ನವದೆಹಲಿ:ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಸಂಯೋಜಕ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷವನ್ನು ಬಿಜೆಪಿಯು ತರಾಟೆಗೆ ತೆಗೆದುಕೊಂಡಿದೆ. ರೈತರ ಆತ್ಮಹತ್ಯೆ, ರೈತರ ಬಂಧನ, ಕಲಾವಿದರ, ಕ್ರೀಡಾಪಟುಗಳ ಹತ್ಯೆ ಇದೇ ‘ಆಪ್‌’ ಸಾಧನೆ ಎಂದು ಸರಣಿ ಕೂ ಮೂಲಕ ಆಪ್ ಪಕ್ಷದ ಆಡಳಿತ ವೈಖರಿಯನ್ನು ಪ್ರಶ್ನೆ ಮಾಡಿದೆ.
ಪಂಜಾಬಿನ 2.5 ತಿಂಗಳ ಆಡಳಿತದಲ್ಲೇ ಕೇಜ್ರಿವಾಲ್ ಪಕ್ಷದ ಸಾಧನೆ ಬಹಿರಂಗವಾಗಿದೆ. ರೈತರ ಆತ್ಮಹತ್ಯೆ, ರೈತರ ಬಂಧನ, ಕಲಾವಿದರ, ಕ್ರೀಡಾಪಟುಗಳ ಹತ್ಯೆ ಇದೇ ಆಪ್‌ ಸಾಧನೆ! ಇಂತಹ ಪಕ್ಷದ ಮುಖ್ಯಸ್ಥ ದೇಶದ ಪ್ರಧಾನಿಯಾದರೆ, ದೇಶದ ಗತಿ ಏನಾಗಬಹುದು? ಭಾಸ್ಕರ್‌ ರಾವ್ ಅವರೇ, ಬಿಟ್ಟಿ ಯೋಜನೆಗಳ ಘೋಷಣೆಯೇ ಸಮಾಜ ಪರಿವರ್ತನೆಯೇ?


–BJP KARNATAKA (@BJP4Karnataka)31 May 2022

ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅವರನ್ನು ಮಾರ್ಚ್ ತಿಂಗಳಲ್ಲಿ ಮೈದಾನದಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಏಪ್ರಿಲ್ ತಿಂಗಳಲ್ಲಿ ಮತ್ತೋರ್ವ ಕಬಡ್ಡಿ ಆಟಗಾರ ಧರ್ಮೇಂದರ್ ಸಿಂಗ್ ಕೊಲೆಯಾದರು. ಕೇಜ್ರಿವಾಲ್ ಆಡಳಿತದಲ್ಲಿ ಕ್ರೀಡಾಳುಗಳ ಜೀವಕ್ಕೆ ಬೆಲೆಯೇ ಇಲ್ಲವೇ?
ಆಡಳಿತದಲ್ಲಿ 240 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ರೈತರನ್ನು ಜೈಲಿಗಟ್ಟಲಾಗಿದೆ. ಇಂತಹ ಪಕ್ಷದ ಮುಖಂಡ ಪ್ರಧಾನಿಯಾಗಬೇಕೆಂದು ರಾಜ್ಯದ ಕೆಲವರು ಕನವರಿಸುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರ ಹಿಡಿದು, ಈಗ ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ದುರಂತವೇ ಸರಿ. ಪ್ರಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಕೇಜ್ರಿವಾಲ್ ಆಡಳಿತದಲ್ಲಿ ಕಲಾವಿದರ ಜೀವಕ್ಕೆ ಬೆಲೆಯಿಲ್ಲವೇ?



–BJP KARNATAKA (@BJP4Karnataka)31 May 2022



–BJP KARNATAKA (@BJP4Karnataka)31 May 2022

ಮಾದಕದ್ರವ್ಯ ವ್ಯಸನದಿಂದ ಕಳೆದ 2.5 ತಿಂಗಳಲ್ಲಿ 60 ಕ್ಕೂ ಹೆಚ್ಚು ಜನರು ಪಂಜಾಬಿನಲ್ಲಿ ಸಾವಿಗೀಡಾಗಿದ್ದಾರೆ, ಅಂದರೆ ದಿನಕ್ಕೆ ಸರಾಸರಿ ಒಂದು ಸಾವು! ಯುವ ಜನಾಂಗ, ಈ ರೀತಿಯ ವ್ಯಸನದಿಂದ ಸಾವನ್ನಪ್ಪುತ್ತಿರುವುದು ಅತ್ಯಂತ ಖೇದ. ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್‌ ಪಕ್ಷ ಈಗ ಜನತೆಗೆ ನರಕ ದರ್ಶನ ಮಾಡಿಸುತ್ತಿದೆ ಎಂದು ಪಕ್ಷ ತರಾಟೆಗೆ ತೆಗೆದುಕೊಂಡಿದೆ.


–BJP KARNATAKA (@BJP4Karnataka)31 May 2022

15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
