ಮುಂಬೈ:ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್ ಪ್ರಶಸ್ತಿ ಪಡೆದು ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿರುವ ಮನೋಜ್ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ತನ್ನ ಸಾವಿಗೆ ನಟ ಸಾಹಿಲ್‌ ಖಾನ್‌ ಅವರೇ ಕಾರಣ ಎಂದು ನೋಟ್‌ನಲ್ಲಿ ಬರೆದಿಟ್ಟಿರುವ ಮನೋಜ್‌, ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕೆಲವು ದಿನಗಳಿಂದ ನಟ ಸಾಹಿಲ್ ಖಾನ್ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಸಾಯದೇ ಬೇರೆ ದಾರಿ ಇಲ್ಲ. ತುಂಬಾ ನೊಂದುಕೊಂಡಿದ್ದೇನೆ. ಆದ್ದರಿಂದಾಗಿ ನಾನು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನೋಟ್‌ನಲ್ಲಿ ಮನೋಜ್‌ ಉಲ್ಲೇಖಿಸಿದ್ದಾರೆ.
ಅಷ್ಟಕ್ಕೂ ನಟ ಸಾಹಿಲ್‌ ಖಾನ್‌ಗೆ ಇವರ ಮೇಲೆ ಏಕೆ ದ್ವೇಷ ಎಂಬ ಬಗ್ಗೆ ಈ ಹಿಂದೆ ವಿವರಿಸಿದ್ದ ಮನೋಜ್‌. ನಾನು ಮಿಸ್ಟರ್ ಇಂಡಿಯಾ ಆದ ನಂತರ ಮಿಸ್ಟರ್​ ಒಲಂಪಿಯಾದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದೇನೆ. ಸಾಹಿಲ್ ಖಾನ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ದಾರೆ. ಆದ್ದರಿಂದ ಸ್ಪರ್ಧೆಯಲ್ಲಿ ನಾನು ಭಾಗವಹಿಸದಂತೆ ಮಾಡುವುದೇ ಅವರ ಉದ್ದೇಶ. ಇದರಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದರು.
ಒಬ್ಬಳನ್ನು ರೇಪ್‌ ಮಾಡಿದೆ, ಸತ್ತೋದ್ಲು, ಗೃಹಿಣಿಯರೇ ನಮ್ಮ ಟಾರ್ಗೆಟ್‌: ಭೀತಿ ಹುಟ್ಟಿಸಿದ ವೈರಲ್‌ ಆಡಿಯೋ

ಹುಟ್ಟುಹಬ್ಬದಂದೇ ಕಾದುಕುಳಿತಿದ್ದ ಜವರಾಯ! ಕೇಕ್‌ ಕಟ್ ಮಾಡುವಷ್ಟರಲ್ಲೇ ಪುಟಾಣಿಯ ಜೀವ ಹೋಯ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + ten =
Remember me
