ನವದೆಹಲಿ:ದೆಹಲಿಯಲ್ಲಿ ಎರಡು ದಿನಗಳ ಡ್ರೋನ್‌ ಉತ್ಸವ ನಡೆಯಲಿದ್ದು, ಇಂದು ಅದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರ ಕೈಯಿಂದ ಚಾಲನೆಯ ಅದೃಷ್ಟ ಒದಗಿ ಬಂದದ್ದು ಬೆಂಗಳೂರಿನ ಡ್ರೋನ್‌ಗೆ. ಬೆಂಗಳೂರಿನ ಫುಲ್​ಸ್ಟಾಕ್​ ಡ್ರೋನ್​ ಟೆಕ್ನಾಲಜಿ ಕಂಪನಿ ಆಸ್ಟೆರಿಯಾ ಏರೋಸ್ಪೇಸ್​ ಲಿಮಿಟೆಡ್​ ಅಭಿವೃದ್ಧಿ ಪಡಿಸಿದ ಡ್ರೋನ್‌ ಪ್ರಧಾನಿ ಹಾರಿಸಿದರು.
ಭಾರತದ ಅತಿದೊಡ್ಡ ಡ್ರೋನ್​ ಉತ್ಸವ ಇದಾಗಿದೆ. ಬೆಂಗಳೂರಿನ ಡ್ರೋನ್​ ಅನ್ನು ಹಾರಿಸಿದ ಬಳಿಕ, ಪ್ರದರ್ಶನ ಸ್ಥಳದಲ್ಲಿದ್ದ ಆಸ್ಟೆರಿಯಾ ಬೂತ್​ಗೆ ಭೇಟಿ ನೀಡಿ, ಕಂಪನಿಯ ಡ್ರೋನ್​ಗಳ ಬಗ್ಗೆ ತಿಳಿದುಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಡ್ರೋನ್​ಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ. ಅಭಿವೃದ್ಧಿ ಕಾರ್ಯಗಳ ವೀಕ್ಷಣೆಗೆ ಡ್ರೋನ್​ ಕ್ಯಾಮೆರಾಗಳ ನೆರವನ್ನು ಪಡೆಯುತ್ತಿದ್ದೇನೆ. ಈ ಮೂಲಕ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದನ್ನು ತಪ್ಪಿಸಬಹುದು. ಸಮಯದ ಉಳಿತಾಯವೂ ಆಗುತ್ತದೆ. ವಿಪತ್ತು ನಿರ್ವಹಣೆ, ಕೃಷಿ, ಸರ್ವೇಕ್ಷಣೆ, ಮಾಧ್ಯಮ ಅಥವಾ ಪ್ರವಾಸೋದ್ಯಮ ಹೀಗೆ ಯಾವುದೇ ಕ್ಷೇತ್ರವಾದರೂ ಸಾರ್ವಜನಿಕ ಸೇವೆಯಲ್ಲಿ ಡ್ರೋನ್​ಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲವು. ಅದೇ ರೀತಿ, ಸರ್ಕಾರಿ ಸೇವೆ ಒದಗಿಸುತ್ತ ಬದುಕನ್ನು ಹಸನುಗೊಳಿಸಬಲ್ಲವು. ಡಿಜಿಟಲ್​ ಮ್ಯಾಪಿಂಗ್​ನಲ್ಲಿ ಡ್ರೋನ್​ಗಳ ನೆರವು ಪಡೆದ ಬಳಿಕ, 65 ಲಕ್ಷ ಆಸ್ತಿ ಕಾರ್ಡ್​ಗಳನ್ನು ವಿತರಿಸಲಾಗಿದೆ ಎಂದರು.
ಡ್ರೋನ್‌ ಉತ್ಸವಕ್ಕೆ ನಾಳೆ (ಶನಿವಾರ) ತೆರೆ ಬೀಳಲಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರಪಡೆ, ಕೇಂದ್ರೀಯ ಸಶಸ್ತ್ರ ಪೊಲೀಸ್​ ಪಡೆ, ಸಾರ್ವಜನಿಕ ವಲಯದ ಸಂಸ್ಥೆಗಳ ಪ್ರತಿನಿಧಿಗಳು, ಖಾಸಗಿ ಕಂಪನಿಗಳ ಪ್ರತಿನಿಧಿಗಳು, ಡ್ರೋನ್​ ನವೋದ್ಯಮಗಳ ಪ್ರತಿನಿಧಿಗಳು ಸೇರಿ 1,600ಕ್ಕೂ ಹೆಚ್ಚು ಜನ ಈ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಉತ್ಸವದಲ್ಲಿ 70ಕ್ಕೂ ಹೆಚ್ಚು ಸ್ಟಾಲ್​ಗಳಿವೆ. ವಿವಿಧ ರೀತಿಯ ಡ್ರೋನ್​ಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ಅನ್ಯ ಧರ್ಮದವನನ್ನು ಮದುವೆಯಾದ ಮಗಳನ್ನು ಪೊಲೀಸರು ಹುಡುಕಿಕೊಟ್ಟರು: ಅಪ್ಪ-ಅಮ್ಮ ಕೊಲೆ ಮಾಡಿದರು!

VIDEO: ಸಾಕು… ಸಾಕು… ನನ್ನ ಮುಟ್ಬೇಡ… ನೀನು ಅಸ್ಪೃಶ್ಯ: ಧಾರ್ಮಿಕ ಬೋಧಕನ ವೈರಲ್‌ ವಿಡಿಯೋಗೆ ಭಾರಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
