ಲಖನೌ (ಉತ್ತರ ಪ್ರದೇಶ):ಕಾಂಗ್ರೆಸ್​ ಕಚೇರಿಯಲ್ಲಿ ಬಿಜೆಪಿ ಧ್ವಜಗಳ ಕಾಣಿಸಿಕೊಂಡು ಕಾಂಗ್ರೆಸ್​ ಕಾರ್ಯಕರ್ತರು ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ಹಾಗೂ ಅಚ್ಚರಿಯಿಂದ ನೋಡುತ್ತಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆದಿದೆ. ಇಲ್ಲಿರುವ ಕಾಂಗ್ರೆಸ್​ ಪ್ರಧಾನ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಇದರ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ. ಈ ವೈರಲ್​ ವಿಡಿಯೋದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಧ್ವಜಗಳು ಇರುವುದನ್ನು ನಾವು ನೋಡಬಹುದಾಗಿದೆ.
ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ಕಚೇರಿಯನ್ನು ಒಳಹೊಕ್ಕಾಗಿ ಒಂದು ಕಡೆಗಳಲ್ಲಿ ಅನೇಕ ಬಿಜೆಪಿ ಧ್ವಜಗಳು ಇರುವುದನ್ನು ನೋಡಿ ಕಂಗಾಲಾಗಿದ್ದಾರೆ. ಇದನ್ನು ಅವರು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.
ಇತ್ತ, ಕಾಂಗ್ರೆಸ್ ಕಚೇರಿ ಪದಾಧಿಕಾರಿಗಳು ಈ ಬಗ್ಗೆ ಯಾವುದೇ ಸೂಕ್ತವಾದ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಧ್ವಜಗಳು ಕಚೇರಿಯ ಒಳಗೆ ಹೇಗೆ ಬಂತು ಎಂದು ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್​ ಕಾರ್ಯಕರ್ತರ ಮೌನವೇ ಉತ್ತರವಾಗಿದೆ. ಆದರೆ, ಯುವ ಮುಖಂಡರೊಬ್ಬರು ಈ ಕುರಿತು ಮಾತನಾಡಿ, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಇದು ಕೆಲ ಅಪರಿಚಿತರ ಕಿಡಿಗೇಡಿತನ ಇರಬೇಕೆಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ
#BJP(@BJP4India) flags were found in Uttar Pradesh#Congress(@INCUttarPradesh) state headquarters in#Lucknowand a video of the incident has gone viral on social media.pic.twitter.com/qrKezQLHId— IANS (@ians_india)July 24, 2022
#BJP(@BJP4India) flags were found in Uttar Pradesh#Congress(@INCUttarPradesh) state headquarters in#Lucknowand a video of the incident has gone viral on social media.pic.twitter.com/qrKezQLHId
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twelve =
Remember me
