ಸಿಡ್ನಿ:ಸಂಗಾತಿಯಿಂದ ಮಿಲನ ಬಯಸಿದಾಗ ಇವು ಸಿಳ್ಳೆಯ ಮೂಲಕ ಹಾಡು ಹೇಳುತ್ತವೆ, ಒಂದೇ ರೀತಿಯ ಹಾಡು ಕೇಳಿ ಸಂಗಾತಿಗೆ ಬೇಸರವಾಯಿತು ಎನ್ನಿಸಿದರೆ, ಸಿಳ್ಳೆ ಊದುವ ರೀತಿಯನ್ನು ಬದಲಿಸಿ ಬೇರೆ ಬೇರೆ ರೀತಿ ಹಾಡು ಹೇಳುತ್ತವೆ…ಇದೇ ನೀಲಿ ತಿಮಿಂಗಲ. 80ಕ್ಕೂ ಅಧಿಕ ಪ್ರಭೇದಗಳು ತಿಮಿಂಗಲಗಳಲ್ಲಿ ಇದ್ದು, ಇವುಗಳ ಪೈಕಿ ಭಾರಿ ತೂಕದ ತಿಮಿಂಗಲ ಎಂದು ಪ್ರಸಿದ್ಧಿ ಪಡೆದಿರುವುದು ನೀಲಿ ತಿಮಿಂಗಲ, ಇವುಗಳ ನಾಲಗೆಯೇ ಆನೆಯಷ್ಟು ತೂಕ ತೂಗುತ್ತದಂತೆ!ಇಂಥದ್ದೊಂದು ಅಪರೂಪದ ತಿಮಿಂಗಲವೀಗ ಅಳಿವಿನ ಅಂಚಿನಲ್ಲಿದೆ. ಆದರೆ ಕೆಲ ದಿನಗಳ ಹಿಂದೆ ಸಿಡ್ನಿಯ ಕರಾವಳಿಯಲ್ಲಿ ನೀಲಿ ತಿಮಿಂಗಲ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಒಂದು ಲಕ್ಷ ಕೆ.ಜಿಗೂ ಅಧಿಕ ಭಾರದ ತಿಮಿಂಗಲ ಇದು ಎನ್ನಲಾಗಿದೆ. ಕಳೆದ 100 ವರ್ಷಗಳಲ್ಲಿ ಈ ಗಾತ್ರದ ತಿಮಿಂಗಲ ಇದು ಮೂರನೆಯ ಬಾರಿ ಪತ್ತೆಯಾಗಿರುವುದು. ಆದರೆ ಹಿಂದೆ ಎರಡು ಬಾರಿ ಪತ್ತೆಯಾಗಿರುವ ತಿಮಿಂಗಲಗಳಿಗಿಂತಲೂ ಇದು ಅಧಿಕ ತೂಗುತ್ತದೆ ಎಂದಿದ್ದಾರೆ ತಜ್ಞರು.
ಇದನ್ನೂ ಓದಿ:ಸ್ತ್ರೀಲೋಲ, ಮದ್ಯವ್ಯಸನಿ ಸಂಸದ ಪತಿಗೆ ಶಿಕ್ಷೆ ನೀಡಿ: ನಟಿಯಿಂದ ಕೇಸ್‌ ದಾಖಲು- ದೂರಲ್ಲಿ ಗಂಭೀರ ಆರೋಪನ್ಯೂ ಸೌತ್ ವೇಲ್ಸ್ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಸೇವೆಯ (ಎನ್‌ಪಿಡಬ್ಲ್ಯುಎಸ್) ಅಧಿಕಾರಿಗಳ ಪ್ರಕಾರ, ತಿಮಿಂಗಿಲವು 25 ಮೀಟರ್‌ಗಿಂತ (82 ಅಡಿ) ಹೆಚ್ಚು ಉದ್ದವಿದೆ ಮತ್ತು 100 ಟನ್‌ಗಳಷ್ಟು (ಒಂದು ಲಕ್ಷ ಕೆಜಿ) ತೂಕವಿರಬಹುದು.ಅತಿ ದೊಡ್ಡ ಸಸ್ತನಿ ಎಂದೇ ಪ್ರಸಿದ್ಧಿ ಪಡೆದಿರುವ ನೀಲಿ ತಿಮಿಂಗಲದ ಜೀವನವೂ ರೋಚಕವಾಗಿದೆ. ಕೆಲವೊಮ್ಮೆ ಸಾಗರದಡಿಗೆ ಬಂದು ಸಾಯುವ ಈ ಸಸ್ತನಿಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
ಪ್ರಧಾನಿ, ಸಚಿವರೆಲ್ಲಾ ಮಂಚಕೆ ಕರೆದಿದ್ದರು ಎಂದ ಸುಂದರಿಯನ್ನು ದೇಶದಿಂದಲೇ ಹೊರದಬ್ಬಿದ ಪಾಕ್‌!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × four =
Remember me
