ಭುವನೇಶ್ವರ (ಒಡಿಶಾ):ಒಡಿಶಾದ ಹಿರಿಯ ಬಿಜೆಪಿ ನಾಯಕ, ಶಾಸಕ ಬಿಷ್ಣು ಸೇಥಿ ಅವರು ಇಂದು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡದ ಕಾಯಿಲೆಗಾಗಿ ಭುವನೇಶ್ವರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ ಆಸ್ಪತ್ರೆಯಲ್ಲಿ ಇವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ಭದ್ರಕ್ ಜಿಲ್ಲೆಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸೇಥಿ ಅವರು ಒಡಿಯಾ ಭಾಷೆಯ ಕವಿ ಮತ್ತು ಬರಹಗಾರರೂ ಆಗಿ ಇವರು ಖ್ಯಾತಿ ಪಡೆದಿದ್ದಾರೆ. ಧಾಮ್ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದರು.
ಮೂತ್ರಪಿಂಡದ ತೊಂದರೆಯಿಂದಾಗಿ ಕಳೆದ ಒಂದು ತಿಂಗಳಿನಿಂದ ಸೇಥಿ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಪತ್ನಿಯನ್ನು ಅಗಲಿದ್ದಾರೆ. ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ನಾಯಕರು ಸೇಥಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸೇಥಿ ಹಿನ್ನೆಲೆ:1961ರ ಜೂನ್ 5ರಂದು ಜನಿಸಿದ್ದ ಬಿಷ್ಣು ಸೇಥಿ, 1995ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಸೇವೆ ಆರಂಭಿಸಿದ್ದರು. 2006ರಲ್ಲಿ ಒಡಿಶಾ ರಾಜ್ಯ ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದರು. 2009 ಮತ್ತು 2014 ರಲ್ಲಿ ಧಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಜಯ ಸಾಧಿಸಲಿಲ್ಲ. 2016ರಲ್ಲಿ ಒಡಿಶಾ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡರು. 2019ರಲ್ಲಿ ಮತ್ತೆ ಕಣಕ್ಕಿಳಿದರು. ಧಾಮ ನಗರದಿಂದ ಶಾಸಕರಾಗಿ ಗೆದ್ದರು ಮತ್ತು ಒಡಿಶಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು.
ಅವರ ನಿಧನದೊಂದಿಗೆ, 2019ರ ಚುನಾವಣೆಯ ನಂತರ ವಿಧಾನಸಭೆಗೆ ಆಯ್ಕೆಯಾದ ತನ್ನ 23 ಶಾಸಕರಲ್ಲಿ ಇಬ್ಬರನ್ನು ಬಿಜೆಪಿ ಕಳೆದುಕೊಂಡಿದೆ. 2020ರಲ್ಲಿ ಬಾಲಸೋರ್ ಶಾಸಕ ಮದನ್ಮೋಹನ್ ದತ್ತಾ ಅವರು ಕೊನೆಯುಸಿರೆಳೆದಿದ್ದರು(ಏಜೆನ್ಸೀಸ್​)
ಡಿಕೆಶಿಗೆ ಶಾಕ್​ ಮೇಲೆ ಶಾಕ್​! ಇ.ಡಿ ಕಚೇರಿಗೆ ಕಾಲಿಡುತ್ತಲೇ ಸುಪ್ರೀಂನಿಂದ ಮತ್ತೊಂದು ಆಘಾತಕಾರಿ ಆದೇಶ
ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಮೈಸೂರಿನ ಇನ್​ಸ್ಪೆಕ್ಟರ್ ಅಶ್ವಿನಿ ಅಮಾನತು
ನನ್ನ ಸ್ನೇಹಿತೆಯಾಗಿರು ಎನ್ನುತ್ತಿದ್ದರು, ಅದೇನೆಂದು ಅರ್ಥವಾದಾಗ ಶಾಕ್​ ಆದೆ: ನಟಿ ತೆರೆದಿಟ್ಟ ಕರಾಳ ಅನುಭವ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × five =
Remember me
