ಮುಂಬೈ:ಖ್ಯಾತ ಬಾಲಿವುಡ್‌ ನಟರಾದ ದಿಲೀಪ್‌ ಕುಮಾರ್‌ ಹಾಗೂ ನಾಸಿರುದ್ದೀನ್‌ ಷಾ ಇಬ್ಬರ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನ್ಯುಮೋನಿಯಾದಿಂದ ಬಳಲುತ್ತಿರುವ ನಾಸಿರುದ್ದೀನ್​ ಷಾ ಶ್ವಾಸಕೋಶದಲ್ಲಿ ಪ್ಯಾಚ್​​ಗಳು ಕಂಡು ಬಂದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಸಿಟಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇಂದು ಬೆಳಗ್ಗೆ ನಿರ್ಮಾಪಕ ರಾಜ್​ ಕೌಶಲ್​ ಅವರು ಮೃತಪಟ್ಟಿದ್ದು, ಅದರ ಬೆನ್ನಲ್ಲೇ ಷಾ ಅವರ ಸಾವಿನ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು ರತ್ನಾ ಪಾಠಕ್​ ಶಾ ಆಸ್ಪತ್ರೆಯಲ್ಲೇ ತಂಗಿದ್ದಾರೆ.
ಅದೇ ಇನ್ನೊಂದೆಡೆ,ಇನ್ನೋರ್ವ ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್‌ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಅವರನ್ನು ಉಪ ನಗರದ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಜೂನ್ 6 ರಂದು ಕೂಡ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. 10 ದಿನ ಆಸ್ಪತ್ರೆಯಲ್ಲಿದ್ದ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು. ಇಂದು ಪುನಃ ಅವರಿಗೆ ಗಂಭೀರ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.
ಈ ಇಬ್ಬರೂ ನಟರು ಶೀಘ್ರದಲ್ಲಿ ಗುಣಮುಖರಾಗಿ ಬರಲೆಂದು ಜಾಲತಾಣದಲ್ಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಂದಹಾಎ ನಾಸಿರುದ್ದೀನ್‌ ಷಾ ಅವರಿಗೆ 70 ವರ್ಷದ ಹಾಗೂ ದಿಲೀಪ್‌ ಕುಮಾರ್‌ ಅವರಿಗೆ 98 ವರ್ಷ ವಯಸ್ಸು.
ಜಯಲಲಿತಾ ಜತೆಯಲ್ಲಿರೋದು ನಿರ್ಮಲಾ ಸೀತಾರಾಮನ್ನಾ? ವೈರಲ್‌ ಆಗ್ತಿರೋ ಫೋಟೋದ ಅಸಲಿಯತ್ತೇನು?

ಸುಳ್ಳು ರೇಪ್‌ ಕೇಸ್‌ನಲ್ಲಿ ಸಿಲುಕಿರೋ ಖ್ಯಾತ ನಟನ ಬದುಕು ಛಿದ್ರ ಛಿದ್ರ- ಕುಟುಂಬದಲ್ಲಿ ಸಾಲು ಸಾಲು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
