ದಿಯು:ಪಶ್ಚಿಮ ಭಾರತದಲ್ಲಿರುವ ದಿಯು ಮತ್ತು ದಮನ್​ಗಳ ಪೈಕಿ ದಿಯು ಮುನ್ಸಿಪಲ್ ಕೌನ್ಸಿಲ್‌ಗೆ ಇದೇ 7ರಂದು ಚುನಾವಣೆ ನಡೆದಿತ್ತು. ಅಚ್ಚರಿಯ ರೀತಿಯಲ್ಲಿ ಚುನಾವಣೆ ನಡೆದ ಒಟ್ಟೂ 13 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕಗೆ ಹಾಕಿಕೊಂಡಿದೆ. ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲು ಕಾಂಗ್ರೆಸ್​ಗೆ ಸಾಧ್ಯವಾಗದೇ ಭಾರಿ ಮುಖಭಂಗ ಅನುಭವಿಸಿದೆ.
ಬಿಜೆಪಿ 6 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಆದರೆ, ಉಳಿದ ಏಳು ಸ್ಥಾನಕ್ಕೆ ಜುಲೈ 7 ರಂದು ಚುನಾವಣೆ ನಡೆದು, ಈಗ ಫಲಿತಾಂಶ ಹೊರಬಿದ್ದಿದೆ. ಒಂದೂವರೆ ದಶಕದ ನಂತರ ಕೌನ್ಸಿಲ್‌ ಅಧಿಕಾರವನ್ನು ಬಿಜೆಪಿ ಪಾಲಾಗಿದೆ. ಇಷ್ಟೇ ಅಲ್ಲದೇ ಎಲ್ಲಾ ಕ್ಷೇತ್ರಗಳನ್ನು ಒಂದೇ ಪಕ್ಷ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ ಎಂದು ತಿಳಿದುಬಂದಿದೆ.
ಮತದಾರರು ತುಷ್ಟೀಕರಣ ರಾಜಕಾರಣವನ್ನು ತಿರಸ್ಕರಿಸಿ ಅಭಿವೃದ್ಧಿಯ ರಾಜಕೀಯವನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಿ ಮತ್ತಷ್ಟು ಅಭಿವೃದ್ಧಿಗೊಳಿಸಲು ಸಹಕರಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳು ಎಂದು ಡಿಎನ್‌ಎಚ್ ಮತ್ತು ದಮನ್-ದಿಯು ಬಿಜೆಪಿ ರಾಜ್ಯಾಧ್ಯಕ್ಷ ದೀಪೇಶ್ ತಾಂಡೇಲ್ ಹೇಳಿದ್ದಾರೆ. ಜನರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಟ್ಟಿರುವ ಅಪಾರ ಪ್ರೀತಿಯಿಂದಲೇ ಇದು ಸಾಧ್ಯವಾಯಿತು ಎಂದು ಬಿಜೆಪಿ ಹೇಳಿದೆ.
ಅರುಣಾಚಲ ಪ್ರದೇಶದ ಪಂಚಾಯಿತಿಗಳಿಗೆ ಇದೇ 12ರಂದು ಉಪಚುನಾವಣೆ ನಡೆಯಲಿದೆ. ಕುತೂಹಲದ ಸಂಗತಿ ಎಂದರೆ 130 ಪಂಚಾಯಿತಿಗಳಲ್ಲಿ ಇದಾಗಲೇ 102 ಅವಿರೋಧವಾಗಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನು 28 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕಿದೆ.
ಮದ್ವೆನೇ ಆಗಿಲ್ಲ, ಡಿವೋರ್ಸ್​ ಮಾತೆಲ್ಲಿ? ಎಂದಿದ್ದ ಪವಿತ್ರಾ ಮಾತಿಗೆ ಕೊನೆಗೂ ಮೌನ ಮುರಿದ ಸುಚೇಂದ್ರಪ್ರಸಾದ್!

ಮನೆಯಲ್ಲಿ ಅಮ್ಮನ ಶವ, ಮಂಟಪದಲ್ಲಿ ಮಗನ ಅದ್ಧೂರಿ ಮದುವೆ! ವಿವಾಹಕ್ಕೆ ಸಾಕ್ಷಿಯಾದ ಸಾವಿರಾರು ಜನ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
