ಮುಂಬೈ:ರಸ್ತೆಯಲ್ಲಿ ಗುಂಡಿ ಬೀಳುವುದು ಹೊಸ ಮಾತೇನಲ್ಲ. ಹೊಸದಾಗಿ ನಿರ್ಮಿಸಿರುವ ರಸ್ತೆಗಳು ಕೂಡ ಕೆಲವೇ ದಿನಗಳಲ್ಲಿ ಗುಂಡಿಪಾಲಾಗುವುದು ನಡೆದೇ ಇದೆ. ಇದರಿಂದ ಜೀವ ಕಳೆದುಕೊಳ್ಳುತ್ತಿರುವವರಿಗೂ ಲೆಕ್ಕವಿಲ್ಲ. ಎಷ್ಟೋ ಸಂದರ್ಭದಲ್ಲಿ ಕೋರ್ಟ್​ಗಳು ಛೀಮಾರಿ ಹಾಕಿದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ, ರಸ್ತೆಗೆ ಗುಂಡಿ ಬಿದ್ದಿರುವ ಕಾರಣ, ಗಣೇಶನಿಗೆ ಮುಂಬೈ ಮಹಾ ನಗರ ಪಾಲಿಕೆಯೇ 3.66 ಲಕ್ಷ ರೂ. ದಂಡ ವಿಧಿಸಿದೆ!
ಗಣೇಶೋತ್ಸವದ ಸಂದರ್ಭದಲ್ಲಿ ರಸ್ತೆಯ ಮೇಲೆ 183 ಗುಂಡಿಗಳು ಬಿದ್ದ ಹಿನ್ನೆಲೆಯಲ್ಲಿ, ಪ್ರತಿ ರಸ್ತೆಗುಂಡಿಗೂ ತಲಾ 2 ಸಾವಿರ ರೂ. ದಂಡದಂತೆ 3.66 ಲಕ್ಷ ದಂಡ ವಿಧಿಸಲಾಗಿದೆ. ಲಾಲ್​ಬಾಗ್​ಚಾ ರಾಜಾ ಗಣೇಶನಿಗೆ ಈ ದಂಡ ವಿಧಿಸಲಾಗಿದ್ದು, ಇದರ ಆಯೋಜಕರು ಈಗ ದಂಡವನ್ನು ನೀಡಬೇಕಿದೆ.
ಗಣಪತಿ ಕೂರಿಸಲು ರಸ್ತೆಯನ್ನು ಅಗೆಯಲಾಗುತ್ತದೆ. ಈ ಕಾರಣದಿಂದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಗಣೇಶನ ಹಬ್ಬ ಮುಗಿದ ನಂತರ ರಸ್ತೆಗಳ ಪರಿಶೀಲನೆ ನಡೆಸಿ ರಸ್ತೆಯ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನೆಯಲ್ಲಿ ಲಾಲ್​ಬಾಗ್​ಚಾ ರಾಜಾ ಗಣೇಶನಿಂದ ರಸ್ತೆ ಗುಂಡಿ ಸೃಷ್ಟಿಯಾಗಿದ್ದು ಕಂಡುಬಂದಿದ್ದು, ದಂಡ ವಿಧಿಸಿದೆ.
ಲಾಲ್​ಬಾಗ್​ಚಾ ಗಣೇಶ ದೇಶದಲ್ಲೊಂದೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಈ ಗಣಪನಿಗೆ ಈಗ ದಂಡ ವಿಧಿಸಲಾಗಿದೆ. (ಏಜೆನ್ಸೀಸ್​)
ಆಸ್ಕರ್​ ಅಂಗಳದಲ್ಲಿ ಗುಜರಾತಿ ಸಿನಿಮಾ ‘ಚೆಲ್ಲೋ ಷೋ’: ಚಿತ್ರದಲ್ಲಿ ಕನ್ನಡಿಗನ ಸಾಧನೆ…
ತಂದೆ-ತಾಯಿಯ ಮೂರ್ತಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಿದ ನಿವೃತ್ತ ಎಸ್​ಐ: ದಿನವೂ ಪೂಜೆ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × five =
Remember me
