ಮುಂಬೈ:ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದು, ದಿನವೂ ಒಂದಿಲ್ಲೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​. ಅದರಲ್ಲಿಯೂ ಅವರ ತಂದೆ ಹರಿವಂಶರಾಜ್​ ಬಚ್ಚನ್​ ಪ್ರಸಿದ್ಧ ಕವಿಯಾಗಿದ್ದರಿಂದ ಬಿಗ್​ ಬಿಗೂ ಕವನದ ಬಗ್ಗೆ ಅಪಾರ ಆಸಕ್ತಿ.
ಇದೇ ಕವನ ಈ ನಟನನ್ನು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಾಡಿದೆ. ಟ್ವಿಟರ್​ ಮೂಲಕ ತಿಶಾ ಅಗರ್​ವಾಲ್​ ಎಂಬ ಮಹಿಳೆಗೆ ಅಮಿತಾಭ್​ ಬಚ್ಚನ್​ ಕ್ಷಮೆ ಕೋರಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ ಇತ್ತೀಚೆಗಷ್ಟೇ ಅಮಿತಾಭ್ ಅವರು ಕವನವೊಂದನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಅದನ್ನು ಬರೆದವರು ಯಾರು ಎಂದು ಅವರ ನಮೂದು ಮಾಡಿರಲಿಲ್ಲ. ಈ ಕವನ ತಮಗೆ ತುಂಬಾ ಇಷ್ಟವಾಯಿತು ಎಂದು ಬರೆದುಕೊಂಡಿದ್ದರು. ಚಹ ಸೇವನೆಯಿಂದ ಮನಸ್ಸಿಗೆ ಉಂಟಾಗುವ ಅಹ್ಲಾದದ ಕುರಿತಾದ ಕವನ ಅದು. ಚಹವನ್ನು ಸೇವಿಸುತ್ತಾ ಇರುವ ತಮ್ಮ ಫೋಟೋ ಜತೆ ಈ ಕವನವನ್ನು ಅಮಿತಾಭ್​ ಶೇರ್​ ಮಾಡಿದ್ದರು.
T 3761 – थोड़ा पानी रंज का उबालियेखूब सारा दूध ख़ुशियों का*थोड़ी पत्तियां ख़यालों की..*
थोड़े गम को कूटकर बारीक,हँसी की चीनी मिला दीजिये..*उबलने दीजिये ख़्वाबों को**कुछ देर तक..!*
यह ज़िंदगी की चाय है जनाब..इसे तसल्ली के कप में छानकर*घूंट घूंट कर मज़ा लीजिये…!!*☕🍵pic.twitter.com/qwGbczzcLp
— Amitabh Bachchan (@SrBachchan)December 23, 2020

ಅದಕ್ಕೆ ಅವರ ಅಭಿಮಾನಿಗಳಲ್ಲಿ ಒಬ್ಬರಾಗಿರುವ ತಿಶಾ ಅಗರ್​ವಾಲ್​ ಅವರು, ‘ಸರ್, ನಿಮ್ಮ ಟ್ವಿಟ್ಟರ್ ಖಾತೆಯನ್ನು ನನ್ನ ಕವನ ನೋಡಲು ನಾನು ಪುಣ್ಯ ಮಾಡಿದ್ದೇನೆ. ಅದನ್ನು ಬರೆದವಳು ನಾನು. ನಿಮ್ಮ ಕವನದ ಜತೆಗೆ ನನ್ನ ಹೆಸರು ಇದ್ದಿದ್ದರೆ ನನ್ನ ಖುಷಿ, ಹೆಮ್ಮೆ ದುಪ್ಪಟ್ಟಾಗಿರುತ್ತಿತ್ತು’ ಎಂದು ಹೇಳಿದ್ದಾರೆ.
ಈ ಪ್ರತಿಕ್ರಿಯೆ ನೋಡಿ ಅಮಿತಾಭ್ ಹೊಸದೊಂದು ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ. ಈ ಕವನ ಇಷ್ಟವಾಯಿತು. ಆದರೆ ಬರೆದದ್ದು ಯಾರು ಎಂದು ತಿಳಿದಿರಲಿಲ್ಲ. ಈ ಕವನದ ಟ್ವೀಟ್‌ ತಿಶಾ ಅಗರ್‌ವಾಲ್ ಅವರಿಗೆ ಸೇರುವುದು. ಈ ಕವನ ಯಾರು ಬರೆದಿದ್ದಾರೆ ಎಂದು ಗೊತ್ತಿರದೇ ಪೋಸ್ಟ್ ಮಾಡಿದ್ದಾಗಿ ಬಹಿರಂಗವಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
T 3765 – "थोड़ा पानी रंज का उबालियेखूब सारा दूध ख़ुशियों का*थोड़ी पत्तियां ख़यालों की..*" …more ..
this tweet credit should go to@TishaAgarwal, I was not aware of its origin .. someone sent it to me , I thought it to be good and posted ..apologies 🙏🙏pic.twitter.com/6YAOKXdIxe
— Amitabh Bachchan (@SrBachchan)December 27, 2020

ಈ ಟ್ವೀಟ್​ಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ದೊಡ್ಡವರ ದೊಡ್ಡಗುಣ ಎಂದು ಅನೇಕ ಮಂದಿ ಟ್ವೀಟ್​ ಮಾಡಿದ್ದಾರೆ.
ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

ಸದಾ ಯೌವನ ಬಯಸಿರುವಿರಾ? ಹಾಗಿದ್ದರೆ ಮೈಮೇಲೆ ಹೆಬ್ಬಾವು ಬಿಟ್ಕೊಳಿ- ಈ ವಿಡಿಯೋ ನೋಡಿ

ಮತ ಎಣಿಸುತ್ತಲೇ ಕುಸಿದುಬಿದ್ದು ಮೈಸೂರಿನ ಚುನಾವಣಾಧಿಕಾರಿ ಸಾವು

VIDEO: ಮೈದಾನದೊಳಗೆ ನುಗ್ಗಿ ಪಂದ್ಯ ನಿಲ್ಲಿಸಿದ್ದ ನಾಯಿಯನ್ನೇ ದತ್ತು ಪಡೆದ ಫುಟ್ಬಾಲ್​ ಆಟಗಾರ

ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 4 =
Remember me
