಗ ಭಾರಿ ಟೀಕೆಗೆ ಗುರಿಯಾಗಿದೆ.
ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
