ಡೆಹಾರಡೂನ್:2017ರಲ್ಲಿ ಸುಪ್ರೀಂಕೋರ್ಟ್​ ಒಂದು ಐತಿಹಾಸಿಕ ತೀರ್ಪು ನೀಡಿತ್ತು. ಅದೇ ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್​ ಪದ್ಧತಿಯನ್ನು ಅಸಿಂಧು ಎಂದು ಘೋಷಿಸಿದ್ದು.
ಇಂಥ ಒಂದು ತಲೆತಲಾಂತರಗಳ ಪದ್ಧತಿ ವಿರುದ್ಧ ದನಿ ಎತ್ತಿದವರಲ್ಲಿ ಒಬ್ಬರು ಸಾಯರಾ ಬಾನು. ಅವರು ಇದೀಗ ಬಿಜೆಪಿಯನ್ನು ಸೇರಿದ್ದಾರೆ.
ಡೆಹರಾಡೂನ್ ನಗರದ ಪಕ್ಷದ ಕಚೇರಿಯಲ್ಲಿ ಶಯರಾ ಬನೋ ಕಮಲದ ಬಾವುಟ ಹಿಡಿದರು. ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬಸೀಂಧರ್ ಭಗತ್ ಮತ್ತು ಸಂಘಟನಾ ಕಾರ್ಯದರ್ಶಿ ಅಜಯ್ ಕುಮಾರ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು.
2016ರಲ್ಲಿ ಸಾಯರಾ ತ್ರಿವಳಿ ತಲಾಖ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. 15 ವರ್ಷಗಳ ದಾಂಪತ್ಯದ ಬಳಿಕ ಆಕೆಯ ಗಂಡ ಆಕೆಗೆ ತಲಾಖ್ ನೀಡಿದ್ದ. ಇವರ ಜತೆ ಜತೆಗೆ ಆಫ್ರಿನ್​ ರೆಹಮಾನ್‌, ಗುಲ್ಶನ್‌ ಪರ್ವೀನ್‌, ಇಶ್ರತ್‌ ಜಹಾನ್‌ ಮತ್ತು ಆತಿಯಾ ಸಾಬ್ರಿ ಎಂಬ ಇತರ ನಾಳ್ವರು ಮಹಿಳೆಯರ ಅರ್ಜಿಗಳನ್ನೂ ಒಟ್ಟು ಸೇರಿಸಿ ವಿಚಾರಣೆ ನಡೆಸಲಾಗಿತ್ತು.
ಇದನ್ನೂ ಓದಿ:ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಪದೇಪದೆ ಈ ಗುಲಾಬಿಯೇ ಅಧ್ಯಕ್ಷೆ!
ನಂತರ ಸುಪ್ರೀಂಕೋರ್ಟ್​ ತ್ರಿವಳಿ ತಲಾಖ್​ ನಿಷೇಧ ಮಾಡಿತ್ತು. ಇಂದು ಬಿಜೆಪಿ ಸೇರುವ ಮೂಲಕ ತಾವು ಮುಸ್ಲಿಂ ಮಹಿಳೆಯರಿಗೆ ಪಕ್ಷದ ಸಿದ್ಧಾಂತಗಳ ಮನವರಿಕೆ ಮಾಡುವುದಾಗಿ ಸಾಯರಾ ಹೇಳಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದಿದ್ದಾರೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಸಾಯರಾ ಅವರಿಗೆ ಪಕ್ಷ ಸದ್ಯ ಯಾವುದೇ ಜವಾಬ್ದಾರಿಗಳನ್ನು ನೀಡಿಲ್ಲ. ಆದರೆ 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಚಿತ್ರದಲ್ಲಿ ಅಡಗಿರೋ ಸುಂದರಿಯ ಗುರುತಿಸುವಿರಾ?ಫೋಟೋ ಕ್ಲಿಕ್​ ಮಾಡಿ… ಝೂಮ್​ ಮಾಡಿ…

ದೇಶವನ್ನೇ ಬೆಚ್ಚಿಬೀಳಿಸಿದ್ದ ದಿಶಾ ರೇಪ್​ ಕೇಸ್​ ಕುರಿತು ಚಲನಚಿತ್ರ: ಬಿಡುಗಡೆಗೆ ತಡೆ ಕೋರಿ ದಿಶಾ ತಂದೆ ಕೋರ್ಟ್​ಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + eleven =
Remember me
