ಬೆಂಗಳೂರು:ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಮಗನಿಗೆ ಅಶ್ಲೀಲ ವಿಡಿಯೋ ತೋರಿಸಿ ಒಂದು ಕೋಟಿ ರೂಪಾಯಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಿರುವ ಘಟನೆ ನಡೆದಿದೆ.
ಸೋಮಶೇಖರ್‌ ಅವರ ಪುತ್ರ ನಿಶಾಂತ್‌ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮಶೇಖರ್ ಅವರ ಆಪ್ತ ಸಹಾಯಕರ ಮೊಬೈಲ್ ಸಂಖ್ಯೆಗೆ ಒಂದು ವಾಟ್ಸ್‌ಆ್ಯಪ್‌ ಸಂದೇಶ ಬಂದಿತ್ತು. ಅದು ವಿದೇಶಿ ಸಂಖ್ಯೆಯಾಗಿದ್ದು ಅದರಲ್ಲಿ ‘ಸೋಮಶೇಖರ್‌ ಅವರ ಪುತ್ರ ನಿಶಾಂತ್‌ನ ಅಶ್ಲೀಲ ವಿಡಿಯೋ ನಮ್ಮ ಬಳಿ ಇದೆ. ಒಂದು ಕೋಟಿ ರೂಪಾಯಿ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ’ ಎಂದು ಹೇಳಲಾಗಿತ್ತು. ಇದನ್ನು ನೋಡಿದ ನಿಶಾಂತ್‌ ಅವರು ಇದು ಫೇಕ್‌ ವಿಡಿಯೋ ಆಗಿರುವುದಾಗಿ ಹೇಳಿ ಸೈಬರ್‌ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸೋಮಶೇಖರ್‌ ಅವರು, ನನ್ನ ಪುತ್ರ ಊಟ ಮಾಡುವ ಚಿತ್ರಗಳನ್ನು ಪಡೆದು ವಿಡಿಯೋ ಮಾಡಿದ್ದು, ಇದನ್ನು ಮಾರ್ಫ್ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ವಿಡಿಯೋ ಸಮೇತ ದೂರು ನೀಡಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.
ಈ ನಡುವೆಯೇ, ನಿಶಾಂತ್‌ ಅವರ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಸದ್ಯ ಬಂಧಿಸಿದ್ದಾರೆ. ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್‌ ಇವರ ಪೈಕಿ ಒಬ್ಬನಾಗಿದ್ದರೆ, ರಾಹುಲ್‌ ಭಟ್‌ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಈತ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ ಎನ್ನುವುದು ಬೆಳಕಿಗೆ ಬಂದಿದೆ. ಮಾತ್ರವಲ್ಲದೇ ಈ ಬ್ಲ್ಯಾಕ್‌ಮೇಲ್‌ ಹಿಂದೆ ವಿಜಯಪುರದ ಖ್ಯಾತ ಶಾಸಕರೊಬ್ಬರ ಮಗಳೂ ಸೇರಿರುವುದಾಗಿ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಈಕೆಗಾಗಿ ಜಾಲ ಬೀಸಿದ್ದಾರೆ.
ನಾನು ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಾ ಬಂದಿರುತ್ತೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದೆ ಕೃತ್ಯ ಮಾಡಲಾಗಿದೆ ಎಂದು ನಿಶಾಂತ್ ಹೇಳಿದ್ದಾರೆ. ನನ್ನನ್ನು ನೇರವಾಗಿ ಟಾರ್ಗೆಟ್ ಮಾಡಿ ನಕಲಿ ವಿಡಿಯೋ ಮಾಡಲಾಗಿದೆ. ಯಾರೋ ಮಹಿಳೆಯ ಜತೆಯಲ್ಲಿರುವಂತೆ ಅಶ್ಲೀಲವಾದ ನಕಲಿ ದೃಶ್ಯಾವಳಿ ಮತ್ತು ಫೋಟೋ ಸೃಷ್ಟಿಸಿ ನನಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನಟ ಯಶ್‌- ಅಭಿಮಾನಿಗಳಿಂದಲೇ ಟ್ರೋಲ್‌, ಕಮೆಂಟ್‌ಗಳ ಮೂಲಕ ಆಕ್ರೋಶ

‘ಅವ್ನು ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

ಉಸ್ಸಪ್ಪಾ ಈ ಪಾದಯಾತ್ರೆ ನನ್ನಿಂದ ಆಗಲ್ಲಪ್ಪಾ…. ಜೋಶ್‌ನಲ್ಲಿ ಹೋದ ಸಿದ್ದು ಸುಸ್ತಾಗಿ ವಾಪಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + sixteen =
Remember me
