ಶ್ರೀನಗರ:ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ಸೋಮ್​ರಾಜ್ ಅವರ ಮೃತದೇಹವು ಮರವೊಂದರ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈ ಮೇಲೆ ರಕ್ತದ ಕಲೆಗಳು ಇರುವ ಹಿನ್ನೆಲೆಯಲ್ಲಿ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ನಿವಾಸಿಯಾಗಿದ್ದ ಸೋಮ್​ರಾಜ್​ ಅವರು, ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆದರೆ ಕುಟುಂಬವು ದೂರು ದಾಖಲಿಸಿರಲಿಲ್ಲ. ಇಂದು ಹೀರಾ ನಗರ ಪಟ್ಟಣದಲ್ಲಿರುವ ಮರವೊಂದರಲ್ಲಿ ಮೃತದೇಹ ಇದ್ದುದನ್ನು ಗ್ರಾಮಸ್ಥರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಇದು ಬಿಜೆಪಿ ಮುಖಂಡನದ್ದು ಎಂದು ತಿಳಿದಿದೆ. ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ರಕ್ತದ ಕಲೆಗಳಿರುವ ಹಿನ್ನೆಲೆಯಲ್ಲಿ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸೋಮ್​ರಾಜ್​ ಅವರ ನಿಧನಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸೋಮ್‍ರಾಜ್ ಕುಟುಂಬಸ್ಥರು ಸೋಮ್‍ರಾಜ್‍ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸರ್ಕಾರ ತಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ(ಏಜೆನ್ಸೀಸ್​)

ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ಪುನಃ ವಿದೇಶಕ್ಕೆ ಹಾರಲಿದೆ ಸೋನಿಯಾ ಕುಟುಂಬ! ಚುನಾವಣೆ ನಿರ್ಧಾರದ ಬೆನ್ನಲ್ಲೇ ಕುತೂಹಲ ಮೂಡಿಸಿದ ನಡೆ

ಬಿಗ್​ಬಾಸ್​ ಸ್ಪರ್ಧಿ, ಖ್ಯಾತ ನೃತ್ಯಗಾತಿ ಸಪ್ನಾಗೆ ಬಂಧನದ ಭೀತಿ: ಕೋರ್ಟ್​ನಿಂದ ವಾರೆಂಟ್​ ಜಾರಿ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 10 =
Remember me
