ತೆಹ್ರಿ (ಉತ್ತರಾಖಂಡ):ಏಷ್ಯಾದ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿರುವ ಉತ್ತರಾಖಂಡ್​ನ ತೆಹ್ರಿ ಸರೋವರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.
ಇಲ್ಲಿ ಬೀಸುತ್ತಿರುವ ರಭಸವಾದ ಗಾಳಿ, ಮಳೆಗೆ ಸರೋವರದಲ್ಲಿನ ಬೋಟುಗಳು ಚೆಲ್ಲಾಪಿಲ್ಲಿಯಾಗಿವೆ. ಈ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಬೋಟ್​ಗಳಿಗೆ ಹಾನಿಯಾಗಿದೆ. 2016ರ ನಂತರ ಎರಡನೇ ಬಾರಿಗೆ ಇಂತಹ ಬಿರುಗಾಳಿ ಅಪ್ಪಳಿಸಿದ್ದು, ಸಾಕಷ್ಟು ಹಾನಿ ಉಂಟುಮಾಡಿದೆ.
ಇಷ್ಟೇ ಅಲ್ಲದೇ 30ಕ್ಕೂ ಅದಿಕ ಬೋಟ್‌ಗಳ ಇಂಜಿನ್‌ಗಳು ಜಲಾವೃತವಾಗಿವೆ ಎಂದು ಬೋಟ್ ನಿರ್ವಾಹಕರು ತಿಳಿಸಿದ್ದಾರೆ. ಸಂಜೆ ವೇಳೆಗೆ ಕೋಟಿಕಾಲೋನಿಯ ಬೋಟಿಂಗ್ ಪಾಯಿಂಟ್‌ನಲ್ಲಿ ನಿಲ್ಲಿಸಲಾಗಿದ್ದ ಹತ್ತಾರು ಬೋಟ್‌ಗಳಿಗೆ ಭಾರೀ ಹಾನಿಯಾಗಿದೆ.
ಜಿಲ್ಲಾಡಳಿತ ಕೂಡಲೇ ನಮ್ಮ ಸಹಾಯಕ್ಕೆ ಬರಬೇಕೆಂದು ಬೋಟ್ ಚಾಲಕರು ಒತ್ತಾಯಿಸಿದ್ದಾರೆ. ಬಿರುಗಾಳಿ ಬೀಸುತ್ತಿದ್ದ ವೇಳೆ ಬೋಟ್​ನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಬೋಟ್ ಚಾಲಕರು ಬಹಳ ಶ್ರಮಪಟ್ಟು ಕಾಪಾಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: ಕೃಪೆKhabar Uttarakhand

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
