ಇಂದೋರ್​ (ಮಧ್ಯಪ್ರದೇಶ):ಅಮೆರಿಕಕ್ಕೆ ತೆರಳಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು 25 ದಿನಗಳ ನಂತರ ಇಂದೋರ್‌ಗೆ ವಾಪಸಾಗಿದ್ದಾರೆ. ಈಗ ಅವರೊಂದು ಹೇಳಿಕೆ ನೀಡಿರುವುದು ಕಾಂಗ್ರೆಸ್​ ಪಾಳಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಅದೇನೆಂದರೆ ಬಿಹಾರದ ರಾಜಕೀಯದ ಹಾಲಿ ವಿಷಯವನ್ನು ಅವರು ಮಾಧ್ಯಮಗಳ ಜತೆ ಪ್ರಸ್ತಾಪಿಸುತ್ತಿದ್ದರು. ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ, ಕಾಂಗ್ರೆಸ್ ಹಾಗೂ ಇತರ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನಿತೀಶ್​ ಕುಮಾರ್​ ಸರ್ಕಾರದ ಬಗ್ಗೆ ತಾವು ಅಮೆರಿಕದಲ್ಲಿ ಇದ್ದಾಗ ಸ್ನೇಹಿತರ ಜತೆ ಮಾತನಾಡಿರುವುದನ್ನು ಅವರು ಈ ವೇಳೆ ತಿಳಿಸಿದರು. ಆಗ ಅವರು, ‘ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಆದಾಗ ನಾನು ಅಮೆರಿಕದಲ್ಲಿದ್ದೆ. ಬಿಹಾರದ ರಾಜಕೀಯದ ಬಗ್ಗೆ ನನ್ನ ಸ್ನೇಹಿತರ ಜತೆ ಮಾತನಾಡುತ್ತಿದ್ದೆ’ ಎಂದು ಹೇಳಿದರು.
ನಂತರ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರನ್ನು ವಿದೇಶಿ ಮಹಿಳೆಗೆ ಹೋಲಿಸಿದ ಅವರು, “ನಿತೀಶ್​ ಕುಮಾರ್​ ಒಂಥರಾ ಫಾರಿನ್​ ಲೇಡಿ ಇದ್ದ ಹಾಗೆ. ಅಲ್ಲಿಯ ಹುಡುಗಿಯರು ಯಾವಾಗ ಬೇಕಾದರೂ ಬಾಯ್​ಫ್ರೆಂಡ್​ಗಳನ್ನು ಬದಲಿಸ್ತಾರೆ, ಹಾಗೆ ನಿತೀಶ್ ಕುಮಾರ್​ ಕೂಡ. ಯಾವಾಗ ಬೇಕಾದ್ರೂ ಯಾರ ಜತೆಯಾದ್ರೂ ಮೈತ್ರಿ ಮಾಡಿಕೊಳ್ಳುತ್ತಾರೆ” ಎಂದರು. ಆರ್​ಜೆಡಿ ಜತೆ ಮುನಿಸಿಕೊಂಡು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಿತೀಶ್​ ಕುಮಾರ್​, ಪುನಃ ಈಗ ಬಿಜೆಪಿ ಜತೆ ಮುನಿಸಿಕೊಂಡು ಆರ್​ಜೆಡಿ ಜತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಇವರು ಟಾಂಗ್​ ನೀಡಿದರು. ಬಿಹಾರದ ಸಿಎಂ ಯಾವ ಕ್ಷಣದಲ್ಲಿ ಯಾರ ಕೈ ಹಿಡಿತಾರೆ, ಯಾರ ಕೈ ಬಿಡ್ತಾರೆ ಅನ್ನೋದೇ ಗೊತ್ತಾಗೋದಿಲ್ಲ’ ಎಂದು ತಮಾಷೆ ಮಾಡಿದರು.
ಅವರ ಈ ಮಾತಿಗೆ ಕಾಂಗ್ರೆಸ್​ ಕಿಡಿ ಕಾರಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇವರ ಭಾಷಣ ಹಂಚಿಕೊಂಡಿದ್ದು, “ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಿಳೆಯರಿಗೆ ಯಾವ ರೀತಿ ಗೌರವ ತೋರಿಸುತ್ತಿದ್ದಾರೆ ಎಂಬುವುದಕ್ಕೆ ಇಂದೊಂದು ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ. ಹೆಣ್ಣುಮಕ್ಕಳಿಗೆ ಬಿಜೆಪಿ ಯಾವ ರೀತಿಯ ಮರ್ಯಾದೆ ಕೊಡುತ್ತದೆ ನೋಡಿ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

भाजपा के राष्ट्रीय महासचिव द्वारा नारी सम्मान का नया नमूना 👇pic.twitter.com/DEGr5ojM5r— Randeep Singh Surjewala (@rssurjewala)August 18, 2022
भाजपा के राष्ट्रीय महासचिव द्वारा नारी सम्मान का नया नमूना 👇pic.twitter.com/DEGr5ojM5r
ಬಿಹಾರದ ಹೊಸ ಸರ್ಕಾರ ಅಲ್ಲೋಲ ಕಲ್ಲೋಲ: ಕಾನೂನು ಸಚಿವ ಕಿಡ್ನಾಪರ್​? ಶೇ.72 ಮಂದಿ ಮೇಲೆ ಕ್ರಿಮಿನಲ್​ ಕೇಸ್​!
VIDEO: ಛಾನ್ಸ್​ ಕೊಡ್ತಿನಿ, ಒಂದು ಲಕ್ಷ ರೂ.ನೂ ಕೊಡ್ತಿನಿ…ಅವರ ಜತೆ ನೀವು… ಬಿಗ್​ಬಾಸ್ ಸ್ಪರ್ಧಿ ಕಿರಣ್​ ಬಿಚ್ಚಿಟ್ಟ ಕರಾಳ ಕಥೆ…
ಪ್ರಿಯಕರನ ಪ್ರಾಣಕ್ಕೆ ಕುತ್ತು ತಂದ ‘ಕಿಸ್’​: ಮುತ್ತು ಕೊಟ್ಟ ತಕ್ಷಣ ಸತ್ತೇ ಹೋದ! ಪ್ರೇಯಸಿ ಅರೆಸ್ಟ್
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 1 =
Remember me
