ಶಾಮ್ಲಿ (ಉತ್ತರ ಪ್ರದೇಶ):ಮಂಗಗಳು ಬಂದ ದಾಳಿ ಸಂದರ್ಭದಲ್ಲಿ ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬಿಜೆಪಿ ನಾಯಕ ಅನಿಲ್ ಕುಮಾರ್ ಚೌಹಾಣ್ ಅವರ ಪತ್ನಿ ಸುಷ್ಮಾ ದೇವಿ (50) ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.
ಮಂಗಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಎರಡನೇ ಮಹಡಿಯಿಂದ ಕೆಳಗೆ ಹಾರಿಬಿಟ್ಟಿರು. ಕೈರಾನಾ ನಗರದಲ್ಲಿರುವ ತಮ್ಮ ಮನೆಯ ಟೆರೇಸ್​ ಮೇಲೆ ಇದ್ದಾಗ ಮಂಗಗಳು ಏಕಾಏಕಿ ದಾಳಿ ಇಟ್ಟಿದ್ದವು. ಈ ಸಂದರ್ಭದಲ್ಲಿ ಸುಷ್ಮಾ ಅವರು ಟೆರೇಸ್​ನಿಂದ ಕೆಳಗೆ ಜಿಗಿದಿದ್ದಾರೆ. ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಉತ್ತರ ಪ್ರದೇಶದ ಹಲವು ಪಶ್ಚಿಮದ ಜಿಲ್ಲೆಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಮಥುರಾ ಜಿಲ್ಲೆಯಲ್ಲಿ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಸೆಪ್ಟೆಂಬರ್ 1ರಿಂದ ಶುರುವಾಗಿದೆ. ನಗರ ಪ್ರಮುಖ ಸ್ಥಳಗಳು ಮತ್ತು ದೇವಸ್ಥಾನಗಳ ಬಳಿ ಇರುವ ಮಂಗಗಳನ್ನು ಹಿಡಿಯುವ ಕೆಲಸವನ್ನು ಮುನ್ಸಿಪಲ್ ಕಾರ್ಪೊರೇಷನ್ ಮಾಡುತ್ತಿದೆ.
ಬಿಜೆಪಿ ನಾಯಕ ಅನಿಲ್ ಕುಮಾರ್ ಚೌಹಾಣ್ ಅವರು ಮಾಜಿ ಸಂಸದ ಕೂಡ ಆಗಿದ್ದು, ದಿವಂಗತ ಹುಕುಂ ಸಿಂಗ್ ಅವರ ಸಂಬಂಧಿಯಾಗಿದ್ದಾರೆ.
ರೈಲ್ವೆ ವಿಳಂಬದಿಂದ ಪ್ರಯಾಣಿಕರಿಗೆ ನಷ್ಟವಾದರೆ ಇಲಾಖೆಯೇ ಪರಿಹಾರ ನೀಡಬೇಕು- ಸುಪ್ರೀಂಕೋರ್ಟ್‌

ಮೇಜರ್‌ ಆಗಿದ್ದೀನಿ, ಓಡಿ ಹೋಗ್ಬೋದು ಎಂದು ಎಂಗೇಜ್‌ಮೆಂಟ್‌ ಚಿನ್ನಾಭರಣದೊಂದಿಗೆ ಮಂಗಳೂರು ಯುವತಿ ಎಸ್ಕೇಪ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 8 =
Remember me
