ನವದೆಹಲಿ:ಪ್ರತಿ ಹಳ್ಳಿಗಳ ಬಡ ಮಹಿಳೆಯರಿಗೂ ಸ್ಯಾನಿಟರಿ ಪ್ಯಾಡ್‌ ದೊರೆಯಬೇಕು. ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಳೆದ ತಿಂಗಳ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಕುರಿತು ಹಿಂದೆ ಕೂಡ ಅವರು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು.
ಇದರಿಂದ ಸ್ಫೂರ್ತಿ ಪಡೆದಿರುವ ಬಿಹಾರ ಮೂಲದ ಬಿಜೆಪಿಯ ಸಂಸದ ರಾಕೇಶ್ ಸಿನ್ಹಾ ಅವರು, ಮೇಘಾಲಯದ ಕೊಂಗ್‌ತಾಂಗ್ ಮತ್ತು ಬಿಹಾರದ ಬೆಗಸುರಾಯ್‌ ಸಮೀಪದ ಬೈರಾಪುರ ಹಳ್ಳಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಈ ಹಳ್ಳಿಗಳಲ್ಲಿ ಇರುವ ಸಾವಿರಾರು ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸೋಪ್‌ಗಳನ್ನು ಅವರು ಈಗಾಗಲೇ ಕಳುಹಿಸಿದ್ದಾರೆ.
ಇದನ್ನೂ ಓದಿ:ಸದ್ದಿಲ್ಲದೇ ಸೂಪರ್‌ಮಾರ್ಕೆಟ್‌ ಒಳನುಗ್ಗಿ ಕರಡಿ ಮಾಡುತಿದೆ ಕಿತಾಪತಿ!
ಕೊಂಗ್‌ತಾಂಗ್‌ನಲ್ಲಿ 97 ಕುಟುಂಬಗಳಿಗೆ, 3 ಸಾವಿರ ಸೋಪ್ ಮತ್ತು 3600 ಸ್ಯಾನಿಟರಿ ಪ್ಯಾಡ್‌ಗಳನ್ನು ಕಳುಹಿಸಿದ್ದಾರೆ. ಬೈರಾಪುರದಲ್ಲಿ 300 ಕುಟುಂಬಗಳಿಗೆ, 2 ಸಾವಿರ ಸೋಪ್‌ಗಳು ಮತ್ತು 4 ಸಾವಿರ ಸ್ಯಾನಿಟರಿ ಪ್ಯಾಡ್‌ಗಳನ್ನು ತಲುಪಿಸಿದ್ದಾರೆ.
ಈ ಕುರಿತಾಗಿ ಮೋದಿ ಅವರಿಗೆ ಸಿನ್ಹಾ ಪತ್ರ ಬರೆದಿದ್ದಾರೆ. ಅದರಲ್ಲಿ ‘ನಿಮ್ಮ ಮಾತುಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಎರಡು ಹಳ್ಳಿಗಳನ್ನು ದತ್ತು ಪಡೆದಿದ್ದು, ಇಲ್ಲಿಯ ಮಹಿಳೆಯರಿಗೆ ಸೋಪ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಪೂರೈಸುತ್ತಿದ್ದೇನೆ’ ಎಂದಿದ್ದಾರೆ.
ಹೈಸ್ಕೂಲ್‌ ಮುಗಿಸಿ 18 ವರ್ಷಗಳ ಬಳಿಕ ಈ ಅಪ್ಪ ಕಾಲೇಜು ಸೇರಿದ್ದು ಯಾಕೆ ಗೊತ್ತಾ?

ಟೆಲಿಕಾಂ ಸಂಸ್ಥೆಗಳಿಂದ ಸಾವಿರಾರು ಕೋಟಿ ಶುಲ್ಕ ಬಾಕಿ : ಸುಪ್ರೀಂನಿಂದ 10 ವರ್ಷ ಗಡುವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − nine =
Remember me
